ಸದ್ದಿಲ್ಲದೆ ನಿಧಾನವಾಗಿ ಕೊಲ್ಲುವ ರೋಗವೇ ಮಧುಮೇಹ, ಇದು ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆದಾಗ ಅಥವಾ ನಿಂತೇ ಹೋದಾಗ ಸಕ್ಕರೆ ಕಾಯಿಲೆ ಕಾಣಿಸುತ್ತದೆ. ಅದರಲ್ಲೂ ಮಧುಮೇಹ ಎರಡನೇ ಹಂತ ದಾಟಿದ ನಂತರ ಸಮಸ್ಯೆಗಳು ಶುರುವಾಗುತ್ತವ. ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿದಲ್ಲಿ ತಲೆದೋರುವ ಈ ಸಮಸ್ಯೆ, ಅತಿಯಾದ ಸಕ್ಕರೆ ಸೇವನೆಯಿಂದ ಮಾತ್ರವೇ ನಿಮ್ಮ ಬಳಿ ಸುಳಿಯುತ್ತದೆ ಎಂಬುದು ಮಾತ್ರ ಸತ್ಯವಲ್ಲ.
ಅಧಿಕ ಬೊಜ್ಜು, ವಂಶಪಾರಂಪರ್ಯ ಅಧಿಕ ಒತ್ತಡ ಹೀಗೆ ಸಕ್ಕರೆ ಕಾಯಿಲೆ ದೇಹಕ್ಕೆ ಬರಲು ಒಂದು ಸಣ್ಣ ಕಾರಣ ಸಾಕು. ಆದರೆ ಸಕ್ಕರೆ ಕಾಯಿಲೆ ಬಂತು ಎಂದು ಹೆದರಬೇಕಿಲ್ಲ. ಆಹಾರ ಪದ್ಧತಿ ಹೆಚ್ಚು ಬದಲಿಸಬೇಕಾಗಿಲ್ಲ. ಆದರೆ ಪಥ್ಯೆ ಮಾಡಿದರೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಅಂತಹ ಪಥ್ಯದ ಆಹಾರಗಳೇನು ತಿಳಿದುಕೊಳ್ಳೋಣ ಬನ್ನಿ.
ಹಾಗಲಕಾಯಿಯ ರಸ:
ಪ್ರತಿದಿನ ಒಂದು ಲೋಟ ಹಾಗಲಕಾಯಿಯ ರಸವನ್ನು ಕುಡಿದರೆ ರಕ್ತದಲ್ಲಿ ಹೆಚ್ಚಾಗಿರುವ ಸಕ್ಕರೆಯ ಅಂಶ ಮೂರೇ ದಿನದಲ್ಲಿ ತಹಬಂದಿಗೆ ಬರುತ್ತದೆ. ಇದಕ್ಕೆ ಕಾರಣ ಹಾಗಲಕಾಯಿಯಲ್ಲಿರುವ momorcidin ಮತ್ತು charatin ಎಂಬ ವಿಶೇಷ ನಿವಾರಕಗಳು (anti-hyperglycemic compounds). ವಾಸ್ತವಾಗಿ ರಕ್ತದಲ್ಲಿನ ಸಕ್ಕರೆ ಉಪಯೋಗಿಸಲ್ಪಡದೇ ವಿಸರ್ಜಿಸುವಲ್ಲಿ ಇನ್ಸುಲಿನ್ ಪ್ರಮಾಣ ಮಹತ್ವದ ಪಾತ್ರ ವಹಿಸುತ್ತದೆ. ಈ ಪೋಷಕಾಂಶಗಳು ಇನ್ಸುಲಿನ್ ಕೊರತೆಯಾಗದಂತೆ ನೋಡಿಕೊಳ್ಳುವುದೇ ಹಾಗಲಕಾಯಿಯ ಈ ಸಾಮರ್ಥ್ಯಕ್ಕೆ ಕಾರಣವಾಗಿದೆ.
ಬೆಂಡೆಕಾಯಿ:
ಬೆಂಡೆಕಾಯಿ ಮಧುಮೇಹಿಗಳಿಗೆ ಮತ್ತೊಂದು ಉತ್ತಮ ತರಕಾರಿಯಾಗಿದೆ. ಇದು ದೇಹದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡು ವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ
ನುಗ್ಗೆಸೊಪ್ಪು:
ನುಗ್ಗೆಸೊಪ್ಪನ್ನು ದಂಟಿನಿಂದ ಬಿಡಿಬಿಡಿಯಾಗಿ ಬಿಡಿಸಿ ನೇರವಾಗಿ ಸಾಂಬಾರ್ ಅಥವಾ ದಾಲ್‌ಗಳಲ್ಲಿ ಇತರ ತರಕಾರಿಗಳೊಂದಿಗೆ ಸೇರಿಸಿ ಬೇಯಿಸಿ ತಿನ್ನಬಹುದು. ತಿಳಿಸಾರು, ಮಜ್ಜಿಗೆ ಹುಳಿ, ತಂಬುಳಿ, ಮೊದಲಾದ ರೂಪದಲ್ಲಿಯೂ ಸೇವಿಸಬಹುದು. ಇನ್ನೊಂದು ವಿಧಾನ ವೆಂದರೆ ಕೊಂಚ ಬೇಯಿಸಿದ ಎಲೆಗಳನ್ನು ಚಪಾತಿ ಹಿಟ್ಟಿನ ಜೊತೆಗೆ ಕಲಸಿ ಲಟ್ಟಿಸಿ ಪರೋಟಾ ಅಥವಾ ಚಪಾತಿಯ ರೂಪದಲ್ಲಿಯೂ ಸೇವಿಸಬಹುದು.
ದಾಲ್ಚಿನ್ನಿ ಬಳಕೆ:
ಸಕ್ಕರೆಯ ಬದಲಿಗೆ ನಿಮ್ಮ ಆಹಾರದಲ್ಲಿ ದಾಲ್ಚಿನ್ನಿಯನ್ನು ಬಳಸಬಹುದಾಗಿದೆ. ದಾಲ್ಚಿನ್ನಿಯು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿಮಿತದಲ್ಲಿರಿಸಲು ಸಹಾಯ ಮಾಡಲಿದ್ದು ಇದು ಸಕ್ಕರೆಯ ಬದಲಿಗೆ ಬಳಸಬಹುದಾದ ಉತ್ತಮ ಉತ್ಪನ್ನವಾಗಿದೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.
ತಂಪು ಪಾನೀಯಗಳಿಂದ ದೂರವಿರಿ:
ಕಾರ್ಬೋನೇಟೆಡ್ ತಂಪು ಪಾನೀಯ ಮತ್ತು ಕೊಬ್ಬಿನ ಆಹಾರ ಪದಾರ್ಥಗಳ ಸೇವನೆಯನ್ನು ಮಧುಮೇಹಿಗಳು ಆದಷ್ಟು ಕಡಿಮೆ ಮಾಡ ಬೇಕು. ಏಕೆಂದರೆ ಇದರಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ.
ಒಳ್ಳೆಯ ನಿದ್ರೆ :
ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೀವು ಸಾಕಷ್ಟು ನಿದ್ದೆ ಮಾಡುವುದೂ ಅತ್ಯಗತ್ಯವಾಗಿದೆ. ನಿದ್ದೆಯು ನಿಮ್ಮ ಒತ್ತಡವನ್ನು ಇಳಿಮುಖಗೊಳಿಸುತ್ತದೆ ನೀವು ಸಾಕಷ್ಟು ನಿದ್ದೆ ಮಾಡದೇ ಇರುವುದು ಮತ್ತು ಹೆಚ್ಚುವರಿ ಒತ್ತಡದಲ್ಲಿರುವುದರಿಂದ ಕೂಡ ಮಧುಮೇಹ ಏರುವ ಸಾಧ್ಯತೆ ಇದೆ ಎಂಬುದಾಗಿ ಅಧ್ಯಯನಗಳು ತಿಳಿಸಿವೆ.
Comments are closed.