ಕರಾವಳಿ

ಸಮಸ್ಯೆಯನ್ನು ಪರಿಹರಿಸಬಲ್ಲ ಪುಟ್ಟಪುಟ್ಟ ಲೈಫ್ ಹ್ಯಾಕ್ಸ್

Pinterest LinkedIn Tumblr
ಮನುಷ್ಯನ ದೇಹದಷ್ಟು ಕ್ಲಿಷ್ಟಕರವಾದದ್ದು ಇನ್ನೊಂದಿಲ್ಲ. ಎಷ್ಟು ತಿಳಿದುಕೊಂಡರು ಏನೋ ಒಂದು ಪ್ರಶ್ನಾರ್ಥಕ ಚಿನ್ಹೆ ಉಳಿದೇ ಇರುತ್ತದೆ.. ಯಾವುದೋ ಹೊಸ ಸಂಗತಿ ಗೊತ್ತಾಗುತ್ತಲೇ ಇರುತ್ತದೆ… ಕೆಲವು ಸಂಗತಿಗಳಿಗೆ ಯಾವುದೇ ಸಂಬಂಧ ಇರಲ್ಲ. ಉದಾಹರಣೆಗೆ ಈ 6 ಲೈಫ್ ಹ್ಯಾಕ್ಸ್ ನೋಡಿ… ಸಮಸ್ಯೆಯನ್ನು ಪರಿಹರಿಸಲು ಮಾಡುವ ಪುಟ್ಟಪುಟ್ಟ ಪ್ರಯತ್ನಗಳೇ ನಮ್ಮನ್ನು ಆ ಸಮಸ್ಯೆಯಿಂದ ದೂರ ಮಾಡುತ್ತವೆ.
1. ಸೊಳ್ಳೆ ಕಚ್ಚಿದ ಜಾಗದಲ್ಲಿ ಡಿಯೋಡ್ರೆಂಟ್ ಸ್ಪ್ರೇ ಮಾಡಿದರೆ ತುರಿಕೆ ಕಡಿಮೆಯಾಗುತ್ತದೆ.
2. ನಾಲಿಗೆಯನ್ನು ಮಡಿಚಿ ಹಲ್ಲಿಗೆ ವಿರುದ್ಧವಾಗಿ ಇಟ್ಟುಕೊಂಡರೆ ಸೀನನ್ನು ತಡೆಯಬಹುದು.
3. ಕೆಲವರು ಎದ್ದುಬಿದ್ದು ನಗುತ್ತಿರುತ್ತಾರೆ. ನಗು ತಡೆದುಕೊಳ್ಳುವುದು ಅವರಿಂದ ಸಾಧ್ಯವಾಗಲ್ಲ. ಅಂತಹ ಸಂದರ್ಭದಲ್ಲಿ ತಮ್ಮನ್ನು ತಾವು ಚಿವುಟಿಕೊಂಡಂತೆ ಮಾಡಿದರೆ ನಗುವನ್ನು ತುಂಬಾ ಸರಳವಾಗಿ ತಡೆಯಬಹುದು.
4. ನಮಗೆ ಅರ್ಜೆಂಟ್ ಆಗಿ ಟಾಯ್ಲೆಟ್ ಬರುತ್ತಿದೆ, ಸುತ್ತಮುತ್ತ ಎಲ್ಲೂ ಬಾತ್‌ರೂಮ್‍ಗಳಿಲ್ಲ. ನೋ ಪ್ರಾಬ್ಲಂ ಈಗ ನೀವು ಮಾಡಬೇಕಾದದ್ದು ಸೆಕ್ಸ್ ಬಗ್ಗೆ ಆಲೋಚಿಸುವುದು.
5. ಕಣ್ಣನ್ನು ದೊಡ್ಡದಾಗಿ ತೆರೆದು, ಕಣ್ಣಿನ ರೆಪ್ಪೆಗಳನ್ನು ಬಡಿಯದೆ ಕಂಟ್ರೋಲ್ ಮಾಡಿಕೊಂಡರೆ. ಅಳುವನ್ನೂ ಸಹ ತಡೆಯಬಹುದು.
6. ಹಲ್ಲುನೋವಿನಿಂದ ನರಳುತ್ತಿದ್ದಾಗ ಚಿಕ್ಕ ಮಂಜುಗಡ್ಡೆ ತೆಗೆದುಕೊಂಡು ಹೆಬ್ಬೆರಳು ತೂರುಬೆರಳಿನ ನಡುವೆ ಉಜ್ಜಿಕೊಂಡರೆ ಹಲ್ಲುನೋವಿನಿಂದ ಉಪಶಮನ ಪಡೆಯಬಹುದು.

Comments are closed.