ಕರಾವಳಿ

ಬಾದಾಮಿಯಲ್ಲಿರುವ ಪೋಷಾಂಶ ಕಣ್ಣಿನ ದೃಷ್ಟಿ ಹೆಚ್ಚಿಸಲು ಸಹಕಾರಿ.

Pinterest LinkedIn Tumblr

ಈಗ ಬಹಳಷ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕಣ್ಣಿನ ದೃಷ್ಟಿ ಸಹಾ ಒಂದಾಗಿದೆ. ಚಿಕ್ಕವರು, ದೊಡ್ಡವರು ಎಂಬ ಬೇಧವಿಲ್ಲದೆ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಿದೆ. ಪ್ರತೀ ಮೂವರಲ್ಲಿ ಒಬ್ಬರಿಗೆ ಕನ್ನಡಕಗಳಿರುತ್ತವೆ. ದಿನೇ ದಿನೇ ಕನ್ನಡಕ ಧರಿಸುವವರ ಸಂಖ್ಯೆ ಬೆಳೆಯುತ್ತಿದೆ. ಸರಿಯಾದ ಆಹಾರವನ್ನು ತೆಗೆದುಕೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣ. ದೊಡ್ಡವರೇ ಅಲ್ಲದೆ ಮಕ್ಕಳು ಸಹಾ ಅಧಿಕ ಸೈಟ್ ಇರುವ ಕನ್ನಡಕಗಳನ್ನು ಬಳಸುತ್ತಿದ್ದಾರೆ. ಹಾಗೆಯೇ ಟಿ.ವಿ, ಲ್ಯಾಪ್ ಟಾಪ್, ಸೆಲ್ ಫೋನ್, ಕಂಪ್ಯೂಟರ್ ನಂತಹವುಗಳನ್ನು ಹೆಚ್ಚಾಗಿ ನೋಡುವುದರಿಂದ ಕಣ್ಣಿನಲ್ಲಿರುವ ನರಗಳಿಗೆ ಒತ್ತಡ ಉಂಟಾಗಿ ಕಣ್ಣಿನ ದೃಷ್ಟಿ ಕ್ಷೀಣಿಸುತ್ತದೆ. ನಮ್ಮ ಪೂರ್ವಿಕರಿಗೆ ಯಾವುದೇ ಕಣ್ಣಿನ ತೊಂದರೆ ಇಲ್ಲದೆ ಜೀವನವನ್ನು ಸಂತೋಷವಾಗಿ ಕಳೆದಿದ್ದಾರೆ. ಆದರೆ ಈಗ ಬದಲಾಗಿರುವ ಆಹಾರ ಪದ್ಧತಿಯಿಂದ ಇಂದಿನ ತಲೆಮಾರಿನವರಿಗೆ ಶೀಘ್ರವಾಗಿ ದೃಷ್ಟಿ ಕ್ಷೀಣಿಸುತ್ತಿರುವುದಲ್ಲದೆ ಶಕ್ತಿ ಇಲ್ಲದಿರುವುದು, ಮೂಳೆಗಳು ಬಲಹೀನವಾಗುವುದು ಮಾಮೂಲಿಯಾಗಿಬಿಟ್ಟಿದೆ. ಕಣ್ಣಿನ ದೃಷ್ಟಿ ಹೆಚ್ಚಿಸಲು ಅದ್ಭುತವಾದ ಉಪಾಯ ಒಂದಿದೆ. ಅದನ್ನು ಅನುಸರಿಸಿ ನಿಮ್ಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಹೀಗೆ ಮಾಡಬೇಕು.

ಬೇಕಾದ ಸಾಮಗ್ರಿಗಳು :
ಬಾದಾಮಿ
ಸೋಂಪು
ಕಲ್ಲುಸಕ್ಕರೆ

ಈ ಮೂರನ್ನೂ ಸಮಪಾಲಿನಲ್ಲಿ ತೆಗೆದುಕೊಂಡು, ಬಾದಾಮಿ ಹಾಗೂ ಸೋಂಪನ್ನು ಹುರಿದು ಮೂರನ್ನೂ ಪುಡಿ ಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಬೇಕು. ಹೀಗೆ ತಯಾರಿಸಿಟ್ಟುಕೊಂಡ ಪುಡಿಯನ್ನು ದೊಡ್ಡವರು 2 ಟೀ ಚಮಚ, ಮಕ್ಕಳು 1 ಟೀ ಚಮಚದಷ್ಟು ಪುಡಿಯನ್ನು ಒಂದು ಲೋಟ ಹಾಲಿನಲ್ಲಿ ಬೆರೆಸಿಕೊಂಡು ಕುಡಿಯಬೇಕು. ದಿನಕ್ಕೆ 2 ಬಾರಿಯಂತೆ ಕ್ರಮಬದ್ಧವಾಗಿ ತೆಗೆದುಕೊಂಡರೆ 3 ತಿಂಗಳಿನಲ್ಲಿ ಅದ್ಭುತವಾದ ಫಲಿತಾಂಶವನ್ನು ಕಾಣಬಹುದು. 6 ತಿಂಗಳು ಮುಂದುವರೆಸಿದರೆ ದೃಷ್ಟಿಯನ್ನು ಹೆಚ್ಚಿಸುವುದಲ್ಲೆ ಕಣ್ಣನ್ನು ಆರೋಗ್ಯವಾಗಿರಿಸುತ್ತದೆ. ಮೂಳೆಗಳನ್ನು ಬಲಪರಿಸುತ್ತದೆ.

ಬಾದಾಮಿಯಲ್ಲಿರುವ ಪೋಷಕಾಂಶಗಳು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತವೆ. ಜ್ಞಾಪಕಶಕ್ತಿಯನ್ನು, ದೇಹದ ಶಕ್ತಿಯನ್ನೂ ಹೆಚ್ಚಿಸುತ್ತದೆ. ಆರೋಗ್ಯಕ್ಕೂ ಒಳ್ಳೆಯದು.

ಸೋಂಪಿನಲ್ಲಿರುವ ಅಮೈನೋ ಆಸಿಡ್ಸ್, ಆಂಟಿ ಆಕ್ಸಿಡೆಂಟ್ಸ್, ಹಾನಿಗೊಳಗಾದ ಕಣ್ಣನ್ನು ಸರಿಪಡಿಸಿ ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿಗೊಳಿಸುತ್ತದೆ. ಕಣ್ಣಿನ ಎಲ್ಲಾ ಸಮಸ್ಯೆಗಳನ್ನು ತೊಲಗಿಸುವಲ್ಲಿ ಉಪಯೋಗವಾಗುತ್ತದೆ.

ಕಲ್ಲು ಸಕ್ಕರೆ ಶರೀರದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಕಣ್ಣು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು, ಮೊದಲಿನಂತೆ ದೃಷ್ಟಿ ಪುನಃ ಪಡೆಯಲು ಆಹಾರದಲ್ಲಿ ಕೆಳಕಂಡ ಪದಾರ್ಥಗಳು ಕ್ರಮಬದ್ಧವಾಗಿ ಇರುವಂತೆ ನೋಡಿಕೊಳ್ಳಬೇಕು.
ಹಸಿರು ತರಕಾರಿಗಳು, ಧಾನ್ಯಗಳು, ಕ್ಯಾರೆಟ್, ಎಲೆಕೋಸು, ಬೀಟ್ ರೂಟ್, ನಿಂಬೆಹಣ್ಣು, ಗ್ರೀನ್ ಟೀ, ಬ್ಲಾಕ್ ಬೆರ್ರೀ, ಬ್ಲೂ ಬೆರ್ರೀ, ಬ್ರೂಕಲೀ, ಮೀನು, ಟೊಮಾಟಾ ಇವುಗಳನ್ನು ಪ್ರತಿನಿತ್ಯದ ಆಹಾರದಲ್ಲಿ ತಪ್ಪದೆ ಬಳಸಬೇಕು.

ಮೇಲೆ ಹೇಳಿದಂತೆ ಅನುಸರಿಸಿದಲ್ಲಿ ಸಂಪೂರ್ಣವಾಗಿ ಕಾಣದಂತಾದ ಕಣ್ಣಿನ ದೃಷ್ಟಿಯನ್ನು ಪಡೆಯಬಹುದೆಂದು ಆಯುರ್ವೇದ ತಜ್ಞರು ಹೇಳುತ್ತಾರೆ.

Comments are closed.