ಕರಾವಳಿ

ವಾಕಿಂಗ್ ಹೋಗುತ್ತಿದ್ದ ವೃದ್ಧನನ್ನು ಕಿಡ್ನಾಪ್ ಮಾಡಿ ದೋಚಿದ ದುಷ್ಕರ್ಮಿಗಳು

Pinterest LinkedIn Tumblr

ಉಡುಪಿ: ಮುಂಜಾನೆ ವೇಳೆ ವಾಕಿಂಗ್ ಹೋಗುತ್ತಿದ್ದ ವೃದ್ಧರೋರ್ವರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿ ಚಿನ್ನಾಭರಣ ದೋಚಿದ ಘಟನೆ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಣಿಪಾಲ ಲಕ್ಷೀಂದ್ರನಗರದ ಶಿವಳ್ಳಿ ನಿವಾಸಿ ವಿಜಯ್ ಕುಮಾರ್ ಎ ಎಸ್. (65) ಬೆಳಿಗ್ಗೆ 4 ಗಂಟೆಗೆ ವಾಕಿಂಗ್‌ ಮಾಡಲು ಮನೆಯಿಂದ ಹೊರಟು ಉಡುಪಿ ಎಮ್.ಜಿ.ಎಮ್ ಕಾಲೇಜಿನವರೆಗೆ ಹೋಗಿ ವಾಪಾಸು ಲಕ್ಷ್ಮೀಂದ್ರನಗರಕ್ಕೆ ನಡೆದುಕೊಂಡು ಬರುತ್ತಿರುವಾಗ ಬೆಳಿಗ್ಗೆ 4:45 ಗಂಟೆಗೆ ಉಡುಪಿ ಕಡೆಯಿಂದ ಒಂದು ಓಮಿನಿ ಕಾರ್‌ ವಿಜಯ್ ಕುಮಾರ್ ಬಳಿ ನಿಲ್ಲಿಸಿ ಅದರಲ್ಲಿದ್ದ ಒಬ್ಬ ವ್ಯಕ್ತಿ ವಿಜಯರನ್ನು ಏಕಾಎಕಿಯಾಗಿ ಕಾರಿನ ಒಳಗೆ ಎಳೆದು ಹಾಕಿದ್ದು, ಕಾರಿನಲ್ಲಿದ್ದ ಇತರೆ 6 ಮಂದಿ ಮುಸುಕುಧಾರಿಗಳು ಕಣ್ಣಿಗೆ, ಬಾಯಿಗೆ ಮತ್ತು ಕೈಗೆ ಪ್ಲಾಸ್ಟಿಕ್‌ ಟೇಪನ್ನು ಅಂಟಿಸಿ, ಕೈಯಿಂದ ಗುದ್ದಿ, ವಿಜಯ್ ಕುಮಾರ್ ಪ್ಯಾಂಟಿನ ಕಿಸೆಯಲ್ಲಿದ್ದ 120 ರೂಪಾಯಿಯನ್ನು ಹಾಗೂ ಕೈಬೆರಳಲ್ಲಿ ಇದ್ದ ಸುಮಾರು 50,000 ರೂಪಾಯಿ ಮೌಲ್ಯದ 2 ಚಿನ್ನದ ಉಂಗುರಗಳನ್ನು ಬಲತ್ಕಾರವಾಗಿ ಕಸಿದುಕೊಂಡು ಬಳಿಕ ಉಡುಪಿ ಮಂಗಳೂರು ಮುಖ್ಯರಸ್ತೆಯ ಕಿನ್ನಿಮೂಲ್ಕಿ ಎಂಬಲ್ಲಿ ಬಿಟ್ಟುಹೋಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.