ಕರಾವಳಿ

ಕಾರ್ಕಳ: ಕಚೇರಿಗೆ ನುಗ್ಗಿ ನ್ಯಾಯವಾದಿಗೆ ಬೆದರಿಕೆ

Pinterest LinkedIn Tumblr

ಉಡುಪಿ: ನಗರದ ಅನಂತಶಯನ ಕೋರ್ಟ್‌ ರಸ್ತೆಯ ತನ್ನ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಆಗಮಿಸಿದ ಐವರ ತಂಡ ನ್ಯಾಯವಾದಿ ನೇಮಿರಾಜ್‌ ಪಾಂಡಿ (82) ಅವರಿಗೆ ಬೆದರಿಕೆ ಒಡ್ಡಿರುವ ಘಟನೆ ಸಂಭವಿಸಿದೆ.

ಕೃಷ್ಣ ಬಿಲ್ಡಿಂಗ್‌ನ ಒಂದನೇ ಮಹಡಿಯಲ್ಲಿ ನೇಮಿರಾಜ್‌ ಪಾಂಡಿ ಅವರು ಪುತ್ರಿ ಹಾಗೂ ಸಹಾಯಕ ನ್ಯಾಯವಾದಿ ಜತೆ ಕೆಲಸ ನಿರ್ವಹಿಸುತ್ತಿದ್ದಾಗ ಆಗಮಿಸಿದ ಶ್ರೀಕಾಂತ್‌ ಜೈನ್‌, ಯಶೋಧರ ಅತಿಕಾರಿ, ವಿಜಯ, ಶ್ರೀಶಾ ಅತಿಕಾರಿ, ರಂಜಿತ್‌ ಜೈನ್‌ ಬೆದರಿಕೆ ಒಡ್ಡಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಸ್ವಾಧೀನದಲ್ಲಿದ್ದ ಜಾಗ ನೀಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ ಎಂದು ನೇಮಿರಾಜ್‌ ಪಾಂಡಿ ದೂರಿನಲ್ಲಿ ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.