ಕರಾವಳಿ

ಕರಾವಳಿಯಲ್ಲಿ ಸಿಡಿಲು ಸಹಿತ ಬಾರೀ ಗಾಳಿ-ಮಳೆ: ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯ

Pinterest LinkedIn Tumblr

ಉಡುಪಿ/ಕುಂದಾಪುರ: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಸಂಜೆ ೬ ಗಂಟೆ ತರುವಾಯ ಬಿರುಸಿನ ಗಾಳಿ ಮಳೆಯಾಗಿದೆ. ಕಳೆದ ತಿಂಗಳು ಹನಿಹನಿಯಾಗಿ ಮಳೆಯಾದ ತರುವಾಯ ಈ ವರ್ಷದಲ್ಲಿ ಬಂದ ಬಿರುಸಿನ ಮಳೆ ಇದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಸಂಜೆ ಬಳಿಕ ಮೋಡ ಕವಿದ ವಾತಾವರಣವಿದ್ದು ಗಾಳಿ ಬೀಸಲಾರಂಭಿಸಿದೆ. ಕೆಲವೇ ಕ್ಷಣಗಳಲ್ಲಿ ಮಿಂಚು ಸಿಡಿಲು ಸಹಿತ ಬಾರೀ ಮಳೆಯಾಗಿದ್ದು ಎರಡು ಗಂಟೆಗೂ ಮಿಕ್ಕಿ ನಿರಂತರ ಮಳೆಯಾಗಿದೆ. ವರ್ಷದ ಮೊದಲ ಮಳೆಯಾದ ಕಾರಣ ಜಿಲ್ಲಾದ್ಯಂತ ಅಲ್ಲಲ್ಲಿ ವಾಹನ ಸಂಚಾರಕ್ಕೆ ಕೊಂಚ ಅಡ್ಡಿಯಾಗಿತ್ತು. ಜಿಲ್ಲೆಯ ಕಾರ್ಕಳ, ಹೆಬ್ರಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿತ್ತು. ವಿದ್ಯುತ್ ಸಂಪರ್ಕದಲ್ಲಿ ಅಸ್ಥವ್ಯಸ್ಥವಾದ ಕಾರಣ ಜಿಲ್ಲಾದ್ಯಂತ ಪವರ್ ಕಟ್ ಆಗಿದೆ.

ಎರಡು ದಿನಗಳ ಕಾಲ ಸಂಜೆ ವೇಳೆಗೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೀನುಗಾರರಿಗೆ ಎಚ್ಚರಿಕೆ ಸಂದೇಶವೂ ಕೂಡ ರವಾನಿಸಲಾಗಿದೆ.

Comments are closed.