ಕರಾವಳಿ

ದೇವಾಲಯಗಳ ಮೂಲಕ ಸಮಾಜ ಒಗ್ಗೂಡಲು ಸಾಧ್ಯ: ಬಾರ್ಕೂರು ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ಡಾ| ಸಂತೋಷ ಗುರೂಜಿ ಅಭಿಮತ

Pinterest LinkedIn Tumblr

ಕುಂದಾಪುರ: ದೇವಾಲಯಗಳ ಮೂಲಕ ಸಮಾಜಗಳು ಒಗ್ಗೂಡಬೇಕು ಈ ಮೂಲಕ ಬಲಿಷ್ಟ ಹಿಂದೂ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಜಗತ್ತು ದೇವರ ಸ್ರಷ್ಟಿಯಾಗಿದ್ದು ನಾವು ಭಕ್ತಿ ಹಾಗೂ ಪ್ರೀತಿಯನ್ನು ಮಾತ್ರವೇ ದೇವರಿಗೆ ನೀಡಲು ಸಾಧ್ಯವಾಗಿದ್ದು ಅದನ್ನು ದೇವರು ಸ್ವೀಕರಿಸುತ್ತಾನೆ. ನಾವು ನೀಡಿದ ಹಣವನ್ನು ಬೇರೊಂದು ರೂಪದಲ್ಲಿ ವಾಪಾಸ್ ನಮಗೆ ನೀಡುತ್ತಾನೆಂದು ಬಾರಕೂರು ಮಹಾಸಂಸ್ಥಾನದ ಶ್ರೀ ವಿಶ್ವಸಂತೋಷ ಭಾರತೀ ಶ್ರೀಪಾದರು ಹೇಳಿದರು.

ಅವರು ಸೋಮವಾರದಂದು ಬಾರ್ಕೂರಿನ ಕಚ್ಚೂರು ಗ್ರಾಮದ ನೂತನವಾಗಿ ನಿರ್ಮಿಸಿದ ಶ್ರೀ ಏಕನಾಥೇಶ್ವರೀ ದೇವಸ್ಥಾನದಲ್ಲಿ ನಡೆದ ಶ್ರೀ ಏಕನಾಥೇಶ್ವರೀ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಡೆಯಲಿ ಬಾರಕೂರು ಉತ್ಸವ…
ವಿವಿಧ ಸಮಾಜಗಳನ್ನು ಒಗ್ಗೂಡಿಸಿಕೊಂಡು ಒಂದು ಸಭೆಯಾಗಬೇಕು. ಪ್ರತಿಯೊಂದು ಜಾತಿಗಳ ಮೂಲ ದೇವಸ್ಥಾನ, ಮೂಲ ಕೇಂದ್ರವಿರುವುದು ಬಾರಕೂರಿನಲ್ಲಿ. ೨ ಸಾವಿರ ವರ್ಷಗಳ ಇತಿಹಾಸ ಬಾರ್ಕೂರಿಗಿದೆ. ಇದೊಂದು ವಿಶಿಷ್ಟ ನಾಡಾಗಿದ್ದು ಪ್ರತಿ ಸಮುದಾಯದ ಮುಖಂಡರನ್ನು ಒಂದುಗೂಡಿಸಬೇಕು. ಸರಕಾರ ಹಂಪಿ ಉತ್ಸವ, ಕೆಳದಿ ಉತ್ಸವ, ಮೈಸೂರು ಉತ್ಸವ ಮಾಡುವಂತೆಯೇ ಮಾಡುವಂತೆಯೇ ಬಾರ್ಕೂರು ಉತ್ಸವ ನಡೆಯಬೇಕಿದೆ ಎಂದರು.

ಅಪವಾದಕ್ಕೆ ಹೆದರಬೇಡಿ..!
ದೇವಾಡಿಗ ಸಮುದಾಯ ಇತಿಹಾಸ ಭೂಮಿಯಲ್ಲಿ ಏಕನಾಥೇಶ್ವರೀ ದೇವಿಗೆ ಆಲಯ ಮಾಡಿದ್ದು ಇದು ಧರ್ಮದ ಸೂಚಕವಾಗಿದೆ. ಇದೊಂದು ಭಾಗ್ಯದ ಕೆಲಸವಾಗಿದೆ. ಜನರನ್ನು ಕ್ರೋಢೀಕರಿಸಿಕೊಂಡು ಮಾಡಿದ ಈ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಮಹಾನ್ ಕಾರ್ಯವಾದ ಬೆನ್ನಲ್ಲೇ ಕೆಲವು ಅಪವಾದಗಳು ಬರುವುದು ಸಹಜ. ಅಂತಹ ಅಪವಾದ ಬಂದರೇ ಮಾತ್ರವೇ ಮಾಡಿದ ಕಾರ್ಯ ದೇವರಿಗೆ ತಲುಪಿದೆ ಎಂದರ್ಥ. ಇದಕ್ಕೆ ಯಾರೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಗುರೂಜಿ ಹೇಳಿದರು.

ದೇವಸ್ಥಾನದ ವಿಶ್ವಸ್ಥರ ಪರವಾಗಿ ದುಬೈ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ಮಾತನಾಡಿ, ಒಂದು ಮನೆಯನ್ನು ಕಟ್ಟುವುದೇ ಸಾಹಸದ ಕೆಲಸವಾಗಿಸವಾಗಿದ್ದು ದೇವಾಡಿಗ ಸಮಾಜದ ಎಲ್ಲರನ್ನೂ ಒಂದುಗೂಡಿಸಿ ಅವರನ್ನು ವಿಶ್ವಾಸಕ್ಕೆ ಪಡೆದು ಎರಡು ವರ್ಷದ ಅಂತರದಲ್ಲಿ ಸುಮಾರು ೬ ಕೋಟಿಗೂ ಅಧಿಕ ಹಣ ಸಂಗ್ರಹ ಮಾಡಿ ದೇವಸ್ಥಾನ ನಿರ್ಮಾಣ ಮಾಡಿರುವುದು ನಿಜಕ್ಕೂ ಸಂಘಟಿತ ಶಕ್ತಿಯನ್ನು ತೋರಿಸುತ್ತದೆ ಎಂದರು.

ಬಾರ್ಕೂರು ಸೈಂಟ್ ಪೀಟರ್ ಚರ್ಚ್ ಧರ್ಮಗುರು ವಂ. ಫಿಲಿಪ್ ಮೇರಿ ಅರಾನ್ಹ, ಮಾಲಿಕ್ ಜುಮ್ಮಾ ಮಸೀದಿ ಧರ್ಮಗುರು ಮಹಮ್ಮದ್ ರಫೀಕ್ ಮದನಿ, ಚಿನ್ಮಯ್ ಮಿಷನ್ ಕರ್ನಾಟಕದ ಆಚಾರ್ಯ ಶ್ರೀ ದಾಮೋದರ ಚೈತನ್ಯ, ಬಾರ್ಕೂರು ಗ್ರಾ.ಪಂ ಅಧ್ಯಕ್ಷೆ ಶೈಲಾ ಡಿಸೋಜಾ ಶುಭಹಾರೈಸಿದರು. ಇದೇ ಸಂದರ್ಭ ದೇವಸ್ಥಾನ ಕಾರ್ಯ ನಿರ್ವಹಿಸಿದ ಮಂಜುನಾಥ್ ಮುರ್ಡೇಶ್ವರ ಹಾಗೂ ೧-೨ ಲಕ್ಷ ಧನಸಹಾಯ ನೀಡಿದ ದಾನಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಟಿ. ಸತೀಶ್ ಪೈ, ಬಸ್ರೂರು ಶ್ರೀ ಮಹಲಸಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಟಿ. ನಾರಾಯಣ ಎಂ ಪೈ, ಉದ್ಯಮಿ ಬಾರ್ಕೂರು ಶಾಂತಾರಾಮ ಶೆಟ್ಟಿ, ಉದ್ಯಮಿ ರಾಮಣ್ಣ ಶೇರಿಗಾರ್, ದೈವಜ್ನ ಶ್ರೀಧರ್ ಗೋರೆ ನೆಲ್ಯಾಡಿ, ಬಾರಕೂರಿನ ವಿವಿಧ ದೇವಸ್ಥಾನಗಳ ಮುಖ್ಯಸ್ಥರಾದ ಡಾ. ಬಿ. ಮಂಜುನಾಥ ಸೋಮಯಾಜಿ, ಬಾಬು ಶಿವ ಪೂಜಾರಿ, ಬಿ. ಮಂಜುನಾಥ ರಾವ್, ಕ್ರಷ್ಣಪ್ಪ ಉಪ್ಪೂರು, ಪುರುಷೋತ್ತಮ ಶೆಟ್ಟಿಗಾರ್, ಡಿ.ಎಸ್. ಚೆನ್ನಪ್ಪ, ಪ್ರಸಾದ್ ಭಟ್, ಉದಯಕುಮಾರ್ ಶೆಟ್ಟಿ, ಕೆ. ಗೋಪಾಲರಾವ್, ಅನಂತ ಪದ್ಮನಾಭ ವೆಂಕಟರಮಣ ಉಡುಪ, ಮಧುಸೂದನ್, ಮಹಾಬಲೇಶ್ವರ ಭಟ್, ಸುರೇಂದ್ರ ಹೆಗ್ಡೆ, ವರದ ಅಡಿಗ, ಗಣೇಶ್ ಜೋಗಿ, ಶಾಂತಾರಾಮ್ ರಾವ್, ವೈ ಗಣಪತಿ ಕಾಮತ್, ರಮೇಶ್ ಭಟ್, ಬಿ.ಎಂ ಭಟ್, ಪ್ರಭಾಕರ ಬಾಯರಿ, ಶಂಕರ್ ನಾಯಕ್, ಬಿ.ಎಂ ಕ್ರಷ್ಣ, ಮುಂಬೈ ಶ್ರೀ ಭುವನೇಶ್ವರೀ ಶಿವ ಟೆಂಪಲ್ ಆಡಳಿತ ಧರ್ಮದರ್ಶಿ ಅಶೋಕ್ ಎನ್. ತ್ರಿವೇದಿ, ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ ಕೋಶಾಧಿಕಾರಿ ಹಾಗೂ ವಿಶ್ವಸ್ಥ ಬಿ. ಜನಾರ್ಧನ ದೇವಾಡಿಗ ಬಾರ್ಕೂರು, ದೇವಸ್ಥಾನ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಹಾಗೂ ವಿಶ್ವಸ್ಥರಾದ ಧರ್ಮಪಾಲ ಯು ದೇವಾಡಿಗ ಮುಂಬೈ, ಮುಖ್ಯ ಸಂಚಾಲಕರು ಮತ್ತು ವಿಶ್ವಸ್ಥರಾದ ಹಿರಿಯಡ್ಕ ಮೋಹನ್‌ದಾಸ್ ಮುಂಬೈ, ವಿಶ್ವಸ್ಥರಾದ ಸುರೇಶ ಡಿ. ಪಡುಕೋಣೆ ಮುಂಬೈ, ಹರೀಶ್ ಶೇರಿಗಾರ್ ದುಬೈ, ನಾರಾಯಣ ಎಂ. ದೇವಾಡಿಗ ದುಬೈ, ದಿನೇಶ್ ಸಿ. ದೇವಾಡಿಗ ದುಬೈ, ಜನಾರ್ಧನ ಎಸ್. ದೇವಾಡಿಗ ಮುಂಬೈ, ಎನ್. ರಘುರಾಮ ದೇವಾಡಿಗ ಶಿವಮೊಗ್ಗ ಇದ್ದರು.

ಶ್ರೀ ಏಕನಾಥೇಶ್ವರೀ ದೇವಸ್ಥಾನ ಟ್ರಸ್ಟ್ (ರಿ.) ಬಾರ್ಕೂರಿನ ಅಧ್ಯಕ್ಷ ಮತ್ತು ಆಡಳಿತ ವಿಶ್ವಸ್ಥರಾದ ಬಿ. ಅಣ್ಣಯ್ಯ ಶೇರಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸ್ಥ ನರಸಿಂಹ ಬಿ. ದೇವಾಡಿಗ ಉಡುಪಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಗಣೇಶ್ ದೇವಾಡಿಗ ಬ್ರಹ್ಮಗಿರಿ ಸ್ವಾಗತಿಸಿದರು, ಪ್ರಕಾಶ್ ಪಾವಂಜೆ ಪ್ರಾರ್ಥಿಸಿದರು. ಯಾದವ ದೇವಾಡಿಗ ಹಳೆಯಂಗಡಿ ವಿಶ್ವಸ್ಥರನ್ನು ಅಭಿನಂದಿಸಿದರು, ರಾಮದಾಸ್ ಪಾವಂಜೆ, ಗಣೇಶ್ ಕಿರಿಮಂಜೇಶ್ವರ ಕಾರ್ಯಕ್ರಮ ನಿರೂಪಿಸಿ, ಜನಾರ್ಧನ ಪಡುಪಣಂಬೂರು ಧನ್ಯವಾದವಿತ್ತರು.

Comments are closed.