ಕರಾವಳಿ

ಟೀ, ಕಾಫೀ ಕುಡಿಯುವ ಬದಲು ಈ ಜ್ಯುಸ್ ಕುಡಿವುದರಿಂದ ಸಿಗುವುದು ಹಲವು ಆರೋಗ್ಯಕರ ಲಾಭ..!

Pinterest LinkedIn Tumblr

ಹೌದು ಪ್ರತಿ ದಿನ ಬೆಳಗ್ಗೆ ಟೀ ಕಾಫೀ ಕುಡಿಯುವ ಬದಲು ಈ ನಿಂಬೆ ರಸವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಹಲವಾರು ಆರೋಗ್ಯಕಾರಿ ಲಾಭಗಳು ಸಿಗುತ್ತವೆ.

ತೂಕ ಇಳಿಕೆಗೆ ಸಹಾಯಕಾರಿ:ಹೌದು ನಿಂಬು ನೀರಿಗೆ ಒಂದು ಚಮಚ ಜೇನುತುಪ್ಪ ಹಾಕಿ ಸೇವಿಸುವುದರಿಂದ ದೇಹದಲ್ಲಿರುವ ಕೊಬ್ಬು ಕರಗುತ್ತದೆ ಜೊತೆಗೆ ಜೀರ್ಣಕ್ರಿಯೆಯೂ ಸರಿಯಾಗಿ ನಡೆಯುವುದರಿಂದ ನಮ್ಮ ದೇಹದ ತೂಕ ಕಡಿಮೆ ಮಾಡುತ್ತದೆ ಮತ್ತು ನಮ್ಮ ದೇಹದ ತೂಕವನ್ನು ಸಮತೋಲನದಲ್ಲಿಡಲು ಸಹಾಯಕಾರಿಯಾಗುತ್ತದೆ

ತ್ವಚೆಯ ಆರೋಗ್ಯಕ್ಕೆ ಉತ್ತಮ: ನಿಂಬೆಹಣ್ಣಿನಲ್ಲಿ ಪೊಟ್ಯಾಶಿಯಮ್​, ಕ್ಯಾಲ್ಶಿಯಮ್​, ಮ್ಯಾಗ್ನೇಶಿಯಮ್​ ನಂತಹ ಮಿನರಲ್ಸ್​ಗಳಿವೆ. ಇವು ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ಆಗುವಂತೆ ಮಾಡಿ ಉತ್ತಮ ಸ್ಕಿನ್​ ಸೆಲ್ಸ್​ಗಳನ್ನು ಒದಗಿಸುತ್ತದೆ.

ಸಂಧಿ ವಾತ ನಿವಾರಿಸುತ್ತದೆ: ಪ್ರತಿನಿತ್ಯ ಬೆಳಗ್ಗೆ ನಿಂಬು ನೀರು ಸೇವಿಸುವುದರಿಂದ ಮಸಲ್ಸ್​ ಪೇನ್​, ಸಂಧಿವಾತ ​ಕ್ರಮೇಣ ಕಡಿಮೆಯಾಗುತ್ತದೆ.

ಲೀವರ್​ಗೆ ಉತ್ತಮ: ಬಿಸಿ ನೀರಿಗೆ ನಿಂಬು ರಸ ಸೇರಿಸಿ ಹಸಿದ ಹೊಟ್ಟೆಯಲ್ಲಿ ಸೇವಿಸುವುದರಿಂದ ಲೀವರ್​ ಎಲ್ಲಾ ಕಲ್ಮಶಗಳಿಂದ ಸ್ವಚ್ಛಗೊಳ್ಳುತ್ತದೆ. ಜೊತೆಗೆ ಅನಾರೋಗ್ಯಕರಿ ಆಹಾರ ಸೇವನೆಯ ಪದ್ಧತಿಯ ಕಾರಣ ದೇಹದಲ್ಲಿ ಶೇಖರಣೆಗೊಂಡ ಟಾಕ್ಸಿಕ್​ ಅಂಶಗಳನ್ನು ತೆಗೆದುಹಾಕಿ, ಲೀವರ್​ ಆರೋಗ್ಯವನ್ನು ಕಾಪಾಡುತ್ತದೆ.

ಚೈತನ್ಯ ನೀಡುತ್ತದೆ: ಬೆಳಗ್ಗೆ ಎದ್ದು ಬಿಸಿ ನೀರಿಗೆ ನಿಂಬೆ ರಸ ಸೇರಿಸಿ ಸೇವಿಸಿದರೆ ದಿನಪೂರ್ತಿ ಯಾವುದೇ ಆಯಾಸವಿಲ್ಲದೆ ಆ್ಯಕ್ಟೀವ್​ ಆಗಿರಲು ಸಹಾಯಮಾಡುತ್ತದೆ.

ಇಮ್ಯುನಿಟಿಯನ್ನು ಹೆಚ್ಚಿಸುತ್ತದೆ: ನಿಂಬೆಹಣ್ಣಿನಲ್ಲಿರುವ ವಿಟಮಿನ್​ ಸಿ ಅಂಶ ಸಾಮಾನ್ಯ ಜ್ವರ, ಶೀತದಿಂದ ದೇಹವನ್ನು ರಕ್ಷಿಸುತ್ತದೆ. ಜೊತೆಗೆ ರೋಗ ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಿಸುತ್ತದೆ: ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಪ್ರತಿದಿನ ಬೆಳಗ್ಗೆ ಒಂದು ಲೋಟ ಬಿಸಿ ನೀರಿಗೆ ಒಂದು ನಿಂಬೆ ಹಣ್ಣಿನ ರಸವನ್ನು ಬೆರೆಸಿ ಕುಡಿಯುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದಾಗಿದೆ.

Comments are closed.