ಕರಾವಳಿ

ಬ್ರಹ್ಮಾವರ: ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 34 ಜಾನುವಾರುಗಳ ರಕ್ಷಣೆ; ವಾಹನ, ಆರೋಪಿಗಳು ವಶಕ್ಕೆ

Pinterest LinkedIn Tumblr

ಉಡುಪಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಅಡ್ಡಗಟ್ಟಿದ ಪೊಲೀಸರು 34 ಜಾನುವಾರುಗಳನ್ನು ರಕ್ಷಿಸಿದ್ದಾರೆ.

ಬ್ರಹ್ಮಾವರ ಸಿಪಿಐ ಶ್ರೀಕಾಂತ್ ಕೆ. ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ಆಕಾಶವಾಣಿ ಜಂಕ್ಷನ್ ಬಳಿ ಭರಣಿ ಪೆಟ್ರೋಲ್‌ ಬಂಕ್‌ ಎದುರು ಎರಡು ಕಂಟೇನರ್‌ ವಾಹನ ಒಂದರ ಹಿಂದೆ ಒಂದು ಕುಂದಾಫುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದು , ವಾಹನಗಳ ಬಗ್ಗೆ ಅನುಮಾನಗೊಂಡು ನಿಲ್ಲಿಸಿ ಪರಿಶೀಲಿಸಿದಾಗ ಇಚರ್‌ ಕಂಟೇನರ್‌ ವಾಹನದಲ್ಲಿ 9 ಎತ್ತು ಮತ್ತು 8 ಕೋಣ ಹಾಗೂ ಇನ್ನೊಂದು ವಾಹನದಲ್ಲಿ 17 ಕೋಣಗಳಿದ್ದು್ ಕೋಣಗಳನ್ನು ಮತ್ತು ಎತ್ತುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಕಟ್ಟಿ ಯಾವುದೇ ಪರವಾನಿಗೆ ಇಲ್ಲದೇ ಸಾಗಿಸಲಾಗುತ್ತಿತ್ತು.

ಕೋಣಗಳನ್ನು ಮತ್ತು ಎತ್ತುಗಳನ್ನು ಕಳವು ಮಾಡಿಕೊಂಡು ಮಾಂಸಕ್ಕಾಗಿ ವದೆ ಮಾಡಲು ಹೊರ ರಾಜ್ಯವಾದ ಕೇರಳ ರಾಜ್ಯದ ಕಾಸರಗೋಡಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣದ ಆರೋಪಿಗಳಾದ ಬಸಪ್ಪ ಕನಗಾರ್, ಮಲ್ಲನ ಗೌಡ ರಾಮನ ಗೌಡ, ಆನಂದ, ಶ್ರೀಶೈಲಯ್ಯ ಎಮ್‌ಹಿರೇಮಠ, ಆರೀಪ್‌, ಜಾಪರ್ ಸಾಧಿಕ್‌ ಎಂಬವರನ್ನು ಹಾಗೂ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.