ಕರಾವಳಿ

ಗರ್ಭಾವಸ್ಥೆಯಲ್ಲಿ ನೂಡಲ್ಸ್ ಸೇವನೆ ಆರೋಗ್ಯಕರವೇ… ?

Pinterest LinkedIn Tumblr

ಗರ್ಭಾವಸ್ಥೆಯಲ್ಲಿ, ಉಪ್ಪು ಮತ್ತು ಮಸಾಲೆಯುಕ್ತ ಆಹಾರದತ್ತ ಕಡುಬಯಕೆ ತೋರುವುದು ಸಾಮಾನ್ಯವಾಗಿದೆ. ಸುಲಭವಾಗಿ ದಣಿಯುವ ಮತ್ತು ಹಸಿವಿನಿಂದ ಬಳಲುವ ಗರ್ಭಿಣಿಯರು ಕೆಲವೊಮ್ಮೆ ನೂಡಲ್ಸ್ ಅಥವಾ ಸೂಪ್ಪುಗಳಂತಹ ತ್ವರಿತ ಆಹಾರವನ್ನು ಆಶ್ರಯಿಸುತ್ತಾರೆ. ಹೌದು, ಅವರು ಆರೋಗ್ಯಕರವಾದ ಆಹಾರವನ್ನು ತಿನ್ನಲು ಬಯಸುತ್ತಾರಾದರೂ,ಕೆಲವೊಮ್ಮೆ ಬಾಯಿಚಪಲಗಳು ಕೂಡಾ ಅವರನ್ನು ಇಂತಹ ಆಹಾರದತ್ತ ವಾಲಿಸುತ್ತದೆ.

ಇತರ ಸಾಮಾನ್ಯ ಸಂದೇಹಗಳಂತೆ ಮೊಳಕೆಯೊಡೆಯುವ ಬೇರೊಂದು ಪ್ರಶ್ನೆ-“ಗರ್ಭಿಣಿಯರು ನೂಡಲ್ಸ್ ಸೇವಿಸಬಹುದೇ ? ನೂಡಲ್ಸ್ ಸೇವನೆಯು ನೀವು ಗರ್ಭಿಣಿಯಾಗಿರದಿದ್ದರೂ ಒಳ್ಳೆಯದಲ್ಲ, ಹಾಗಿದ್ದ ಮೇಲೆ, ಅದು ಗರ್ಭಿಣಿಯರ ಮಟ್ಟಿಗೆ ಖಂಡಿತವಾಗಿಯೂ ಉತ್ತಮವಾಗಿರಲು ಸಾಧ್ಯವಿಲ್ಲ. ನಿಮ್ಮ ಆಹಾರ ಮತ್ತು ಜೀವನಶೈಲಿ ನಿಮ್ಮೊಳಗೆ ಬೆಳೆಯುತ್ತಿರುವ ಮಗುವಿನ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಆದ್ದರಿಂದ ನೀವು ಸೇವಿಸುವ ಯಾವುದೇ ಆಹಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು.

ಮಿತವಾದ ನೂಡಲ್ಸ್ ಸೇವನೆಯಿಂದ ಯಾವುದೇ ಹಾನಿಯುಂಟಾಗುವುದಿಲ್ಲ. ಆದರೆ, ನೀವು ನಿಯಮಿತವಾಗಿ ತಿನ್ನಲು ಪ್ರಾರಂಭಿಸಿದರೆ ಅದು ಹಾನಿಕಾರಕವಾಗುತ್ತದೆ. ನೀವು ಇನ್ಸ್ಟೆಂಟ್ ನೂಡಲ್ಸ್ ಅನ್ನು ಏಕೆ ದೂರವಿರಿಸಬೇಕು ಎಂಬುದಕ್ಕೆ ಕೆಲವು ಕಾರಣಗಳನ್ನು ಕಂಡುಕೊಳ್ಳೋಣ.

ಪೋಷಣೆ
ನಿಮ್ಮ ಬಾಯಿರುಚಿಯನ್ನು ತೃಪ್ತಿಪಡಿಸಿ, ಹಸಿವನ್ನು ಮಾರುದ್ದವಿರಿಸುತ್ತದೆಯೆಂದಲ್ಲದೇ, ನೂಡಲ್ಸ್ ಸೇವನೆಯಿಂದ ಶರೀರಕ್ಕೆ ಅಗತ್ಯವಿರುವ ಯಾವುದೇ ಪೋಷಕಾಂಶಗಳು ಲಭ್ಯವಾಗುವುದಿಲ್ಲ. ವಿಟಮಿನ್ಗಳು, ಖನಿಜಗಳು ಮತ್ತು ಪ್ರೊಟೀನ್ಗಳನ್ನು ಒಳಗೊಂಡಿರುವ ಪ್ರತಿಯೊಂದು ಊಟದ ತಟ್ಟೆಗಳಿಗೂ ತನ್ನದೇ ಆದ ಪ್ರಾಧಾನ್ಯತೆಯಿದೆ ಮತ್ತು ಪ್ರತಿ ಪೋಷಕಾಂಶ ರಹಿತ ಆಹಾರ ಸೇವನೆಯಿಂದ, ನಿಮ್ಮ ಮಗುವು ತನ್ನ ಅಗತ್ಯ ಪೋಷಕಾಂಶಗಳನ್ನು ಕಳೆದುಕೊಂಡಿದೆಯೆಂದು ಅರ್ಥ!

ತ್ವರಿತ ಸಲಹೆ – ಆರೋಗ್ಯಕರವಾಗಿಸಲು ನೂಡಲ್ಗಳಿಗೆ ಕೆಲವು ತರಕಾರಿಗಳನ್ನು(ಕ್ಯಾರೆಟ್, ಬೀನ್ಸ್, ಬಟಾಣಿ, ಹೂಕೋಸು ಇತ್ಯಾದಿ) ಮತ್ತು ಬೇಯಿಸಿದ ಮೊಟ್ಟೆಯನ್ನು ಸೇರಿಸಿ.

ಸೋಡಿಯಂ
ನೂಡಲ್ಸ್ ನಲ್ಲಿ ಅಡಕವಾಗಿರುವ ಹೆಚ್ಚಿನ ಪ್ರಮಾಣದ ಸೋಡಿಯಂ ಗರ್ಭಿಣಿಯರಿಗೆ ಉತ್ತಮವಲ್ಲ. ಇದು ಗರ್ಭಾವಸ್ಥೆಯ ರೋಗಲಕ್ಷಣಗಳನ್ನು ಇನ್ನಷ್ಟು ಕೆಡಿಸಬಹುದು.

ಸಲಹೆ
– ರುಚಿ ಮಿಶ್ರಣವನ್ನು ಸೇರಿಸುವಾಗ, ಸಂಪೂರ್ಣ ಪ್ಯಾಕೆಟ್ ಅನ್ನು ಸೇರಿಸದಿರಲು ಪ್ರಯತ್ನಿಸಿ – ಕೇವಲ ಅರ್ಧ ಪ್ಯಾಕೆಟ್‍ ಅಷ್ಟನ್ನೇ ಬಳಸಲು ಪ್ರಯತ್ನಿಸಿ. ನಿಮ್ಮ ಸ್ವಂತ ರೀತಿಯ ರುಚಿ ಮಿಶ್ರಣವನ್ನು, ಸರಿಯಾದ ಪ್ರಮಾಣದ ಉಪ್ಪು ಮತ್ತು ಮಸಾಲೆಗಳೊಂದಿಗೆ ತಯಾರಿಸಲು ಸಹ ನೀವು ಪ್ರಯತ್ನಿಸಬಹುದು.

ಮೈದಾ
ಜನಪ್ರಿಯ ನೂಡಲ್ಸ್ ಹೆಚ್ಚಿನ ಪ್ರಮಾಣದ ಮೈದಾವನ್ನು ಹೊಂದಿರುತ್ತವೆ. ಇದು ಸುಲಭವಾಗಿ ಜೀರ್ಣವಾಗುವುದಿಲ್ಲವೆಂದು ಮಾತ್ರವಲ್ಲ, ಪೋಷಣೆಯ ಮೌಲ್ಯಕ್ಕೂ ಏನನ್ನೂ ಸೇರಿಸುವುದಿಲ್ಲ. ಅಸಂಸ್ಕೃತ ಹಿಟ್ಟುಗಳಿಂದ ಮಾಡಿದ ನೂಡಲ್ ಗಳನ್ನು ಆಯ್ಕೆಮಾಡಿ.

ಎಮ್ ಎಸ್ ಜಿ
ಮೊನೊಸೋಡಿಯಮ್ ಗ್ಲುಟಾಮೇಟ್ ನೂಡಲ್ಸ್ ನ ಬಾಳಿಕೆಯನ್ನು ಹೆಚ್ಚಿಸಲು ಮತ್ತು ನೂಡಲ್ಸ್ ರುಚಿ ಹೆಚ್ಚಿಸಲು ಸೇರಿಸಲಾಗುತ್ತದೆ. ದೊಡ್ಡ ಪ್ರಮಾಣದ ಎಮ್ ಎಸ್ ಜಿ ಸೇವೆಯು ಗರ್ಭಾವಸ್ಥೆಯಲ್ಲಿ ಹಾನಿಕಾರಕವಾಗಬಹುದು, ಇದರಿಂದಾಗಿ ನೀವು ನೂಡಲ್ಸ್ ಸೇವನೆಯ ಸಂಖ್ಯೆಯನ್ನು ಮತ್ತು ಎಂ. ಎಸ್ ಜಿ ಅನ್ನು ಒಳಗೊಂಡಿರುವ ಯಾವುದೇ ಆಹಾರ ಸೇವನೆಯನ್ನು ಮಿತಿಗೊಳಿಸಬೇಕು.

ನೀಡಿದ ಸಲಹೆಗಳನ್ನು ಅನುಸರಿಸುವುದು, ನೂಡಲ್ಸ್ ಅನ್ನು ಸ್ವಲ್ಪ ಆರೋಗ್ಯಕರವಾಗಿ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಆ ಬದಲಾವಣೆಗಳೊಂದಿಗೆ, ನೀವು ಕೆಲವೊಮ್ಮೆ ಈ ಸ್ನಾಕ್ಸ್ ಅನ್ನು ಯಾವಾಗಾಲಾದರೊಮ್ಮೆ ಸೇವಿಸಬಹುದು .

Comments are closed.