ಕರಾವಳಿ

ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಕೇರಳ ನೆರೆ ಪರಿಹಾರ ನಿಧಿಗೆ 10 ಲಕ್ಷ ದೇಣಿಗೆ

Pinterest LinkedIn Tumblr

ಮಂಗಳೂರು : ತಿರುಮಲ ತಿರುಪತಿಯಲ್ಲಿ ಚಾತುರ್ಮಾಸ ವ್ರತ ಆಚರಿಸುತ್ತಿರುವ ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ 10 ಲಕ್ಷ ದೇಣಿಗೆಯನ್ನು ಕೇರಳ ರಾಜ್ಯ ನೆರೆ ಪರಿಹಾರ ನಿಧಿಗೆ ನೀಡಿದರು.

ಕೇರಳ ರಾಜ್ಯ ಸರ್ಕಾರದ ವಿತ್ತ ಸಚಿವರಾದ ಮಾನ್ಯ ಥೋಮಸ್ ಐಸಾಕ್ ರವರು ತಿರುಮಲ ಶ್ರೀ ಕಾಶಿ ಮಠಕ್ಕೆ ಭೇಟಿ ನೀಡಿ ಶ್ರೀಗಳವರ ಆಶೀರ್ವಾದ ಪಡಕೊಂಡರು, ಬಳಿಕ ಈ ಕೆಲ ತಿಂಗಳ ಹಿಂದೆ ಕೇರಳ ರಾಜ್ಯದಲ್ಲಿ ನೆರೆ ಯಿಂದ ಪೀಡಿತರಾದ ಬಗ್ಗೆ ಶ್ರೀಗಳವರಿಗೆ ವಿವರಿಸಿದರು.

ಶ್ರೀ ಕಾಶೀ ಮಠ ಸಂಸ್ಥಾನ ಹಾಗೂ ಜಿ . ಯಸ್ . ಬಿ . ಸ್ವಯಂಸೇವಕರು ನೆರೆ ಪರಿಹಾರ ನೀಡುವ ಸಂದರ್ಭದಲ್ಲಿ ಯಾವುದೇ ರೀತಿಯ ಜಾತಿ – ಮತ ಭೇದವಿಲ್ಲದೆ ಸಮಾನ ರೀತಿಯಲ್ಲಿ ಸಹಾಯ ಹಸ್ತ ನೀಡಿರುವಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೇರಳದ ಗೌಡ ಸಾರಸ್ವತ ಸಮಾಜದಲ್ಲಿ ಅಗ್ರಮಾನ್ಯ ಸ್ಥಾನದಲ್ಲಿರುವ ಶ್ರೀಗಳವರು ಬರ ಪರಿಹಾರ ನೀಡಲು ಮುತುವರ್ಜಿ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಮುಂಬೈ ಜಿ ಎಸ್ ಬಿ ಸೇವಾ ಮಂಡಲದ ಆರ್ . ಜಿ . ಭಟ್ , ಭುವನೇಂದ್ರ ವೃಕ್ಷ ವಾಟಿಕೆ ಭಾಗಮಂಡಲದ ಪದಾಧಿಕಾರಿ ಜಿ . ಗುರುಪ್ರಸಾದ್ ಕಾಮತ್ , ಬಂಟ್ವಾಳದ ಉದ್ಯಮಿ ಬಿ . ವಿಜಯಾನಂದ ಶೆಣೈ , ಕೊಚ್ಚಿಯ ವಿಶ್ವನಾಥ್ ಭಟ್ ಹಾಗೂ ತಿರುಮಲ ಶ್ರೀ ಕಾಶೀ ಮಠದ ಕಾರ್ಯದರ್ಶಿ ಕಾಪು ನಾರಾಯಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ: ಮಂಜು ನಿರೇಶ್ವಾಲ್ಯ

Comments are closed.