ಕರಾವಳಿ

ಅರಿಶಿನ ಕೊಂಬು, ಬಲಿತ ಎಕ್ಕದ ಬೇರಿನಿಂದ ಬಿಳಿತೊನ್ನು ನಿವಾರಣೆ ಸಾಧ್ಯ

Pinterest LinkedIn Tumblr

ಹೌದು ಬಿಳಿತೊನ್ನು ರೋಗಕ್ಕೆ ಈ ಬಿಳಿ ಎಕ್ಕೆ ಗಿಡ ರಾಮಬಾಣವಂತೆ ಅದು ಹೇಗೆ ಎಂಬುದು ಎಷ್ಟೋ ಜನಕ್ಕೆ ಗೊತ್ತಿಲ್ಲಾ ಅದು ಹೇಗೆ ಇಂಬುದು ಇಲ್ಲಿದೆ ನೋಡಿ.

ಬಿಳಿ ತೊನ್ನುರೋಗಕ್ಕೆ:ಬಲಿತ ಅರಿಶಿನ ಕೊಂಬು ಮತ್ತು ಬಲಿತಎಕ್ಕದ ಬೇರನ್ನುತಣ್ಣೀರಿನಲ್ಲಿ ತೇದು ತೊನ್ನಿರುವ ಸ್ಥಳದಲ್ಲಿ ಹಚ್ಚುವುದು. ಶರೀರದ ಸ್ವಲ್ಪ ಭಾಗದಲ್ಲಿ ಪ್ರಥಮವಾಗಿ ಲೇಪಿಸುವುದು. ಗುಣ ಕಂಡ ಮೇಲೆ ಚಿಕಿತ್ಸೆಯನ್ನು ಮುಂದುವರಿಸುವುದು.

ಕಾಲಾರಾ ಬೇನೆಯಲ್ಲಿ: ಎಕ್ಕದ ಬೇರಿನತೊಗಟೆ ಮತ್ತು ಮೆಣಸಿನ ಕಾಳು ಸಮತೂಕ ನುಣ್ಣಗೆ ಚೂರ್ಣಮಾಡಿ, ಹಸಿರು ಶುಂಠಿರಸದಲ್ಲಿ ಮರ್ದಿಸಿ ಕಡಲೆಗಾತ್ರ ಗುಳಿಗೆಯನ್ನು ಮಾಡಿ ನೆರಳಲ್ಲಿ ಒಣಗಿಸುವುದು.ಪ್ರತಿ ಎರಡು ತಾಸಿಗೊಮ್ಮೆ ಒಂದೊಂದು ಗುಳಿಗೆಯನ್ನು ನೀರಿನೊಂದಿಗೆ ಸೇವಿಸುವುದು.

ಚೇಳಿನ ವಿಷಕ್ಕೆ: ಹಿಂಗನ್ನುಎಕ್ಕದ ಹಾಲಿನಲ್ಲಿತೇದು ಚೇಳು ಕುಟುಕಿರುವ ಜಾಗದಲ್ಲಿ ಹಚ್ಚುವುದು.

ಉದರ ಬೇನೆ, ಅಜೀರ್ಣದಲ್ಲಿ: ಇನ್ನೊ ಬಿರಿಯದಿರುವ 20 ಮೊಗ್ಗುಗಳನ್ನು ತಂದು ಶುಂಠಿ ,ಓಮದ ಕಾಳು ಮತ್ತು ಕರಿಯ ಲವಣವನ್ನು ಸಮಪ್ರಮಾಣದಲ್ಲಿ ಸೇರಿಸಿ, ಶುದ್ಧ ನೀರಿನಲ್ಲಿ ಅರೆದು ಕಡಲೆಗಾತ್ರ ಗುಳಿಗೆಗಳನ್ನು ಮಾಡಿ ನೆರಳಿನಲ್ಲಿ ಒಣಗಿಸುವುದು. ದಿವಸಕ್ಕೆ ಎರಡು ಸಾರಿಒಂದೊಂದು ಮಾತ್ರೆಯನ್ನು ಸೇವಿಸಿ ನೀರುಕುಡಿಯುವುದು.

ವಾಯು ನೋವುಗಳಿಗೆ: ಎಕ್ಕದ ಎಲೆಯರಸ 20 ಗ್ರಾಂ, ಬೊಂತೆ ಕಳ್ಳಿ ರಸ 20ಗ್ರಾಂ, ಲಕ್ಕಿ ಎಲೆ ರಸ, 20 ಗ್ರಾಂ, ಉಮ್ಮತ್ತಿ ಎಲೆ ರಸ 20 ಗ್ರಾಂ, ಹಸುವಿನ ಹಾಲು 60ಮಿ, ಲಿ. ಎಳ್ಳಣ್ಣೆ 120 ಗ್ರಾಂ ಸೇರಿಸಿ ಕಾಯಿಸುವಾಗ, ರಾಸ್ಮಿ, ವಿಳಂಗ, ದೇವದಾರು, ಗಜ್ಜುಗದ ತಿರುಳು ಪುಡಿ ಎರಡೆರಡು ಟೀ ಚಮಚ ಹಾಕಿ ಇಳಿಸುವಾಗ 20 ಗ್ರಾಂ ಆರತಿ ಕರ್ಪೂರ ಹಾಕುವುದು. ತಣ್ಣಗಾದ ಮೇಲೆ ಕೀಲು, ಕಾಲು ನೋವುಗಳಿಗೆ ಹಚ್ಚುವುದು

Comments are closed.