ಕರಾವಳಿ

ಡಬಲ್(ಗಲ್ಲ)ಚಿನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಅನುಸರಿಸಬೇಕಾದ ಕೆಲವು ವಿಧಾನ

Pinterest LinkedIn Tumblr

ಹೆಣ್ಣಾಗಲಿ, ಗಂಡಾಗಲಿ ಮುಖ ಸುಂದರವಾಗಿ ಕಾಣಿಸಬೇಕೆಂದರೆ ಅದರಲ್ಲಿ ಎಲ್ಲಾ ಭಾಗಗಳು ಸರಿಯಾಗಿ ಇರಬೇಕು. ಯಾವುದೇ ಭಾಗ ಸರಿ ಇಲ್ಲ ಎಂದರೆ ಮುಖ ನೋಡಲು ಚೆನ್ನಾಗಿರಲ್ಲ. ಈ ಕ್ರಮದಲ್ಲಿ ದವಡೆ ಕೆಳಗೆ ಇರುವ ಗಲ್ಲ ಸಹ ಮುಖದ ಆಕಾರದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸಾಮಾನ್ಯವಾದ ಗಲ್ಲ ಆದರೆ ಪರವಾಗಿಲ್ಲ. ಆದರೆ ಕೆಲವರಿಗೆ ಡಬಲ್ ಚಿನ್ ಇರುತ್ತದೆ. ಅಂದರೆ ಗಲ್ಲದ ಕೆಳಗೆ ಇನ್ನೊಂದು ಗಲ್ಲ ಎರಡಾಗಿ ಇರುತ್ತದೆ. ಕೆಲವರಿಗೆ ಅದು ಸಾಗಿದಂತೆ ದೊಡ್ಡದಾಗಿರುತ್ತದೆ. ಈ ರೀತಿ ಇದ್ದರೆ ನೋಡಲು ಅಷ್ಟು ಚೆನ್ನಾಗಿರಲ್ಲ. ಕೆಲವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ ಆ ರೀತಿಯ ನೋವಿಲ್ಲದೆ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿದರೆ ಸಾಕು ಡಬಲ್ ಚಿನ್ ದೂರ ಮಾಡಿಕೊಳ್ಳಬಹುದು. ಅದೇಗೆ ಅಂತ ಈಗ ತಿಳಿದುಕೊಳ್ಳೋಣ.

ಶುಗರ್ ಫ್ರೀ ಚ್ಯೂಯಿಂಗ್ ಗಮ್ಸ್
ಚ್ಯೂಯಿಂಗ್ ಗಮ್ಸ್ ಜಗಿಯುವುದರಿಂದ ಬಾಯಿ, ದವಡೆಗೆ ಉತ್ತಮ ವ್ಯಾಯಾಮವಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಸಾಮಾನ್ಯವಾಗಿ ಚ್ಯೂಯಿಂಗ್ ಗಮ್ಸ್ ಅಲ್ಲದೆ ಶುಗರ್ ಫ್ರೀ ಚ್ಯೂಯಿಂಗ್ ಗಮ್ಸ್ ಜಗಿಯಬೇಕು. ನಿತ್ಯ ಕನಿಷ್ಟ 4,5 ಸಲ ಹಾಗೆ ಚ್ಯೂಯಿಂಗ್ ಗಮ್ ಜಗಿದರೆ ಕೆಲವು ದಿನಗಳಲ್ಲೇ ಡಬಲ್ ಚಿನ್ ಸಮಸ್ಯೆ ದೂರವಾಗುತ್ತದೆ. ಶುಗರ್ ಫ್ರೀ ಚ್ಯೂಯಿಂಗ್ ಗಮ್ಸ್ ನಿಂದ ನಮಗೆ ಹೆಚ್ಚಿನ ಕ್ಯಾಲರಿಗಳೂ ಸಹ ಸೇರಲ್ಲ.

ಕೋಕೋವಾ ಬಟರ್
ಸ್ವಲ್ಪ ಕೋಕೋವಾ ಬಟರ್ ತೆಗೆದುಕೊಂಡು ಹೆಂಚಿನ ಮೇಲೆ ಬಿಸಿ ಮಾಡಬೇಕು. ಅದನ್ನು ಕುತ್ತಿಗೆ, ಗಲ್ಲದ ಮೇಲೆ ಮಸಾಜ್ ಮಾಡಬೇಕು. ಹೀಗೆ ನಿತ್ಯ ಕನಿಷ್ಟ ಎರಡು ಸಲ ಮಾಡಿದರೂ ಉತ್ತಮ ಫಲಿತಾಂಶ ಪಡೆಯಬಹುದು.

ವೀಟ್ ಜರ್ಮ್ ಆಯಿಲ್
ವೀಟ್ ಜರ್ಮ್ ಆಯಿಲ್ (ಮಾರುಕಟ್ಟೆಯಲ್ಲಿ ದೊರೆಯುತ್ತದೆ) ತೆಗೆದುಕೊಂಡು ಸ್ವಲ್ಪ ಆ ಎಣ್ಣೆಯನ್ನು ಕುತ್ತಿಗೆ, ಗಲ್ಲದ ಭಾಗಗಳಿಗೆ ನಿತ್ಯ ಒಮ್ಮೆ 15 ರಿಂದ 20 ನಿಮಿಷಗಳ ಕಾಲ ಮಸಾಜ್ ಮಾಡಬೇಕು.

ಗ್ಲಿಜರಿನ್
ಒಂದು ಟೇಬಲ್ ಸ್ಫೂನ್ ಗ್ಲಿಜರಿನ್, ಅರ್ಧ ಟೇಬಲ್ ಸ್ಫೂನ್ ಎಪ್ಸಂ ಸಾಲ್ಟ್, ಕೆಲವು ಹನಿ ಪೆಪ್ಪರ್ ಮಿಂಟ್ ಆಯಿಲ್ ತೆಗೆದುಕೊಂಡು ಚೆನ್ನಾಗಿ ಬೆರೆಸಿ ಪೇಸ್ಟ್ ತರಹ ಮಾಡಿಕೊಳ್ಳಬೇಕು. ಇದನ್ನು ಕಾಟನ್ ಬಾಲ್ಸ್ ಸಹಾಯದಿಂದ ಗಲ್ಲಕ್ಕೆ ಅಪ್ಲೈ ಮಾಡಬೇಕು. ಹೀಗೆ ವಾರಕ್ಕೆ 3 ರಿಂದ 5 ಸಲ ಮಾಡಬಹುದು. ಇದರಿಂದ ಡಬಲ್ ಚಿನ್ ನಿವಾರಣೆಯಾಗುತ್ತದೆ.

ಗ್ರೀನ್ ಟೀ
ಅಧಿಕ ತೂಕವನ್ನು, ಕೊಬ್ಬನ್ನು ಕರಗಿಸುವುದಷ್ಟೇ ಅಲ್ಲದೆ ಗ್ರೀ ಟೀ ಡಬಲ್ ಚಿನ್ ಸಮಸ್ಯೆಯನ್ನೂ ದೂರ ಮಾಡುತ್ತದೆ. ನಿತ್ಯ ಒಂದು ಕಪ್ ಗ್ರೀ ಟೀ ಕುಡಿಯುತ್ತಿದ್ದರೆ ಕೆಲವು ದಿನಗಳಲ್ಲೇ ಡಬಲ್ ಚಿನ್ ಸಮಸ್ಯೆ ನಿವಾರಣೆಯಾಗುತ್ತದೆ.

ವಿಟಮಿನ್ ಇ
ಬಾದಾಮಿ, ಮೊಟ್ಟೆ, ವಾಲ್‌ನಟ್ಸ್, ಆಲೀವ್ ಆಯಿಲ್, ಸೌತೆ, ಬೇಬಿ ಕಾರ್ನ್, ಪಾಲಾಕ್, ಸ್ಟ್ರಾಬೆರಿ, ಮೊಳಕೆ ಬೀಜ ಇತ್ಯಾದಿಯನ್ನು ಆಹಾರದ ಭಾಗವಾಗಿ ತೆಗೆದುಕೊಳ್ಳಬೇಕು. ಇದರಿಂದ ದೇಹಕ್ಕೆ ಅಗತ್ಯವಿರುವ ವಿಟಮಿನ್ ಇ ಲಭ್ಯವಾಗುತ್ತದೆ. ಇದರಿಂದ ಡಬಲ್ ಚಿನ್ ಸಮಸ್ಯೆ ಬರಲ್ಲ.

ಹಾಲು
ಸ್ವಲ್ಪ ಹಾಲನ್ನು ತೆಗೆದುಕೊಂಡು ಕುತ್ತಿಗೆ, ಗಲ್ಲದ ಮೇಲೆ ಹಚ್ಚಬೇಕು. ಆ ಬಳಿಕ ಸ್ವಲ್ಪ ಸಮಯ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು. ಹೀಗೆ ನಿತ್ಯ 2 ಸಲ ಮಾಡಿದರೆ ಸ್ವಲ್ಪ ದಿನಗಳಲ್ಲೇ ಡಬಲ್ ಚಿನ್ ಹೋಗುತ್ತದೆ.

ಕರಬೂಜ
ಕರಬೂಜ ಹಣ್ಣಿನ ಜ್ಯೂಸ್ ಮಾಡಿ, ಅದನ್ನು ಕುತ್ತಿಗೆ, ಗಲ್ಲದ ಮೇಲೆ ಹಚ್ಚಬೇಕು. ಆ ಬಳಿಕ 15 ನಿಮಿಷಗಳ ಬಳಿಕ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಸಹ ಡಬಲ್ ಚಿನ್ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಕರಬೂಜ ಹಣ್ಣನ್ನು ಆಹಾರದ ಭಾಗವಾಗಿ ತೆಗೆದುಕೊಂಡರೂ ಫಲಿತಾಂಶ ಸಿಗುತ್ತದೆ.

ಮೇಲೆ ತಿಳಿಸಿದ ಟಿಪ್ಸ್ ಜತೆಗೆ ಕೆಲವು ವ್ಯಾಯಾಮವನ್ನು ನಿತ್ಯ 5 ನಿಮಿಷಗಳ ಕಾಲ ಮಾಡಿದರೂ ಸಾಕು. ಇದರಿಂದ ಡಬಲ್ ಚಿನ್ ಸಮಸ್ಯೆಯಿಂದ ಹೊರಬರಬಹುದು.

Comments are closed.