ಕರಾವಳಿ

ನಕ್ಸಲ್ ಸಮರ್ಥಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಮನವಿ

Pinterest LinkedIn Tumblr

ನಕ್ಸಲವಾದಿಗಳ ಸಮರ್ಥಕರಿಗೆ `ವಿಚಾರವಂತ’, `ಸಾಮಾಜಿಕ ಕಾರ್ಯಕರ್ತರು’ ಮತ್ತು ಹಿಂದುತ್ವನಿಷ್ಠರನ್ನು `ಹಿಂದೂ ಆತಂಕವಾದಿಗಳು’ ಎಂದು ಕರೆಯುವುದು, ಇದೇ ಇಂದಿನ ಧರ್ಮನಿರಪೇಕ್ಷತೆ|

ಮಂಗಳೂರು, ಸೆಪ್ಟಂಬರ್.25 : ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಕ್ಸಲವಾದಿಗಳನ್ನು ಸಮರ್ಥನೆ ಮಾಡಿರುವುದನ್ನು ಖಂಡಿಸಿ ಹಾಗೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಜ್ಯ ಸರಕಾರಕ್ಕೆ ದ.ಕ. ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ‘ನಾನೂ ಕೂಡ ನಗರ ನಕ್ಸಲ್’ ಎಂಬ ಫಲಕವನ್ನು ತನ್ನ ಕೊರಳಿನಲ್ಲಿ ಧರಿಸಿಕೊಂಡು ನಕ್ಸಲರಿಗೆ ಬೆಂಬಲ ನೀಡಿದ ಘಟನೆ ನಡೆಯಿತು. ಹಿಂದೂಗಳಿಗೆ ಒಂದು ನ್ಯಾಯ ಮತ್ತು ನಕ್ಸಲವಾದಿಗಳ ಸಮರ್ಥಕರಿಗೆ ಮತ್ತೊಂದು ನ್ಯಾಯ ಹೀಗೇಕೆ? ದೇಶದ್ರೋಹಿ ನಕ್ಸಲವಾದಿಗಳ ಸಮರ್ಥನೆ ಮಾಡಿರುವ ಕಾರಣ ಇವರೆಲ್ಲರ ಮೇಲೆಯೂ ಕಠಿಣ ಕ್ರಮ ಜರುಗಿಸುವ ಕಾನೂನು ರಚಿಸಬೇಕು ಮತ್ತು `ನಗರವಾಸಿ ನಕ್ಸಲವಾದಿ’ಗಳೊಂದಿಗೆ ದೇಶಾದ್ಯಂತ ನೆಲೆಯೂರಿರುವ ನಕ್ಸಲವಾದಿಗಳನ್ನು ನಾಶಪಡಿಸಲು ಸೈನ್ಯ ಮತ್ತು ಪೊಲೀಸರಿಗೆ ಸರ್ವಾಧಿಕಾರವನ್ನು ನೀಡಬೇಕು ಎನ್ನುವ ಬೇಡಿಕೆಯನ್ನು ಮಾಡಲಾಯಿತು.

ನಾಲಾಸೋಪಾರಾ ಸ್ಫೋಟಕ ಪ್ರಕರಣ ಮತ್ತು ದಾಭೋಲಕರ ಹತ್ಯೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ತಿಂಗಳಿನಲ್ಲಿ 9 ಹಿಂದುತ್ವನಿಷ್ಠರನ್ನು ಬಂಧಿಸಲಾಗಿದೆ. ಇವರಲ್ಲಿ ಯಾರೂ ಸನಾತನ ಸಂಸ್ಥೆಯ ಸಾಧಕರಲ್ಲ, ಆದಾಗ್ಯೂ` ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು’, ಎನ್ನುವ ತಳಬುಡವಿಲ್ಲದ ಮತ್ತು ಉತ್ಪ್ರೇಕ್ಷೆಯ ಬೇಡಿಕೆಯನ್ನು ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು, ತಥಾಕಥಿತ ಪುರೋಗಾಮಿಗಳು, ಮುಸಲ್ಮಾನ ಮುಖಂಡರು ಮುಂತಾದವರು ಮಾಡುತ್ತಿದ್ದಾರೆ.

ಕೆಲವು ಪ್ರಸಾರ ಮಾಧ್ಯಮಗಳು ಬಿಸಿಬಿಸಿ ಮತ್ತು ದಿಕ್ಕು ತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡಿ ` ಹಿಂದೂ ಭಯೋತ್ಪಾದಕತೆ’ಯ ಡಂಗುರ ಸಾರುತ್ತಿದ್ದಾರೆ; ಆದರೆ ಕೊನೆಗೆ ಧರ್ಮದ್ದೇ ವಿಜಯವಾಗಲಿದೆ, ಎಂಬ ವಿಚಾರವನ್ನೂ ಕೂಡ ರಾಜ್ಯ ಸರಕಾರಕ್ಕೆ ಮನವಿಯ ಮೂಲಕ ತಿಳಿಸಲಾಯಿತು.

ಈ ಸಂದರ್ಭ ಶ್ರೀ ರಾಜ್ ಕುಮಾರ್ ಶೇಟ್, ಶ್ರೀ ಸತೀಶ್ ಡಿ, ಶ್ರೀ ಲೋಕೇಶ್ ಕುತ್ತಾರ್, ಧರ್ಮಪ್ರೇಮಿಗಳು, ಶ್ರೀ ಪ್ರಭಾಕರ್ ನಾಯಕ್, ಶ್ರೀ ಉಪೇಂದ್ರ ಆಚಾರ್ಯ, ಶ್ರೀ ರಮೇಶ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.

Comments are closed.