ಕರ್ನಾಟಕ

ರಾಹುಲ್‌ ಗಾಂದಿಯವರೇ ಈ ಪ್ರಶ್ನೆಗಳಿಗೆ ಉತ್ತರಿಸಿ: ಕಾಂಗ್ರೆಸ್‌ ಅಧ್ಯಕ್ಷರಿಗೆ ಬಿಜೆಪಿ ಪ್ರಶ್ನೆಗಳ ಟ್ವೀಟ್‌

Pinterest LinkedIn Tumblr


ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಪ್ರವಾಸ ಕೈಗೊಂಡು ಪ್ರಚಾರದಲ್ಲಿ ತೊಡಗಿರುವ ರಾಹುಲ್‌ ಗಾಂಧಿ ಕರ್ನಾಟಕ ಬಿಜೆಪಿ ಪ್ರಶ್ನೆಗಳನ್ನು ಕೇಳಿದೆ.

ಸೋಮವಾರವಷ್ಟೇ ರಾಹುಲ್‌ ಬಸವಣ್ಣ ವಚನಗಳನ್ನು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್‌ ಆಗಿದೆ.

ಈಗ ಬಿಜೆಪಿ ಕರ್ನಾಟಕ ರಾಹುಲ್‌ ಗಾಂಧಿ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ನೀಡಿ ಎಂದು ಹೇಳಿದೆ.

ರಾಹುಲ್‌ ಗಾಂಧಿಗೆ ಬಿಜೆಪಿ ಕರ್ನಾಟಕ ಕೇಳಿರುವ ಪ್ರಶ್ನೆಗಳು ಹೀಗಿವೆ…

.@OfficeOfRG your speeches lack what Kannadigas want to hear. Don’t snub them away again. Answer their questions at least this time.#RahulMustAnswer pic.twitter.com/fa02xNxnwm
— BJP Karnataka (@BJP4Karnataka) February 24, 2018

1. ನಿಮ್ಮ ತಾಯಿ ಸೋನಿಯಾ ಗಾಂಧಿ ಮಹದಾಯಿ ನದಿ ನೀರನ್ನು ಗೋವಾದಿಂದ ಕರ್ನಾಟಕಕ್ಕೆ ಬಿಡಲಾಗುವುದಿಲ್ಲ ಎಂದು ಹೇಳಿದ್ದರು. ಕರ್ನಾಟಕ ವಿರೋಧಿ ಹೇಳಿಕೆಯನ್ನು ಖಂಡಿಸುವಿರಾ?

2. ಸರಕಾರದ ಸಂಪೂರ್ಣ ಬೆಂಬಲದಿಂದಾಗಿ ಕರ್ನಾಟಕ ಮಾಫಿಯಾ ರಾಜ್ಯ ಆಗಿದೆ. ಉತ್ತರ ಕರ್ನಾಟಕದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರೇ ಮರಳು ಮಾಫಿಯಾದ ಕಿಂಗ್‌ ಪಿನ್‌ ಆಗಿದ್ದಾರೆ. ಇದನ್ನು ಪ್ರಶ್ನಿಸುವವರ ಮೇಲೆ ನಿರಂತರ ಹಲ್ಲೆಗಳಾಗುತ್ತಿದೆ.
ಕಿಂಗ್‌ಪಿನ್‌ಗಳು ಸಚಿವರೇ ಆಗಿರುವುದರಿಂದ ಸರಕಾರಿ ಪ್ರಾಯೋಜಿತ ಮಾಫಿಯಾ ರಾಜ್ಯ ಅಲ್ಲವೇ?

3 ಶಾಂತಿ ಪ್ರಿಯ ಕನ್ನಡಿಗರ ಮೇಲೆ ಕಾಂಗ್ರೆಸ್‌ ಸಚಿವರು, ಶಾಸಕರು, ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಶಾಸಕ ಎನ್‌.ಎ. ಹ್ಯಾರಿಸ್‌ ಪುತ್ರ ಮೊಹಮ್ಮದ್ ನಲಪಾಡ್‌ ಪುತ್ರ ಮತ್ತು ಅವರ ಗೂಂಡಾಗಳು ಕನ್ನಡಿಗನ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ಈ ಶಾಸಕರು ತಮ್ಮ ಅಧಿಕಾರ ಪ್ರಭಾವ ಬಳಸಿ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ. ಅಲ್ಲದೇ ತನಿಖೆ ನಡೆಸಿದ ಪೊಲೀಸ್ ಅಧಿಕಾರಿಯನ್ನೇ ಅವಾಚ್ಯವಾಗಿ ನಿಂದಿಸಿದ್ದಾರೆ. ಕನ್ನಡಿಗನ ಮೇಲೆ ಆಗಿರುವ ಅಮಾನವೀಯ ಹಲ್ಲೆಯನ್ನು ಖಂಡಿಸುವಿರಾ? ಶಾಸಕರನ್ನು ಪಕ್ಷದಿಂದ ಉಚ್ಚಾಟನಾ ಮಾಡುವಿರಾ?

4 ಸಿದ್ದರಾಮಯ್ಯ ಸರಕಾರದ ಆಡಳಿತದಲ್ಲಿ 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್‌ ಮಹತ್ವದ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಆದರೆ ಅನುದಾನ ಮಾತ್ರ ನೀರಿನಂತೆ ಖರ್ಚಾಗುತ್ತಿದೆ.
ಕರ್ನಾಟಕದ ಇತಿಹಾಸದಲ್ಲಿಯೇ ಈ ಸರಕಾರ ರೈತ ವಿರೋಧಿ ಸರಕಾರ ಎಂಬುದು ಸ್ಪಷ್ಟವಾಗಿಲ್ಲವೇ?

ಈ ರೀತಿಯಾಗಿ ಬಿಜೆಪಿ ಪ್ರಶ್ನೆಗಳನ್ನು ಕೇಳಿದೆ.

ರಾಹುಲ್ ಮಸ್ಟ್‌ ಆನ್ಸರ್‌ ಹ್ಯಾಷ್‌ಟ್ಯಾಗ್‌ನಲ್ಲಿ ಇವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

Comments are closed.