ಕರ್ನಾಟಕ

ಮಾ.4 ಕ್ಕೆ ದೇವೇಗೌಡರ ಮೊಮ್ಮಗನ ವಿವಾಹ

Pinterest LinkedIn Tumblr


ಹಾಸನ: ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಗೌಡರ ಮಗ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಅವರ ಹಿರಿಯ ಪುತ್ರ ಡಾ.ಸೂರಜ್‌ ರೇವಣ್ಣ ಅವರ ವಿವಾಹ ಮಾ.4 ರಂದು ಬೆಳಗ್ಗೆ 6.45
ರಿಂದ 7.45ರ ನಡುವೆ ಕುಂಭ ಲಗ್ನದಲ್ಲಿ ಬೆಂಗಳೂರಿನ ಪ್ಯಾಲೇಸ್‌ ಮೈದಾನದಲ್ಲಿ (ವಸಂತನಗರ ದ್ವಾರ, ಮೌಂಟ್‌ ಕಾರ್ಮೆಲ್‌ ಕಾಲೇಜು ಹತ್ತಿರ )ನಡೆಯಲಿದೆ. ಮೂಲತಃ ಚನ್ನಪಟ್ಟಣ ತಾಲೂಕು ಹುಲುವಾಡಿ ಗ್ರಾಮದವರಾದ ಹಾಲಿ ಮದ್ರಾಸ್‌ ಹೈಕೋರ್ಟ್‌ ನ್ಯಾಯಾಧೀಶರಾದ ಹುಲುವಾಡಿ ಜಿ.ರಮೇಶ್‌ ಅವರ ಪುತ್ರಿ, ವಕೀಲೆ ಸಾಗರಿಕಾ ರಮೇಶ್‌ ಅವರನ್ನು ಡಾ.ಸೂರಜ್‌ ರೇವಣ್ಣ ವರಿಸಲಿದ್ದಾರೆ. ಡಾ.ಸೂರಜ್‌ ಅವರ ವಿವಾಹ ನಿಮಿತ್ತ ಎಚ್‌.ಡಿ.ರೇವಣ್ಣ ಅವರ ಹುಟ್ಟೂರು ಹರದನಹಳ್ಳಿಯ ದೇವೇಶ್ವರ
ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ಏರ್ಪಡಿಸಿ ಸುತ್ತಮುತ್ತಲಿನ ಗ್ರಾಮಸ್ಥರರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು.

-ಉದಯವಾಣಿ

Comments are closed.