ಅಂತರಾಷ್ಟ್ರೀಯ

ಭಾರತ ಸೇನೆಯಿಂದ ಇಬ್ಬರು ಪಾಕ್‌ ಪೌರರ ಹತ್ಯೆ: ಇಸ್ಲಾಮಾಬಾದ್‌

Pinterest LinkedIn Tumblr


ಇಸ್ಲಾಮಾಬಾದ್‌ : ಭಾರತೀಯ ಸೇನಾ ಪಡೆ ಇಂದು ಗಡಿ ನಿಯಂತ್ರಣ ರೇಖೆಯಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರು ಪೌರರನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದೆ ಎಂದು ಪಾಕಿಸ್ಥಾನ ಆರೋಪಿಸಿದೆ.

ಪಾಕ್‌ ವಿದೇಶಾಂಗ ವಕ್ತಾರ ಮೊಹಮ್ಮದ್‌ ಫೈಸಲ್‌ ಅವರು, “ಭಾರತೀಯ ಸೇನಾ ಪಡೆಗಳು ಇಂದು ಗುರುವಾರ ಬೆಳಗ್ಗೆ ಗಡಿ ನಿಯಂತ್ರಣ ರೇಖೆಯಲ್ಲಿನ ಪಧಾರ್‌ ವಲಯದ ಬಂಚೀರಾನ್‌ ಮತ್ತು ಥುಬ್‌ ಉಪವಲಯಗಳಲ್ಲಿ ಬ್ರಾಮ್ಲಾ ಗ್ರಾಮವನ್ನು ಗುರಿ ಇರಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಇಬ್ಬರು ಪೌರರನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದೆ’ ಎಂದು ಹೇಳಿದರು.

-ಉದಯವಾಣಿ

Comments are closed.