ಕರಾವಳಿ

ಬೆಳಗ್ಗೆ ಮತ್ತು ರಾತ್ರಿ ಹಾಲಿಗೆ ಈ ಎಲೆಯನ್ನ ಹಾಕಿ ಕುಡಿದರೆ ಶೀತ -ಕೆಮ್ಮು ನಿವಾರಣೆ

Pinterest LinkedIn Tumblr

ಪ್ರತಿ ಹಳ್ಳಿಯಲ್ಲೂ ಅರಳಿಕಟ್ಟೆ ಇದ್ದೇ ಇರುತ್ತದೆ. ಅರಳಿ ಕಟ್ಟೆ ಎಂದರೆ ಹರಟೆ ಹೊಡೆಯುವ ಜಾಗ ಎಂದೇ ಭಾವಿಸುತ್ತಾರೆ. ಅರಳಿ ಕಟ್ಟೆಯ ಜತೆಗೆ ಅಶ್ವತ್ಥ ಮರವೂ ಹಳ್ಳಿಗಳಲ್ಲಿ ಕಾಣಬಹುದು. ನಗರಗಳಲ್ಲಾದರೆ ಅಶ್ವತ್ಥ ಮರ ಹುಡುಕುವುದು ಸ್ವಲ್ಪ ಕಷ್ಟ. ಅಶ್ವತ್ಥ ಎಲೆಗಳಿಂದ ಹಲವಾರು ಸೋಂಕುಗಳನ್ನು ನಿವಾರಿಸಿಕೊಳ್ಳಬಹುದು. ಅವು ಏನು ಎಂಬುದನ್ನು ಈಗ ನೋಡೋಣ.

* ಅಶ್ವತ್ಥ ಎಲೆಯನ್ನು ಹಾಲಿನಲ್ಲಿ ಹಾಕಿ ಕುದಿಸಿ ಸಕ್ಕರೆ ಹಾಕಿ ಬೆಳಗ್ಗೆ ಮತ್ತು ರಾತ್ರಿ ಕುಡಿದರೆ ಶೀತ -ಕೆಮ್ಮು ನಿವಾರಣೆಯಾಗುತ್ತದೆ.

* ಅಶ್ವತ್ಥ ಎಲೆಯ ರಸಕ್ಕೆ ಸಕ್ಕರೆ ಹಾಕಿ ಕುಡಿದರೆ ಕಾಮಾಲೆ ಕಾಯಿಲೆಗೆ ಒಳ್ಳೆಯದು.

* ಅಶ್ವತ್ಥ ಮರದ ತೊಗಟೆಯನ್ನು ಪುಡಿ ಮಾಡಿ ಹಲ್ಲು ಉಜ್ಜುವುದರಿಂದ ಹಲ್ಲುಗಳು ಸ್ಟ್ರಾಂಗ್‌ ಆಗುತ್ತವೆ. ಜತೆಗೆ ಹೊಳಪು ಕೂಡ ಬರುತ್ತದೆ. ಅಷ್ಟೇ ಅಲ್ಲ ಹಲ್ಲು ನೋವು ಸಹ ನಿವಾರಣೆಯಾಗುತ್ತದೆ.

* ಸುಮಾರು ಹತ್ತು ಅಶ್ವತ್ಥ ಎಲೆಗಳನ್ನು ಎರಡು ಗ್ಲಾಸ್‌ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು. ಅದನ್ನು ಒಂದು ಗ್ಲಾಸ್‌ ನೀರಿಗೆ ಬತ್ತಿಸಬೇಕು. ಈ ಕಷಾಯವನ್ನು ತಣಿಸಿ ಕುಡಿಯಬೇಕು. ಇದರಿಂದ ಹೃದಯ ಸಂಬಂಧಿ ಸಮಸ್ಯೆ ದೂರವಾಗುತ್ತದೆ.

* ಅಶ್ವತ್ಥ ಮರದ ತೊಗಟೆಯನ್ನು ಒಣಗಿಸಬೇಕು. ಚೆನ್ನಾಗಿ ಒಣಗಿದ ನಂತರ ಅದನ್ನು ಪುಡಿ ಮಾಡಬೇಕು. ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯುವುದರಿಂದ ಅಸ್ತಮಾ ನಿವಾರಣೆಯಾಗುತ್ತದೆ.

Comments are closed.