ಕರಾವಳಿ

ಎಸ್ಪಿ ನಿಂಬರಗಿ ವರ್ಗಾವಣೆ ಮಾಡುವಂತೆ ಸಚಿವೆ ಜಯಮಾಲಾಗೆ ಮುತ್ತಿಗೆ ಹಾಕಿದ ‘ಕೈ’ ಕಾರ್ಯಕರ್ತರು!

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾಗೆ ಕಾಂಗ್ರೆಸ್ ಕಚೇರಿಯಲ್ಲಿ ಸ್ವಪಕ್ಷೀಯರೆ ಘೇರಾವ್ ಹಾಕಿದ ಘಟನೆ ಉಡುಪಿಯಲ್ಲಿ ಇಂದು ನಡೆದಿದ್ದು ಕೆಲಕಾಲ ಕಾರ್ಯಕರ್ತರು ಮತ್ತು ಸಚಿವೆ ನಡುವೆ ಮಾತಿನ ಚಕಮಕಿಯೂ ನಡೆಯಿತು.

  

ಕಾರ್ಯಕ್ರಮದ ನಿಮಿತ್ತ ಮಂಗಳವಾರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದರು. ಭಾರತ್ ಬಂದ್ ವೇಳೆ ನಡೆದ ಗಲಭೆಗೆ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಆಗಿ ಆಸ್ಪತ್ರೆಗೆ ದಾಖಲಾದರೂ ಕೂಡ ಸೌಜನ್ಯಕ್ಕೂ ಭೇಟಿ ನೀಡಿ ಆರೋಗ್ಯ ವಿಚಾರಿಸಲಿಲ್ಲ. ಕಾರ್ಯಕರ್ತರ ಕಷ್ಟ ಆಲಿಸಿ ಸ್ಪಂದನೆ ನೀಡುವ ಕೆಲಸವನ್ನು ತಾವು ಮಾಡಿಲ್ಲ ಎಂದು ದೂರನ್ನಿತ್ತರು. ಘಟನೆಗೆ ಕಾರಣರಾದ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದ ಕಾರ್ಯಕರ್ತರು ತಾವು ಅವರದ್ದೇ ಮನೆಯ ಗಣಪತಿ ಕಾರ್ಯಕ್ರಮಕ್ಕೆ ತೆರಳಿದ್ದೀರಿ..ಆದರೆ ನಮ್ಮ ಅಹವಾಲು ಕೇಳಲು ಬಂದಿಲ್ಲವೆಂದು ವಾಗ್ದಾಳಿ ನಡೆಸಿದರು.

ಕಾರ್ಯಕರ್ತರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಜಯಮಾಲಾ ಸಮಜಾಯಿಷಿ ನೀಡಲು ಮುಂದಾದರೂ ಕಾರ್ಯಕರ್ತರು ಜಗ್ಗಲಿಲ್ಲ. ಕೊನೆಗೂ ಇದು ಹೀಗೆಯೇ ಮುಂದುವರಿಯುತ್ತೆ ಎಂಬುದನ್ನರಿತ ಸಚಿವೆ ‘ಮಾಧ್ಯಮದವರನ್ನು ಮುಂದಿಟ್ಟುಕೊಂಡು ನನಗೆ ಹೆದರಿಸಲು ಬರಬೇಡಿ, ನನಗೂ ಕೋಪ ಬರುತ್ತೆ’ ಎಂದು ಹೇಳಿ ತನ್ನ ಕಾರನ್ನು ಹತ್ತಿ ಅಲ್ಲಿಂದ ಹೊರಟೇ ಬಿಟ್ಟರು.

Comments are closed.