ಕರಾವಳಿ

ಮೇ.1 ಉಡುಪಿಗೆ ಪ್ರಧಾನಿ ಭೇಟಿ- ವಾಹನ ಪಾರ್ಕಿಂಗ್, ಸಂಚಾರ ಮಾರ್ಗ ಬದಲಾವಣೆ ಬಗ್ಗೆ

Pinterest LinkedIn Tumblr

ಉಡುಪಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೇ.1 ರಂದು ಉಡುಪಿ ಜಲ್ಲೆಗೆ ಭೇಟಿ ನೀಡಿ, ಶ್ರೀ ಕೃಷ್ಣ ಮಠ ಭೇಟಿ ಹಾಗೂ ಸಭಾ ಕಾರ್ಯಕ್ರಮ ನಡೆಸಲಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು  1 ಲಕ್ಷ ಮಂದಿ ಸೇರುವ ನಿರೀಕ್ಷೆ ಇದ್ದು, ಈ ಹಿನ್ನಲೆಯಲ್ಲಿ ವಾಹನ ಪಾರ್ಕಿಂಗ್ ಮತ್ತು ವಾಹನ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಿ ಈ ಕೆಳಗಿನಂತೆ ಆದೇಶಿಸಲಾಗಿದೆ.

ಮೇ 1 ರಂದು, ಉಡುಪಿ ತಾಲೂಕು ಶಿವಳ್ಳಿ ಗ್ರಾಮದ , ಎಸ್.ಕೆ.ಎಂ ಜಂಕ್ಷನ್ ಬಳಿಯಿರುವ ಸುಧೀಂದ್ರ ಮಂಟಪ ರಸ್ತೆಯನ್ನು ಬೆಳಗ್ಗೆ  10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವರೇ ಬೇರೆ ವಾಹನಗಳ ಓಡಾಟವನ್ನು ನಿಷೇಧಿಸಿ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳವಾಗಿ ಆದೇಶಿಸಿದೆ.

ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗೋಸುಲಟ್ಟೆ ರಸ್ತೆ ( ಎಂಜಿ‌ಎಂ ಲೇಡಿಸ್ ಹಾಸ್ಟೆಲ್ ಬಳಿ ರಸ್ತೆ) ಯನ್ನು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡುವರೇ ಬೇರೆ ವಾಹನಗಳ ಓಡಾಟವನ್ನು ನಿಷೇಧಿಸಿ ದ್ವಿಚಕ್ರ ವಾಹನ ಪಾರ್ಕಿಂಗ್ ಸ್ಥಳವಾಗಿ ಆದೇಶಿಸಿದೆ.

ಎಂಜಿ‌ಎಂ ಕಾಲೇಜು ಮೈದಾನದಲ್ಲಿ ಪ್ರಧಾನಮಂತ್ರಿಯವರ ಸಭಾ ಕಾರ್ಯಕ್ರಮವಿರುವುದರಿಂದ ಮಧ್ಯಾಹ್ನ 12 ಗಂಟೆಯಿಂದ ಕಾರ್ಯಕ್ರಮ ಮುಕ್ತಾಯವಾಗುವವರೆಗೂ ಕೆಳಗಿನಂತೆ ವಾಹನ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.

ಕಾರ್ಕಳ ಹೆಬ್ರಿ ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ಎಲ್ಲಾ ಘನ ವಾಹನಗಳು ಇಂದ್ರಾಳಿ ಜಂಕ್ಷನ್ ಸೇತುವೆ ಬಳಿ ಯು ಟರ್ನ್ ಪಡೆದು ಮರಳಿ ಹೋಗುವುದು.

ಮಣಿಪಾಲದಿಂದ ಉಡುಪಿಗೆ ಬರುವ ಲಘು ವಾಹನಗಳು ಇಂದ್ರಾಳಿ, ಬುಡ್ನಾರು ಮಾರ್ಗವಾಗಿ ಬೀಡಿನಗುಡ್ಡೆ ಮಿಷನ್ ಕಾಂಪೌಂಡ್ ಮಾರ್ಗವಾಗಿ ಉಡುಪಿಗೆ ಬರುವುದು.

ಮಂಗಳೂರಿನಿಂದ ಉಡುಪಿಗೆ ಬರುವ ಎಲ್ಲಾ ಬಸ್ ಹಾಗೂ ವಾಹನಗಳು ಅಂಬಲ್ಪಾಡಿ, ಅಜ್ಜರಕಾಡು, ಜೋಡುಕಟ್ಟೆಗೆ ಬಂದು ಕಿನ್ನಿಮೂಲ್ಕಿ ಬಲಾಯಿಪಾದೆ ಮಾರ್ಗವಾಗಿ ಮಂಗಳೂರಿಗೆ ಹೋಗುವುದು.

ಮಲ್ಪೆಯಿಂದ ಉಡುಪಿಗೆ ಬರುವ ಎಲ್ಲಾ ಬಸ್ ಹಾಗೂ ವಾಹನಗಳು ಕಲ್ಮಾಡಿಯಾಗಿ ಅಂಬಲ್ಪಾಡಿ ಅಜ್ಜರಕಾಡು ಜೋಡುಕಟ್ಟೆಗೆ ಬಂದು ಅಲ್ಲಿಂದ ಕಿನ್ನಿಮೂಲ್ಕಿ ಮುಖೇನ ಮಲ್ಪೆಗೆ ಹೋಗುವುದು.

ಅಂಬಾಗಿಲಿನಿಂದ ಉಡುಪಿಗೆ ಬರುವ ಎಲ್ಲಾ ಬಸ್ ಹಾಗೂ ವಾಹನಗಳು ಗುಂಡಿಬೈಲು ರಸಿಕಾ ಬಾರ್ ಜಂಕ್ಷನ್ ನಿಂದಲೇ ಯು ಟರ್ನ್ ಪಡೆದು ವಾಪಸ್ ಹೋಗುವುದು.

ಕುಂದಾಪುರ ಕಡೆಯಿಂದ ಉಡುಪಿಗೆ ಆಗಮಿಸುವ ಬಸ್ಸುಗಳು ಹಾಗೂ ಇತರೆ ವಾಹನಗಳು ಕರಾವಳಿಗೆ ಬಂದು ಶಾರದಾ ಹೋಟೆಲ್ ಬಳಿಯೇ ಯು ಟರ್ನ್ ಪಡೆದು ವಾಪಸ್ ಹೋಗುವುದು.

ಉಡುಪಿ ತಾಲೂಕು ಕೊಡವೂರು ಗ್ರಾಮದ ಮೂಡಬೆಟ್ಟುವಿನಿಂದ ಆದಿ ಉಡುಪಿ ಜಂಕ್ಷನ್ ವರೆಗಿನ ರಸ್ತೆಯನ್ನು ಸಂಚಾರ ಮುಕ್ತವಾಗಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧಿಸೂಚನೆ ಹೊರಡಿಸಿ ಆದೇಶಿಸಿದ್ದಾರೆ.

Comments are closed.