ಕರಾವಳಿ

ಮುದ್ರಿತ ಪೇಪರ್‌ನಲ್ಲಿ ಕಟ್ಟಿದ ಬೋಂಡಾ, ಬಜ್ಜಿ ಮನುಷ್ಯನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ ಯಾಕೆ..?

Pinterest LinkedIn Tumblr

ನೀವು ಪೇಪರ್‌ನಲ್ಲಿ ಸುತ್ತಿದ ಬೋಂಡಾ ಮತ್ತು ಇತರ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಸೇವಿಸುತ್ತಿದ್ದೀರಾ ಹಾಗಾದರೆ ಇನ್ನು ಎಚ್ಚರಿಕೆವಹಿಸಲೇಬೇಕು. ಯಾಕೆ ಎನ್ನುವ ಕಾರಣ ಇಲ್ಲಿದೆ ನೋಡಿ.

ಪೇಪರ್‌ ಪೊಟ್ಟಣದಲ್ಲಿ ಸುತ್ತಿದ ಯಾವುದೇ ಆಹಾರ ವಸ್ತುಗಳು ವಿಷಕಾರಿ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಖಾತ್ರಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.ಪೇಪರಿನಲ್ಲಿ ಸುತ್ತಿದ ಆಹಾರ ವಸ್ತುಗಳಿಗೆ ಮುದ್ರಣದ ಶಾಯಿ ಮತ್ತು ಇತರ ವಿಷಕಾರಿ ವಸ್ತುಗಳು ಸೇರಿಕೊಳ್ಳುತ್ತವೆ. ಅವುಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಅಪಾಯಕರ. ಅತ್ಯಂತ ಪರಿಶುದ್ಧವಾಗಿ ತಯಾರಿಸಿದ ಆಹಾರವಾದರೂ ಪೇಪರಿನಲ್ಲಿ ಸುತ್ತಿದರೆ ವಿಷಕಾರಿಯಾಗುತ್ತದೆ.

ಮುದ್ರಣ ಶಾಯಿಯಲ್ಲಿ ಅಪಾಯಕಾರಿ ಬಣ್ಣಗಳು, ಪಿಗ್‌ಮೆಂಟ್‌ಗಳು, ಬೈಂಡರ್‌ಗಳು, ಪ್ರಿಸರ್ವೇಟಿವ್ಸ್‌ ಮತ್ತು ಇತರ ವಿಷಯುಕ್ತ ವಸ್ತುಗಳಿರುತ್ತವೆ. ರಾಸಾಯನಿಕಗಳ ಸೇರ್ಪಡೆ ಜತೆಗೆ ರೋಗಕಾರಕ ಸೂಕ್ಷ್ಮ ಜೀವಿಗಳು ಕೂಡ ಮುದ್ರಿತ ಪೇಪರ್‌ನಲ್ಲಿ ಸೇರ್ಪಡೆಯಾಗಿರುತ್ತವೆ. ಅವುಗಳು ಮನುಷ್ಯನ ಆರೋಗ್ಯಕ್ಕೆ ತುಂಬಾ ಅಪಾಯಕಾರಿ.

ಪೇಪರ್‌, ಮರು ಸಂಸ್ಕರಿಸಿದ ಕಾಗದದಿಂದ ತಯಾರಿಸಿದ ಕಾರ್ಡ್‌ಬೋರ್ಡ್‌ ಪೆಟ್ಟಿಗೆಗಳಲ್ಲಿ ಥಾಲೇಟ್‌ನಂತಹ ಅಪಾಯಕಾರಿ ರಾಸಾಯನಿಕಗಳು ಸೇರಿಕೊಂಡಿರುತ್ತವೆ. ಅದು ಜೀರ್ಣಾಂಗ ವ್ಯವಸ್ಥೆಯನ್ನೇ ಹಾಳುಗೆಡವಬಹುದು. ವಯಸ್ಸಾದ ಹಿರಿಯರು, ಹದಿಹರಯದವರು, ಮಕ್ಕಳು ಮತ್ತು ಆರೋಗ್ಯ ಸಮಸ್ಯೆಯುಳ್ಳ ಇತರರು ಇಂತಹ ಆಹಾರ ಸೇವನೆಯಿಂದ ಕ್ಯಾನ್ಸರ್‌ಗೆ ಗುರಿಯಾಗುವ ಅಪಾಯ ಹೆಚ್ಚು.

Comments are closed.