ಕರಾವಳಿ

ಆಲಾಡಿಯಲ್ಲಿ ನ್ಯೂ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ

Pinterest LinkedIn Tumblr

ಆಲಾಡಿ: ಸಜೀಪ ಮೂನ್ನುರು ಗ್ರಾಮದ ಆಲಾಡಿಯಲ್ಲಿ ನ್ಯೂ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ ದಿನಾಂಕ 16-09-18 ರಂದು ನ್ಯೂ ಫ್ರೆಂಡ್ಸ್ ಸರ್ಕಲ್ ಆಲಾಡಿ ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಯೇನಪೋಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರವು ಅಶ್ಫಕ್ ಆಲಾಡಿ (ಅಧ್ಯಕ್ಷರು ನ್ಯೂ ಫ್ರೆಂಡ್ಸ್ ಸರ್ಕಲ್ ಆಲಾಡಿ) ಅಧ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ 87 ಯುನಿಟ್ ರಕ್ತ ಸಂಗ್ರಹವಾಗಿ ಸಾರ್ವಜನಿಕ ಪ್ರಶಂಶೆಗೆ ಪಾತ್ರವಾಯಿತು.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ರಾಜ್ಯಾಧ್ಯಕ್ಷರಾದ ಇಲ್ಯಾಸ್ ಮಹಮ್ಮದ್ ತುಂಬೆಯವರು ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡುತ್ತಾ ಮಾನವನ ಶರೀರದಲ್ಲಿ 120 ದಿನಗಳಿಗೊಮ್ಮೆ ರಕ್ತವು ನಾಶವಾಗಿ ಮರು ಉತ್ಪತ್ತಿಯಾಗುತ್ತಿರುವಾಗ ಇದನ್ನು ದಾನ ಮಾಡಿ ಮತ್ತೊಂದು ಜೀವಕ್ಕೆ ನೆರವಾಗುವುದರಲ್ಲಿ ಹೆಮ್ಮೆಯಿರಬೇಕು , ಇಲ್ಲಿ ಸಂಗ್ರಹಿತವಾದಂತಹ ರಕ್ತವು ಅಪಘಾತ ಮತ್ತು ಇನ್ನಿತರ ತುರ್ತು ಸಂದರ್ಭದಲ್ಲಿ ಬಹು ಉಪಕಾರಿಯಾಗಿ ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಸಹಕಾರಿಯಾಗಲಿದೆ. ಇಂತಹ ಕೆಲಸಗಳು ಮುಂದಿನ ದಿನಗಳಲ್ಲಿಯೂ ಮುಂದುವರೆಯಲಿ ಎಂದು ಆಶಿಸಿದರು.

SSF ಬಂಟ್ವಾಳ ಡಿವಿಝನ್ ಇದರ ಉಪಾಧ್ಯಕ್ಷರಾದ ಅಕ್ಬರ್ ಮದನಿ ಆಲಾಡಿ ಮಾತನಾಡಿ ರಕ್ತದಾನದ ಬಗ್ಗೆ ಯುವ ಸಮೂಹ ಇನ್ನಷ್ಟು ಕಾಳಜಿ ವಹಿಸಬೇಕು, ಸಮಯಕ್ಕೆ ಸರಿಯಾಗಿ ಕೆಲವೊಮ್ಮೆ ಹಣವಿದ್ದರೂ ರಕ್ತ ಸಿಗದೇ ಜನ ಪರದಾಡುವ ಪರಿಸ್ಥಿತಿ ಕೂಡ ಎದುರಾಗುವ ಈ ಕಾಲಘಟ್ಟದಲ್ಲಿ ರಕ್ತದಾನವು ಶ್ರೇಷ್ಠ ದಾನವಾಗಿದೆಯೆಂದು ವಿಶ್ಲೇಷಿಸಿದರು.

ತದ ನಂತರ ಮಾತಾಡಿದ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಹನೀಫ್’ಖಾನ್ ಕೋಡಾಜೆ ಮಾತನಾಡಿ ಸಂಘಟನೆಗಳು ಸಮಾಜಕ್ಕೆ ಮತ್ತು ಸೌಹಾರ್ದದ ನಿಲುವಿಗೆ ಒಳಿತನ್ನು ಮಾಡುತ್ತಾ ಕೆಡುಕಿನ ವಿರುದ್ಧ ಹೋರಡಬೇಕು, ಯಾವುದೇ ಸಮಯದಲ್ಲಿ ಬೇಕಾದರೂ ಸಂಘಟನೆ ಒಡೆಯಲು ದುಷ್ಟ ಶಕ್ತಿಗಳ ಆಗಮನವಾಗಬಹುದು ಆದರೆ ಸಂಘಟನೆಯ ಒಳಗೆ ಹೊಂದಾಣಿಕೆ, ವಿಶ್ವಾಸ, ನಂಬಿಕೆ, ಒಗ್ಗಟ್ಟುಗಳಿದ್ದರೆ ಅದು ಸಧೃಢವಾಗಿ ಬೆಳೆಯುತ್ತದೆ ಎಂದರು.

ನಿಮ್ಮ ನೆರೆಯವರು ಯಾವುದೇ ಜಾತಿಯಾದರೂ ಅವರನ್ನು ಪ್ರೀತಿಸಿ ,ಅವರ ಸಂಕಷ್ಟದಲ್ಲಿ ಭಾಗಿಯಾಗಿ,ಇಸ್ಲಾಂ ಎನ್ನುವುದು ನಿಸ್ವಾರ್ಥ ,ಸಮಾಜಮುಖಿ ಕೆಲಸಗಳನ್ನು ಸ್ವಾರ್ಥವಿಲ್ಲದೆ ಕೆಲಸ ಮುಂದುವರಿಸುತ್ತಿರಿ ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಿಯಾಝ್ ಪರಂಗಿಪೇಟೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಜೀಪ ನಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನಾಸೀರ್ ಸಜೀಪ, ಅಮಾಯಕ ದಾಳಿಗೆ ಶಹೀದ್ ಆದ ನಾಸೀರ್ ಮೂನ್ನುರು ಅವರ ಬಗ್ಗೆ ಕವನವೊಂದನ್ನು ವಾಚಿಸಿದಾಗ ಸಭೆಯಲ್ಲಿ ಒಂದು ಕ್ಷಣ ಮೌನ ಆವರಿಸಿತು,ಅಲ್ಲದೆ ಆರೋಗ್ಯದ ಬಗ್ಗೆ ಮಂಡಿಸಿದ ಕವನ‌ಕ್ಕೆ ವೇದಿಕೆಯಲ್ಲಿದ್ದ ಯೇನಪೋಯ ವೈದ್ಯ ಅಧಿಕಾರಿ ಡಾll ಶಶಿಧರ್ ಚಪ್ಪಾಳೆ ತಟ್ಟಿದಾಗ ನೆರೆದಿದ್ದ ಸಭೀಕರು ಕೂಡ ಸಾಥ್ ನೀಡಿದರು,ರಕ್ತವು ದೇಹದ ಒಳಗೆಹರಿಯಬೇಕೇ ಹೊರತು ಹೊರಗೆ ಅಲ್ಲ ಎಂಬ ಸಂದೇಶವನ್ನು ನೀಡಿದರು.
ಕಿರಣ್ ಆಲಾಡಿ ಮಾತನಾಡಿ ಇದು ಸಾಮಾಜಿಕ ಕಾರ್ಯಕ್ರಮ ಇನ್ನಷ್ಟು ಕಾರ್ಯಕ್ರಮ ನಿಮ್ಮಿಂದ ನಾವು ನೀರಿಕ್ಷೆ ಮಾಡುತ್ತಿರುತ್ತೇವೆಂದು ಶುಭ ಹಾರೈಸಿದರು.

ಈ ಶುಭ ಸಂದರ್ಭದಲ್ಲಿ ಮೆಸ್ಕಾಂ ಸಹಾಯಕ ಸಿಬ್ಬಂದಿ ಮಹಮ್ಮದ್ ಪೆರ್ವ, ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕೊಟ್ಟ ಪುತ್ತುಮೋನಕ ಇಂದಿರಾ ನಗರ, ಅದೇ ರೀತಿ ಪುರಸಭಾ ಸದಸ್ಯರಾದ ಇದ್ರೀಶ್ ಪಿ.ಜೆ ಪಾಣೆ ಮಂಗಳೂರು ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಇಜಾಝ್ ಅಹ್ಮದ್ ಅಧ್ಯಕ್ಷರು ಪಾಪ್ಯುಲರ್ ಪ್ರಂಟ್ ಆಫ್ ಇಂಡಿಯಾ ಬಂಟ್ವಾಳ, ಶಾಹುಲ್ ಹಮೀದ್ ಪ್ರದಾನ ಕಾರ್ಯದರ್ಶಿ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲೆ, ಯೂಸುಫ್ ಆಲಡ್ಕ ಅಧ್ಯಕ್ಷರು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬಂಟ್ವಾಳ ವಿಧಾನ ಸಭಾ ಕ್ಷೇತ್ರ, ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ಫಾರೂಕ್ ಆಲಾಡಿ ,ಮಜೀದ್ ಆಲಾಡಿ, ಮಂತಾದವರು ಉಪಸ್ಥಿತರಿದ್ದರು.ಅಶ್ಫಕ್ ಆಲಾಡಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರೆ, ಝಕರಿಯ ಮಲಿಕ್ ಕಾರ್ಯಕ್ರಮ ನಿರೂಪಿಸಿದರು.

Comments are closed.