ಉಡುಪಿ: ಶಿರೂರು ಶ್ರೀಗಳ ಕಾರನ್ನು ಹಾನಿಗೊಳಿಸಿದ ಕಿಡಿಗೇಡಿಗಳು! ಶಿರೂರು ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ಕಾರನ್ನು ಕಿಡಿಗೇಡಿಗಳು ಹಾನಿ ನಡೆಸಿರುವ ಘಟನೆ ತಡರಾತ್ರಿ ನಡೆದಿದೆ. ಉಡುಪಿಯ ಹಿರಿಯಡ್ಕ ಬಳಿಯಿರುವ ಶಿರೂರು ಮಠದ ಹೊರ ಭಾಗದಲ್ಲಿ ನಿಲ್ಲಿಸಿದ್ದ ಕಾರಿಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಶಿರೂರು ಮಠದ ಗೋಶಾಲೆಯಿಂದ ,ಗೋವುಗಳನ್ನ ಕಳವು ಮಾಡಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಶಿರೂರು ಶ್ರೀಗಳು ಗೋ ಕಳ್ಳರನ್ನ ಹಿಡಿಯಲು ಪ್ರಯತ್ನಿಸಿದಾಗ ಮಾರಾಕಸ್ತ್ರಗಳನ್ನ ತೋರಿಸಿ ಪರಾರಿಯಾಗಿದ್ದರು.
ಇದೀಗ ಅದೇ ತಂಡ ಸ್ವಾಮೀಜಿಗಳನ್ನ ಭಯ ಪಡಿಸಲು ಈ ಕೃತ್ಯ ಮಾಡಿರಬಹುದೆಂದು ಸಂಶಯ ವ್ಯಕ್ತವಾಗಿದೆ. ಆರೋಪಿಗಳನ್ನ ಶೀಘ್ರ ಪತ್ತೆ ಹಚ್ಚುವಂತೆ ಹಿರಿಯಡ್ಕ ಠಾಣೆಯಲ್ಲಿ ಶ್ರೀರೂರು ಶ್ರೀಗಳು ದೂರನ್ನ ದಾಖಲಿಸಿದ್ದಾರೆ.