ಕರಾವಳಿ

ಮಳೆ ಶಾಂತವಾಗಿ ಎಲ್ಲರ ಸಮೃದ್ಧಿಗಾಗಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ

Pinterest LinkedIn Tumblr

ಮಂಗಳೂರು : ಮಳೆ ಶಾಂತವಾಗಿ ಜನರು, ಪಶುಪಕ್ಷಿ ಸಂಕುಲಗಳು ಸುಖ ನೆಮ್ಮದಿಯ ಜೀವನ ನಡೆಸಲು ಕೃಪೆ ತೋರುವಂತೆ ಪ್ರಾರ್ಥಿಸಿ ಕದ್ರಿ ಶ್ರೀ ಮಂಜುನಾಥ ದೇವರ ಸಾನಿಧ್ಯದಲ್ಲಿ ದೀಪ ಪ್ರಜ್ವಲಿಸಿ, ಸಾಮೂಹಿಕವಾಗಿ ಪೂಜೆ ನೆರವೇರಿಸಲಾಯಿತು.

ಮಳೆ ಶಾಂತವಾಗಿ ಎಲ್ಲರ ಸಮೃದ್ಧಿಗಾಗಿ ಶ್ರೀ ದೇವಳದ ತಂತ್ರಿಗಳಾದ ಶ್ರೀ ವಿಠಲ್ ದಾಸ್ ತಂತ್ರಿ, ಪ್ರಧಾನ ಅರ್ಚಕರಾದ ಶ್ರೀ ವಾಸುದೇವ ಭಟ್, ಅರ್ಚಕರಾದ ರಾಮಣ್ಣ ಅಡಿಗ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಎ.ಜೆ. ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಶ್ರೀ ನಿಂಗಯ್ಯ, ಸದಸ್ಯರುಗಳಾದ ಶ್ರೀ ದಿನೇಶ್ ದೇವಾಡಿಗ, ಶ್ರೀ ಹರಿನಾಥ್ ಜೋಗಿ, ಶ್ರೀ ದಯಾಕರ ಮೆಂಡನ್, ಶ್ರೀ ಸುರೇಶ್ ಕುಮಾರ್, ಶ್ರೀ ರಂಜನ್ ಕುಮಾರ್ , ಶ್ರೀಮತಿ ಪುಷ್ಪಲತಾ ಶೆಟ್ಟಿ, ಶ್ರೀಮತಿ ಚಂದ್ರಕಲಾ ದೀಪಕ್ ರಾವ್ ಹಾಗೂ ದೇವಳದ ಸಿಬ್ಬಂದಿಗಳು ಮತ್ತು ಊರಿನ ಹತ್ತು ಸಮಸ್ತರ ಪರವಾಗಿ ಶ್ರೀಯುತರಾದ ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ, ಸುಂದರ್ ಶೆಟ್ಟಿ, ಕಾರ್ಪೋರೇಟರ್ ಅಶೋಕ್ ಡಿ.ಕೆ., ಶಶಿಧರ ಹೆಗ್ಡೆ ಹಾಗೂ ಮತ್ತಿತ್ತರರು ಈ ವೇಳೆ ಸಾಮೂಹಿಕವಾಗಿ ಪ್ರಾರ್ಥಿಸಿದರು.

ಇದೇ ವೇಳೆ ಪ್ರಕೃತಿ ವಿಕೋಪ ಪರಿಹಾರದ ಬಗ್ಗೆ ಭಕ್ತಾದಿಗಳಿಗೆ ದೇಣಿಗೆ ನೀಡಲು ಸಹಕಾರವಾಗುವಂತೆ ಶ್ರೀ ದೇವಳದಲ್ಲಿ ಪ್ರಕೃತಿ ವಿಕೋಪ ನೆರೆ ಪರಿಹಾರ ನಿಧಿ ಎಂಬ ಹುಂಡಿಯನ್ನು ಸ್ಥಾಪಿಸಲಾಗಿದೆ. ಭಕ್ತಾದಿಗಳು ತಮ್ಮ ದೇಣಿಗೆಯನ್ನು ಈ ಹುಂಡಿಯಲ್ಲಿ ಹಾಕಬಹುದೆಂದು ದೇವಳದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

Comments are closed.