ಕರಾವಳಿ

ಸಿದ್ದರಾಮಯ್ಯ ಸರ್ಕಾರ ಪತನ : ಕರ್ನಾಟಕದಲ್ಲಿ ಪ್ರಚಂಡ‌ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ : ಮಂಗಳೂರಿನಲ್ಲಿ ಅಮಿತ್ ಶಾ

Pinterest LinkedIn Tumblr

ಮಂಗಳೂರು: ಕರ್ನಾಟಕದಲ್ಲಿ‌ ಸಿದ್ದರಾಮಯ್ಯ ಸರ್ಕಾರ ಅಂತ್ಯಕಾಣಲಿದ್ದು, ಮುಂದಿನ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಪ್ರಚಂಡ‌ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದರು.

ಮಂಗಳೂರಿನ ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಜನ, ಹತ್ಯೆ, ಮಾಫಿಯಾ ರಾಜ್, ಭ್ರಷ್ಟ ಸರ್ಕಾರದ ವಿರುದ್ಧವಿದ್ದಾರೆ. ನಾಲ್ಕು ವರ್ಷದಲ್ಲಿ ಹಲವು ಆರ್‌ಎಸ್ಎಸ್, ಬಿಜೆಪಿ ಕಾರ್ಯಕರ್ತರ ಹತ್ಯೆಯಾಗಿದೆ. ಕಾಂಗ್ರೆಸ್ ಸರ್ಕಾರ ತುಷ್ಟೀಕರಣ ರಾಜನೀತಿ ಅನುಸರಿಸುತ್ತಿದೆ. ಕರ್ನಾಟಕದಲ್ಲಿ‌ ಸಿದ್ದರಾಮಯ್ಯ ಸರ್ಕಾರ ಬದಲಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರದ ಸಮಯ ಮುಗಿದಿದೆ. ಚುನಾವಣೆ ನಂತರ ಬಿಜೆಪಿ ಸರ್ಕಾರ ಬರಲಿದೆ ಎಂದು ಹೇಳಿದರು.

ಕರ್ನಾಟಕ ಜನತೆ ಪರಿವರ್ತನೆಗೆ ತಯಾರಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಂಘಟನಾತ್ಮಕ ಚಟುವಟಿಕೆಗೆ ಬಂದಿದ್ದೇನೆ ದ.ಕ. ಜಿಲ್ಲೆಯಲ್ಲಿ ಸಂಘಟನಾತ್ಮಕ‌ ಕಾರ್ಯಕ್ರಮ ಮಾಡಲಾಗಿದೆ. ರಾಜ್ಯದ ಎಲ್ಲಾ ಕಡೆ ಸಂಘಟನಾತ್ಮಕ ಕಾರ್ಯಕ್ರಮ‌ ಮಾಡಲಾಗುವುದು ಎಂದರು.

ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನು ಕೊಟ್ಟಿದೆ ಎಂದು ಪ್ರಶ್ನಿಸುತ್ತಾರೆ. 13ನೇ ಕಮಿಷನ್‌ನಲ್ಲಿ ಕಾಂಗ್ರೆಸ್ ಸರ್ಕಾರ 88 ಸಾವಿರ ಕೋಟಿ‌‌ ನೀಡಿತ್ತು. 14 ನೇ ಕಮಿಷನ್‌ನಲ್ಲಿ 2 ಲಕ್ಷದ 19 ಸಾವಿರ ಕೋಟಿ ನೀಡಿದೆ. ವಿವಿಧ ಯೋಜನೆಗಳ ಮೂಲಕ 1 ಲಕ್ಷಕ್ಕೂ ಅಧಿಕ ಕೋಟಿ ಅನುದಾನ ನೀಡಿದೆ. ಇದರ ಅನುಷ್ಠಾನ ಕರ್ನಾಟಕದಲ್ಲಿ ಸರಿಯಾಗಿ ಆಗಿಲ್ಲ ಎಂದು ಆರೋಪಿಸಿದರು.

ವಿದ್ವತ್ ಬಿಜೆಪಿ ಕಾರ್ಯಕರ್ತ ಅಲ್ಲ :ಸಮಜಾಯಿಷಿ ನೀಡಿದ ಶಾ

ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ ಹಲ್ಲೆ ನಡೆಸಿ ಗಾಯಗೊಳಿಸಿರುವ ವಿದ್ವತ್ ಬಿಜೆಪಿ ಕಾರ್ಯಕರ್ತ ಎಂದಿದ್ದ ಅಮಿತ್ ಶಾ ತಮ್ಮ ಹೇಳಿಕೆ ಬದಲಾಯಿಸಿ ವಿದ್ವತ್ ಬಿಜೆಪಿ ಕಾರ್ಯಕರ್ತ ಅಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕುಕ್ಕೆಯಲ್ಲಿ ಮಾತನಾಡುತ್ತಾ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ವಿದ್ಯತ್ ಬಿಜೆಪಿ ಕಾರ್ಯಕರ್ತ. ಹಾಗಾಗಿ ಹಲ್ಲೆಕೋರನ ಮೇಲೆ ಕೇಸು ದಾಖಲಿಸಲು ತಡಮಾಡಿದ್ದಾರೆ, ಅಷ್ಟೆ ಅಲ್ಲ ಆತ ಅಲ್ಪಸಂಖ್ಯಾತ ಎಂಬ ಕಾರಣಕ್ಕೆ ಕೇಸು ದಾಖಲಿಸಲು ವಿಳಂಬ ಮಾಡಲಾಗಿದೆ ಎಂದು ಹೇಳಿದ್ದರು.

ಕುಕ್ಕೆಯಲ್ಲಿ ಅಮಿತ್ ಶಾ ಅಮಿತ್ ಶಾ ಅವರಿಂದ ಈ ಹೇಳಿಕೆ ಹೊರ ಬಿದ್ದ ತಕ್ಷಣವೇ ಚುರುಕಾದ ಕಾಂಗ್ರೆಸ್ ಮುಖಂಡರು ‘ಯಾರೇ ಹಲ್ಲೆಗೆ ಒಳಗಾಗಲಿ, ಸಾಯಲಿ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಬಿಡುತ್ತಾರೆ’ ಎಂದು ಗೇಲಿ ಮಾಡಿದ್ದರು.
ಕೂಡಲೇ ತಮ್ಮ ತಪ್ಪಿನ ಅರಿವು ಮಾಡಿಕೊಂಡ ಅಮಿತ್ ಶಾ ಅವರು ಸುರತ್ಕಲ್‌ನಲ್ಲಿ ಸುದ್ದಿಗೋಷ್ಠಿ ನಡೆಸುವ ಸಮಯ ತಮ್ಮ ಹೇಳಿಕೆಗೆ ಸ್ಪಷ್ಟಣೆ ನೀಡಿ, ‘ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ ನನ್ನ ತಪ್ಪು ಹೇಳಿಕೆಯಿಂದ ಮುಖ್ಯಮಂತ್ರಿಗೆ ಚರ್ಚೆ ಮಾಡಲು ವಿಷಯ ಸಿಕ್ಕಿದೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಸಿಟಿ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮುಂತಾದವರು ಉಪಸ್ಥಿತರಿದ್ದರು.

Comments are closed.