ರಾಷ್ಟ್ರೀಯ

2.42 ಲಕ್ಷ ಕೋಟಿ ರೂ. ಬ್ಯಾಂಕ್‌ ಸಾಲ ಮನ್ನಾ

Pinterest LinkedIn Tumblr


ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕಳೆದ ಮೂರು ವರ್ಷಗಳಲ್ಲಿ 2.42 ಲಕ್ಷ ಕೋಟಿ ರೂ. ಮೊತ್ತದ ಸಾಲವನ್ನು ಬ್ಯಾಲೆನ್ಸ್‌ ಶೀಟ್‌ಗಳಿಂದ ಮನ್ನಾ (ರೈಟ್‌ ಆಫ್‌) ಮಾಡಿವೆ.

ವಸೂಲಾಗದ ಸಾಲಗಳನ್ನು ಈ ರೀತಿಯಲ್ಲಿ ಮನ್ನಾ ಮಾಡುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ. ಬ್ಯಾಂಕ್‌ಗಳ ಬ್ಯಾಲೆನ್ಸ್‌ಶೀಟ್‌ ಅನ್ನು ಸ್ವಚ್ಛಗೊಳಿಸಲು ಇದರಿಂದ ಸಾಧ್ಯವಾಗುತ್ತದೆ. ತೆರಿಗೆ ಹೊರೆ ಇಳಿದು ದಕ್ಷತೆ ಹೆಚ್ಚುತ್ತದೆ. ಮತ್ತೊಂದು ಕಡೆ ಸಾಲಗಾರರರು ತಮ್ಮ ಸಾಲವನ್ನು ತೀರಿಸುವ ಬದ್ಧತೆಯನ್ನು ಪಾಲಿಸಬೇಕಾಗುತ್ತದೆ. ಹೀಗಾಗಿ ಇದು ಸಾಲಗಾರರಿಗೆ ಪ್ರಯೋಜನಕರವಾದ ನೀತಿಯಲ್ಲ ಎಂದು ಹಣಕಾಸು ಖಾತೆ ಸಹಾಯಕ ಸಚಿವ ಶಿವ್‌ ಪ್ರತಾಪ್‌ ಶುಕ್ಲಾ ತಿಳಿಸಿದ್ದಾರೆ.

ಹೀಗಿದ್ದರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರು ಈ ರೈಟ್‌ ಆಫ್‌ ಅನ್ನು ಕಟುವಾಗಿ ಟೀಕಿಸಿದ್ದಾರೆ.

Comments are closed.