ಕರಾವಳಿ

ದಿನವೂ ಎಷ್ಟು ಗ್ರಾಂ ನಷ್ಟು ನಾರಿನಂಶವನ್ನು ಸೇವಿಸಿದ್ದಲ್ಲಿ, ಉತ್ತಮ ಆರೋಗ್ಯ ನಿಮ್ಮದಾಗುತ್ತೆ ಬಲ್ಲಿರಾ.?

Pinterest LinkedIn Tumblr

ನಾವು ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್ಸ್ ಒಂದು ಅತಿಮುಖ್ಯ ಅಂಶವಾಗಿದೆ. ಈ ಕಾರ್ಬೊಹೈಡ್ರಾಟ್ಸ್ ಗಳಲ್ಲಿ ಎರಡು ವಿಧ ಒಂದು ದೇಹಕ್ಕೆ ದೊರಕುವ (available) ಕಾರ್ಬೋಹೈಡ್ರೇಟ್ಸ್ ಮತ್ತೊಂದು ದೊರಕದ ಕಾರ್ಬೋಹೈಡ್ರೇಟ್ಸ್(unavailable). ಅವೈಲಬಲ್ ಕಾರ್ಬೋಹೈಡ್ರೇಟ್ಸ್ (ಶರ್ಕರ ಪಿಷ್ಟ) ಮುಖ್ಯವಾಗಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಆಹಾರದಲ್ಲಿರುವ ನಾರಿನಂಶಗಳು (unavailable) ಕಾರ್ಬೋಹೈಡ್ರೇಟ್ಸ್ ಗಳಾಗಿದ್ದು ಇವು ಮುಖ್ಯವಾಗಿ ಹಸಿವನ್ನು ತಗ್ಗಿಸಿ, ಜಠರದಲ್ಲಿ ಆಹಾರ ಪರಿಚಲನೆಯನ್ನು ತೀವ್ರಗೊಳಿಸಿ ಮಲದ ಪ್ರಮಾಣವನ್ನು ಹಿಗ್ಗಿಸಿ ಮಲಭದ್ಧತೆ, ಕೋಲನ್ ಕ್ಯಾನ್ಸರ್ ನಂತಹ ಅನೇಕ ರೋಗಗಳ್ನ್ನು ತಡೆಗಟ್ಟುತ್ತದೆ.

ನಾರಿನಲ್ಲಿಯೂ ಎರಡು ತರವಿದ್ದು ಒಂದು ನೀರಿನಲ್ಲಿ ಕರಗುವಂತದ್ದು ಮತ್ತು ನೀರಿನಲ್ಲಿ ಕರಗದೇ ಇರುವಂತದ್ದು. ಸಸ್ಯಗಳಲ್ಲಿನ ಸೆಲ್ಯುಲೋಸ್, ಹೆಮಿಸೆಲ್ಲುಲೋಸ್, ಪೆಕ್ಟಿನ್, ಗಮ್, ಇವೆಲ್ಲವೂ ನಾರಿನಾಂಶಗಳಾಗಿವೆ. ಈ ನಾರಿನಂಶಗಳು ಎಲ್ಲ ಹಸಿ ತರಕಾರಿ, ಹಣ್ಣು ಮತ್ತು ಸಂಸ್ಕರಿಸದ ಧಾನ್ಯಗಳಲ್ಲಿ ಹೇರಳವಾಗಿದ್ದು ಹೆಗ್ಗರುಳಿನ ಕ್ಯಾನ್ಸರ್, ಮೂಲವ್ಯಾಧಿ, ರಕ್ತದೊತ್ತಡ, ಅಧಿಕ ಬೊಜ್ಜು, ಸಕ್ಕರೆ ಖಾಯಿಲೆ, ಮಲಭದ್ದತೆ, ಜಠರದ ಹುಣ್ಣು, ಗಾಲ್ ಸ್ಟೋನ್ಸ್, ಹೃದಯಾಘಾತ ಹೀಗೆ ಹತ್ತು ಹಲವಾರು ಖಾಯಿಲೆಗಳನ್ನು ತಡೆಗಟ್ಟಿ ಪಚನಾಂಗಗಳ ಆರೋಗ್ಯವನ್ನು ವೃದ್ಧಿಸುತ್ತದೆ.

ಹೇಗಪ್ಪಾ ಈ ನಾರುಗಳು ಇಷ್ಟೆಲ್ಲ ರೋಗಗಳನ್ನು ವಾಸಿ ಮಾಡುತ್ತವೆ ಅಂದ್ಕೊಳ್ತಾ ಇರೋವ್ರು ಮುಂದೆ ಓದಿ..
೧) ಆಹಾರದಲ್ಲಿ ಸೇವಿಸುವ ನಾರುಗಳು ದೊಡ್ಡಕರುನಲ್ಲಿರುವ ನೀರನ್ನು ಹೀರಿ ಮಲವು ಉಬ್ಬುವಂತೆ ಮಾಡುತ್ತವೆ. ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಗಳು ತಮ್ಮ ಕ್ರಿಯೆಯಿಂದ ಮಲವನ್ನು ಮೃದುಗೊಳಿಸಿ ವಾಯುವನ್ನು ಬಿಡುಗಡೆ ಮಾಡುತ್ತವೆ.
೨)ನಾರಿನ ಪದಾರ್ಥಗಳನ್ನು ಕಡಿಮೆ ಸೇವಿಸುವುದರಿಂದ ದೊಡ್ಡಕರುಳಿನಲ್ಲಿ ಆಮ್ಲಿಯತೆ ಹೆಚ್ಚಾಗಿ ಮಲದಲ್ಲಿರುವ ವಿಷಪೂರಿತ ವಸ್ತುಗಳು ಕಾನ್ಸರ್ ಕಾರಕವಾಗಬಲ್ಲದು.ನಾರಿನ ಪದಾರ್ಥವು ಕರುಳಿನ ಆಮ್ಲಿಯತೆಯನ್ನು ಹೆಚ್ಚಿಸಿ , ಅಮೋನಿಯಾ ಅಂಶವನ್ನು ತಗ್ಗಿಸಿ ಹೆಗ್ಗರುಳಿನ ಕಾನ್ಸರ್ ಅನ್ನು ತಡೆಗಟ್ಟುತ್ತದೆ.
೩) ನಾರಿನುಕ್ತ ಆಹಾರ ಪದ್ದತಿಯು ಕರುಳಿನ ಪಚನ ಕ್ರಿಯೆಯನ್ನು ಹೆಚ್ಚಿಸಿ ಮಲಭದ್ದತೆಯನ್ನು ಹೋಗಲಾಡಿಸುತ್ತದೆ.
೪) ನಾರಿನಂಶಗಳು ಸಣ್ಣಕರುಳಿನಲ್ಲಿ ಫ್ಯಾಟ್ ಅಂಶವನ್ನು ಹೀರಿಕೊಳ್ಳಲು ಬಿಡದೆ ತಳ್ಳಿಕೊಂಡು ಹೋಗುತ್ತದೆ. ಇದರಿಂದ ರಕ್ತಕ್ಕೆ ಸೇರುವ ಕೊಲೆಸ್ಟ್ರಾಲ್ ಗಳು ಕಡಿಮೆಯಾಗಿ ಹೃದಯಾಘಾತ, ರಕ್ತದೊತ್ತಡಗಳ ಸಂಭಾವ್ಯ ಕ್ಷೀಣಿಸುತ್ತದೆ.
೫) ಸಕ್ಕರೆಯು ರಕ್ತಕ್ಕೆ ಸೇರುವ ವೇಗವನ್ನು ನಾರು ಕಡಿಮೆ ಮಾಡುತ್ತವೆ.ಕೆಲವು ನಾರಿನಂಶಗಳು ಅಹ್ಹರದ ಜಿಗುಟುತನವನ್ನು ಹೆಚ್ಚಿಸುತ್ತದೆ. ಇವು ರಕ್ತದಲ್ಲಿನ ಗ್ಲುಕೋಸ್ ಅನ್ನು ಕಡಿಮೆ ಮಾಡಿ ಮಧುಮೇಹವನ್ನು ನಿಯಂತ್ರಿಸುತ್ತದೆ.
೬) ಹಣ್ಣು ತರಕಾರಿಗಳಲ್ಲಿ ಇರುವ ನೀರಿನಲ್ಲಿ ಕರಗದ ನಾರುಗಳು ನೀರನ್ನು ತಡೆಹಿಡಿದಿಟ್ಟುಕೊಂಡು ತನ್ನ ಗಾತ್ರವನ್ನು ಹೆಚ್ಚಿಸಿಕೊಂಡು ಕರುಳಿನ ಕಾನ್ಸರ್ ಉಂಟುಮಾಡುವ ವಿಷ ವಸ್ತುಗಳನ್ನು ಹೊರದೂಡುತ್ತವೆ, ತೂಕವನ್ನು ಇಳಿಸುತ್ತದೆ, ಮಲಬದ್ಧತೆಯನ್ನು ನಿವಾರಿಸುತ್ತದೆ.
೭) ಹಣ್ಣುಗಳಲ್ಲಿ ಕಂಡುಬರುವ ಪೆಕ್ಟಿನ್ ಎಂಬ ನಾರಿನಂಶವು ರಕ್ತದಲ್ಲಿನ ಚೋಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುವುದಲ್ಲದೆ ಪಿತ್ತಕಲ್ಲು ಆಗುವುದನ್ನು ತಡೆಗಟ್ಟುತ್ತದೆ.

ನಾರು ತುಂಬಾ ಒಳ್ಳೇದು ಅಂತ ಸಿಕ್ಕಾಪಟ್ಟೆ ತಿಂದ್ರೆ ವಿಷ ಆಗೋದ್ರಲ್ಲಿ ಸಂಶಯನೇ ಇಲ್ಲ.. ಒಬ್ಬ ಮನುಷ್ಯನು ದಿನವೂ ೩೦ ಗ್ರಾಂ ನಷ್ಟು ನಾರಿನಂಶವನ್ನು ಸೇವಿಸಿದ್ದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಅತಿ ಹೆಚ್ಚು ನಾರಿನಂಶ ತೆಗೆದುಕೊಂಡಲ್ಲಿ ಇರಿಟಬಲ್ ಬವಲ್ ಸಿಂಡ್ರೋಮ್ ಉಂಟಾಗಬಹುದು..

Comments are closed.