ಕರಾವಳಿ

ನಮ್ಮ ಧರ್ಮದಲ್ಲಿ ಉಪ್ಪಿಗೆ ಪೂಜ್ಯ ಹಾಗು ಪ್ರಧಾನ ಸ್ಥಾನ ಯಾಕೆ…?

Pinterest LinkedIn Tumblr

ಹೌದು ಮನೆಯಲ್ಲಿ ಕೆಲವು ವಸ್ತು ಪ್ರಕಾರ ಇದ್ದರೆ ಮನೆಗೆ ಒಂದು ಕಳೆ ಮತ್ತು ಮನೆಯವರಿಗೂ ಒಳ್ಳೆಯದು ಅದೇ ರೀತಿ ಮನೆಯಲ್ಲಿ ಅತಿ ಮುಖ್ಯವಾದ ಜಾಗ ಎಂದರೆ ಅದು ಅಡುಗೆ ಮನೆ, ಯಾಕೆಂದರೆ ಮನೆಯವರ ಹಸಿವನ್ನ ನೀಗಿಸುವ ಕೆಲಸವನ್ನ ಮಾಡುತ್ತದೆ, ಇನ್ನು ನಮ್ಮ ಹಿಂದೂ ಧರ್ಮದ ಪ್ರಕಾರ ಅಥವಾ ವಾಸ್ತು ಶಾಸ್ತ್ರವು ಹೇಳುವಂತೆ ಅಡುಗೆಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುಗಳಿಗೆ ಅದರದೇ ಆದ ಸ್ಥಳಗಳನ್ನು ನಿಗದಿ ಪಡಿಸಲಾಗಿದೆ ಅದರಂತೆ ಇಂದು ನಾವು ನಿಮಗೆ ಯಾವ ವಸ್ತುಗಳನ್ನ ಯಾವ ಸ್ಥಳದಲ್ಲಿ ಇಡಬೇಕು ಎಂಬುದನ್ನ ವಿವರಿಸುತ್ತೇವೆ.

ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆ ಅಗ್ನಿ ಸ್ಥಾನದ ಆಗ್ನೇಯ ಭಾಗದಲ್ಲಿ ಇರಬೇಕು ಹಾಗು ಅಡುಗೆ ಮಾಡುವ ಅಡುಗೆ ಮನೆಯ ಕಟ್ಟೆಗಳನ್ನ ಪೂರ್ವ ಹಾಗು ಪಶ್ಚಿಮ ಗೋಡೆಗಳಿಗೆ ತಗುಲದಂತೆ ಇಟ್ಟು ಕೊಳ್ಳಬೇಕು ಮತ್ತು ಒಲೆಯನ್ನು ಮನೆಗೆ ಬಂದ ಇತರರಿಗೆ ಕಾಣದಂತೆ ಇಡಬೇಕು.

ಒಲೆಗಳಿಗೆ ಅತ್ತಿರವಾಗಿ ಕೊಳವೆಗಳು ಅಥವಾ ಆಯುಧಗಳು ಇರಬಾರದಂತೆ, ಆಗ್ನೇಯ ದಿಕ್ಕಿನಲ್ಲಿ ನೀರಿನ ಉಪಯೋಗ ಎಷ್ಟು ಕಡಿಮೆ ಮಾಡಿದರು ಅಷ್ಟು ಒಳ್ಳೆಯದು, ಹಾಗು ನೀರಿನ ದುರುಪಯೋಗ ಮಾಡಿದರೆ ಆರ್ಥಿಕ ಸಮಸ್ಯೆ ಕಾಡುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

ಅಗ್ನಿ ಮತ್ತು ನೀರು ಎರಡು ಪರಸ್ಪರ ವಿರುದ್ಧ ಪದಾರ್ಥಗಳು ಅಡುಗೆ ಮನೆಯಲ್ಲಿ ಪಾತ್ರೆ ಜೋಡಿಸುವ ಅಲ್ಮೇರಾ ಇದ್ದರೆ ಅದರ ಮೇಲೆ ಹೆಚ್ಚು ಬಾರವನ್ನ ಇಡಬಾರದು, ಮುಖ್ಯವಾಗಿ ಅಗ್ನಿ ಹಾಗು ನೀರಿನ ಸಂಭಂದ ಪಟ್ಟು ವಸ್ತುವನ್ನ ಆದಷ್ಟು ದೂರವಿಟ್ಟರೆ ಒಳ್ಳೆಯದು.

ಉಪ್ಪು ಹಾಗು ಅರಿಶಿನ ಅಡುಗೆಗೆ ಬಳಸುವ ಪ್ರದಾನ ವಸ್ತುಗಳು, ಯಾವುದೇ ಆಹಾರ ತಯಾರಿಕೆಗು ಉಪ್ಪು ಹಾಗು ಅರಿಶಿನದ ಅಗತ್ಯ ಹೆಚ್ಚು, ಉಪ್ಪು ಆಹಾರಕ್ಕೆ ರುಚಿಯನ್ನ ಕೊಟ್ಟರೆ ಅರಿಶಿನ ಆಹಾರಕ್ಕೆ ಬಣ್ಣ ಮತ್ತು ಔಷದಿಯ ಗುಣವನ್ನು ನೀಡಿ ಆರೋಗ್ಯವನ್ನ ನೀಡುತ್ತದೆ, ಉಪ್ಪಿಗೆ ನಮ್ಮ ಧರ್ಮದಲ್ಲಿ ಮುಖ್ಯ ಸ್ಥಾನವಿದ್ದು ಪೂಜ್ಯ ಹಾಗು ಪ್ರಧಾನ ಸ್ಥಾನದಲ್ಲಿ ಗೌರವಿಸುತ್ತಾರೆ.

ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಉಪ್ಪು ಮತ್ತು ಅರಿಶಿಣವನ್ನ ಜಾಗೂರು ಕತೆಯಿಂದ ಶೇಖರಿಸಿ ಇಡುವ ಪದ್ದತಿಯನ್ನ ಅನುಸರಿಕೊಂಡು ಬಂದಿದ್ದಾರೆ, ಕಾರಣ ಉಪ್ಪು ಕೆಳಗೆ ಚಲ್ಲಿದಾಳೆ ಮನೆಯಲ್ಲಿ ಕಿರಿ ಕಿರಿ ಅಥವಾ ಜಗಳ ನಡೆಯುತ್ತದೆ ಎಂಬ ನಂಬಿಕೆ ಸಹ ಇದೆ, ಅದರಂತೆ ಮನೆಯಲ್ಲಿ ಉಪ್ಪು ಕಳ್ಳತನವಾದರೆ ಮನೆಯಿಂದ ಲಕ್ಷ್ಮಿ ಹೊರಹೋದಂತೆ ಎಂದು ಹೇಳುತ್ತಾರೆ.

ಉಪ್ಪು ಮತ್ತು ಅರಿಶಿಣವನ್ನ ಒಂದೇ ಕಡೆ ಭದ್ರಪಡಿಸಿ ಇಡಬಾರದು ಹೀಗೆ ಇಟ್ಟರೆ ದರಿದ್ರ ನಿಮ್ಮನ್ನ ಹುಡುಕಿ ಕೊಂಡು ಬರುತ್ತದೆಯಂತೆ ಹಾಗು ಮನೆಯಲ್ಲಿ ಆರ್ಥಿಕ ಸಮಸ್ಯೆ ಹಾಗು ಇನ್ನಿತರ ಸಮಸ್ಯೆಗಳು ಕಾಣಿಕೊಳ್ಳುತ್ತದೆಯಂತೆ.ಆದ್ದರಿಂದ ನೀವು ಜವಾಬ್ದಾರಿಯಿಂದ ಇಷ್ಟು ವಿಷಯಗಳನ್ನ ನಿಮ್ಮ ಮನೆಯಲ್ಲಿ ಪಾಲಿಸಿದರೆ ಬಡತನ ತೊಲಗಿ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.

Comments are closed.