ಕರಾವಳಿ

ಮುಖದ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮ ಮಾಡಿ, ಸುಂದರ ಉಬ್ಬಿದ ಕೆನ್ನೆನಿಮ್ಮದಾಗಿಸಿ..

Pinterest LinkedIn Tumblr

ತುಂಬಿದ ಕೆನ್ನೆಗಳನ್ನ ಹೊಂದುವುದು ಹಲವರ ಬಯಕೆ. ತುಂಬು ಕೆನ್ನೆಯನ್ನ ಹೊಂದಿದವರು ಬಹಳ ಚನ್ನಾಗಿ ಕಾಣುತ್ತಾರೆ. ನಾವು ನಮ್ಮ ದೇಹಕ್ಕೆ ಮಾತ್ರ ವ್ಯಾಯಾಮ ಮಾಡುತ್ತೇವೆ ಅದರಿಂದ ನಾಮ್ಮ ದೇಹದ ಅರೋಗ್ಯ ಚೆನ್ನಾಗಿರಿಲಿ ಎಂಬುದು. ದೇಹದ ಹಲವು ಭಾಗಗಳಿಗೆ ವ್ಯಾಯಾಮದ ಅವಶ್ಯಕತೆ ಬಹಳ ಮುಖ್ಯ. ಮುಖದ ವ್ಯಾಯಾಮವನ್ನ ಮಾಡುವುದು ಉತ್ತಮ. ಮುಖದ ವ್ಯಾಯಾಮದಿಂದ ಉಬ್ಬಿದ ಕೆನ್ನೆ ನಿಮ್ಮದಾಗಿಸಿಕೊಳ್ಳಬಹುದು. ಮುಖದ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮ ಮಾಡಿ. ಇದು ಮುಖದ ಸೌಂದರ್ಯದ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತದೆ.

* ಆರೋಗ್ಯಕರವಾದ ಆಹಾರವನ್ನ ಸೇವಿಸಬೇಕು, ಹಾಗೂ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನ ಕುಡಿಯಬೇಕು.
* ಆಗಾಗ ಬಲೂನ್ ಊದುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಕೆನ್ನೆಯ ಭಾಗದ ಮಾಂಸಖಂಡಗಳ ಆರೋಗ್ಯ ವೃದ್ಧಿಸುತ್ತವೆ.
* ರೋಸ್ ವಾಟರ್ ಹಾಗೂ ಗ್ಲಿಸರಿನ್ ಮಿಕ್ಸ್ ಮಾಡಿ ರಾತ್ರಿ ಮಲಗುವಾಗ ಹಚ್ಚಿ. ಮರುದಿನ ಬೆಚ್ಚನೆಯ ನೀರಿನಲ್ಲಿ ಮುಖ ತೊಳೆಯಿರಿ.
* ಪಪ್ಪಾಯದ ಜತೆ ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಹಚ್ಚಿ. 10ರಿಂದ 15 ನಿಮಿಷ ಹಾಗೆ ಬಿಡಿ. ಅನಂತರ ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ.
* ಅಲೋವೆರಾ ನೈಸರ್ಗಿಕವಾಗಿ ತ್ವಚೆಯನ್ನು ಬಿಗಿಗೊಳಿಸುವ ಗುಣ ಹೊಂದಿದೆ. ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಇದು ತ್ವಚೆಯ ಮೇಲೆ ಮೊಡವೆ ಅಥವಾ ಕಪ್ಪು ಕಲೆ ಮೂಡದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ನಿತ್ಯವೂ ಮುಖಕ್ಕೆ ಅಲೋವೆರಾ ರಸ ಹಚ್ಚಿ.
* 1 ಟೇಬಲ್ ಚಮಚ ಮೆಂತ್ಯೆ ಪುಡಿಗೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಪೇಸ್ಟ್ ಮಾಡಿ. ಮುಖಕ್ಕೆ ಹಚ್ಚಿ 10 ನಿಮಿಷ ಬಿಡಿ. ವಿಟಮಿನ್ ಹಾಗೂ ಆ್ಯಂಟಿ ಆಕ್ಸಿಡೆಂಟ್ ಗುಣ ಹೊಂದಿರುವ ಇದನ್ನು ಪ್ರತಿನಿತ್ಯ ಹಚ್ಚುವುದರಿಂದ ಸುಂದರ ಕೆನ್ನೆ ನಿಮ್ಮದಾಗುತ್ತದೆ.
* ಮುಖಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಿ 30 ನಿಮಿಷ ಹಾಗೆ ಬಿಡಿ. ನಿಯಮಿತವಾಗಿ ಹಾಗೆ ಬಿಡುವುದರಿಂದ ತ್ವಚೆಯ ಆರೋಗ್ಯ ವೃದ್ಧಿಯಾಗುತ್ತದೆ.

Comments are closed.