ಕರಾವಳಿ

ಛಾಯಾಚಿತ್ರ ಪತ್ರಿಕೋಧ್ಯಮ: ಮಾಸ್ಟರ್ ಪದವಿ ಪ್ರಶಸ್ತಿ ಸ್ವೀಕರಿಸಿದ ಅಸ್ಟ್ರೋ ಮೋಹನ್

Pinterest LinkedIn Tumblr

ಉಡುಪಿ: ಛಾಯಾಚಿತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಉಡುಪಿಯ ಅಸ್ಟ್ರೋ ಮೋಹನ್ ಮಾಡಿದ ವಿಶೇಷ ಸಾಧನೆಯನ್ನು ಗುರುತಿಸಿ ಅಮೆರಿಕದ ಇಮೇಜ್ ಕೊಲೀಗ್ ಸೊಸೈಟಿ ನೀಡಿದ ಮಾಸ್ಟರ್ ಪದವಿ ಪ್ರಧಾನ ಸಮಾರಂಭ ಆ .18 ರಂದು ವಿಜಯವಾಡದಲ್ಲಿ ಜರಗಿತು.

ಆಂಧ್ರ ಪ್ರದೇಶ ಫೋಟೋಗ್ರಫಿ ಅಕಾಡೆಮಿ ಸಹಭಾಗಿತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ವಿಜಯವಾಡದ ಸಂಸದ ಕೆಸಿನೇನಿ ಶ್ರೀನಿವಾಸ್ ರಾವ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಎ ಪಿ ಅಕಾಡೆಮಿ ಕಾರ್ಯದರ್ಶಿ ಟಿ ಎಸ್ ರೆಡ್ಡಿ. ಮತ್ತಿತರರು ಉಪಸ್ಥಿತರಿದ್ದರು.

Comments are closed.