ಕರಾವಳಿ

ಟೋಲ್ ಕಂಪನಿ ದಬ್ಬಾಳಿಕೆ ಅತಿಯಾಯ್ತು: ಎಂ.ಎಲ್.ಸಿ. ಕೋಟ ಆಕ್ರೋಶ

Pinterest LinkedIn Tumblr

ಉಡುಪಿ: ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಟೋಲ್ ಕಂಪನಿಯಿಂದ ದಬ್ಬಾಳಿಕೆ ಅತಿಯಾಯ್ತು. ಟೋಲ್‌ನ ಅಂಚಿನಲ್ಲಿ ಬರುವ ಪೇಟೆಯೇ ಇಬ್ಬಾಗವಾಗಿ ಒಂದೇ ಗ್ರಾಮದ ಜನರು ತಿರುಗಾಡಲು ಕಡ್ಡಾಯ ಟೋಲ್ ಕೊಡಬೇಕಾದ ಸ್ಥಿತಿಗೆ ಗುತ್ತಿಗೆದಾರ ಕಂಪೆನಿ ತಂದು ಬಿಟ್ಟಿದೆಯೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮೇಲುಸ್ತುವಾರಿ ನಡೆಸುವ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೃಷ್ಣ ರೆಡ್ಡಿಯವರು ಕನಿಷ್ಠ  10 ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ವಾಹನ ಮಾಲಕರಿಗೆ ರಿಯಾಯಿತಿ ಕೊಡುವ ಬರವಸೆ ನೀಡಿದ್ದರೂ ಜಿಲ್ಲೆಯಲ್ಲಿ ಟೋಲ್ ಗೇಟ್ ಬಗ್ಗೆ ಸರಕಾರಕ್ಕೆ ನಿಯಂತ್ರಣವಿಲ್ಲ.

ಟೋಲ್ ವಿರುದ್ದ ನ್ಯಾಯಕ್ಕಾಗಿ ಹೋರಟ ಮಾಡುವ ಪ್ರತಿಭಟನಾಕಾರರು ಸೊಲ್ಲೆತ್ತುವ ಮೊದಲೇ ಬಂದಿಸಲಾಗುತ್ತದೆ. ಗುತ್ತಿಗೆದಾರರ ಮೇಲೆ ನಿಯಂತ್ರಣವಿಲ್ಲವೆಂದು ಜಿಲ್ಲಾಡಳಿತ ಕೈ ಚೆಲ್ಲಿದರೆ ಪೋಲೀಸ್ ಪಹರೆಯ ಅಗತ್ಯವೇನೆಂದು ಆಕ್ಷೇಪಿಸಿದ್ದಾರೆ. ತಕ್ಷಣ ಕನಿಷ್ಠ ಸ್ಥಳೀಯ ೨೦ ಕೀ.ಮಿ ವ್ಯಾಪ್ತಿಯಲ್ಲಿಯಾದರೂ ವಾಹನ ಮಾಲಿಕರಿಗೆ ರಿಯಾಯಿತಿ ಕೊಡದಿದ್ದರೆ ಪ್ರತಿಭಟನಾಕಾರರಿಗೆ ಜನಪ್ರತಿನಿಧಿಗಳೆಲ್ಲಾ ಬೆಂಬಲ ಕೊಡುವುದಾಗಿ ಕೋಟಾ ಎಚ್ಚರಿಸಿದ್ದಾರೆ.

Comments are closed.