ಕೆಲವೊಂದು ವಿಶೇಷ ಸಂದರ್ಭದಲ್ಲಿ ತೆಂಗಿನಕಾಯಿ, ಸಕ್ಕರೆ, ಅವಲಕ್ಕಿಯನ್ನ ಸೇರಿಸಿ ತಿನಿಸು ಮಾಡಿ ತಿನ್ನುವುದನ್ನ ನೀವು ನೋಡಿರಬಹುದು. ಈ ಮೂಲಕ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯಬಹುದು.
ಯಾಕೆಂದರೆ ತೆಂಗಿನಕಾಯಿ & ಸಕ್ಕರೆ ಒಂದು ಮಾಂತ್ರಿಕ ಆಹಾರವಾಗಿದೆ. ಸಾಮಾನ್ಯ ಸಕ್ಕರೆಗಿಂತ ಆರೋಗ್ಯಕರವಾಗಿರುತ್ತದೆ. ಇದು ಒಂದು ಪೌಷ್ಟಿಕಾಂಶದ ರೂಪವಾಗಿರುತ್ತದೆ. ತೆಂಗಿನಕಾಯಿ & ಸಕ್ಕರೆಯಲ್ಲಿ ಆರೋಗ್ಯಕರ ಪ್ರಮಾಣದ ಸತು, ಕ್ಯಾಲ್ಸಿಯಂ, ಫಾಸ್ಪರಸ್, ಮೆಗ್ನೀಶಿಯಮ್ ಮತ್ತು ಇತರ ಖನಿಜಾಂಶಗಳು ಇರುತ್ತದೆ. ಜೊತೆಗೆ ಆಂಟಿ ಆಕ್ಸಿಡೆಂಟ್ ಗಳು, ಫೈಟೋನ್ಯೂಟ್ರಿಯೆಂಟ್ ಗಳು ಮತ್ತು ಫ್ಲವೊನಾಯ್ಡ್ ಗಳನ್ನ ಹೊಂದಿರುತ್ತವೆ.
ತೆಂಗಿನಕಾಯಿ & ಸಕ್ಕರೆಯು ಹೆಚ್ಚಿನ ಪ್ರಮಾಣದ ಆಹಾರದ ಫೈಬರ್ ಅನ್ನು ಜೀರ್ಣಕ್ರಿಯೆಗೆ ಒಳಪಡಿಸುತ್ತದೆ. ಇದು ಜೀರ್ಣಾಂಗಗಳ ಮೂಲಕ ಆಹಾರವನ್ನು ತಳ್ಳುವಲ್ಲಿ ಸಹಾಯ ಮಾಡುತ್ತದೆ. ಇದು ಮಲಬದ್ಧತೆಯನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್ ಗಳು ದೇಹವನ್ನು ಒತ್ತಡದಿಂದ ರಕ್ಷಿಸುತ್ತವೆ ಮತ್ತು ಕ್ಯಾನ್ಸರ್ ತಡೆಗಟ್ಟುವಲ್ಲಿ ಸಹಕಾರಿಯಾಗುತ್ತದೆ.
ರಕ್ತಹೀನತೆ ತಡೆಯುತ್ತದೆ ಮತ್ತು ಕೊಲೆಸ್ಟರಾಲ್ ಕಡಿಮೆ ಮಾಡುತ್ತದೆ. ರಕ್ತಹೀನತೆಗೆ ಕಬ್ಬಿಣದ ಕೊರತೆ ಮುಖ್ಯ ಕಾರಣ. ಹೀಗಾಗಿ ನೀವು ತೆಂಗಿನಕಾಯಿ, ಸಕ್ಕರೆ ತಿಂದರೆ ರಕ್ತ ಪರಿಚಲನೆ ಹೆಚ್ಚುತ್ತದೆ. ದೇಹದಲ್ಲಿ ಆರ್ಬಿಸಿಗಳ ರಚನೆಯನ್ನು ಪ್ರಚೋದಿಸುತ್ತದೆ. ಇದು ಸಾಮಾನ್ಯ ಸಕ್ಕರೆಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಮತ್ತು ಕಡಿಮೆ ಗ್ಲೈಸೆಮಿಕ್ ಪ್ರಭಾವವನ್ನು ಹೊಂದಿರುತ್ತದೆ. ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದು ಸಂಧಿವಾತ ಇತರ ಉರಿಯೂತದ ಕಾಯಿಲೆಗಳಿಂದ ಪರಿಹಾರ ಒದಗಿಸುತ್ತದೆ. ಆದ್ದರಿಂದ ನೀವು ಸಿಹಿ ಪಾನೀಯ ತಯಾರಿಸುವಾಗ ನಿಮ್ಮ ಪಾಕವಿಧಾನಕ್ಕೆ ಕೆಲವು ತೆಂಗಿನ ಉರಿ ಮತ್ತು ಸಕ್ಕರೆ ಸೇರಿಸಿ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳನ್ನು ಪಡೆಯಿರಿ.