ಕರಾವಳಿ

ದ.ಕ. ಜಿಪಂ : ವಿಚಾರಣೆ ವೇಳೆ ಮೂರು ವರ್ಷದಲ್ಲಿ ಮೂರು ಬಾರಿ ಕುಸಿದು ಬಿದ್ದ ಸುಂದರ ಪೂಜಾರಿ

Pinterest LinkedIn Tumblr

ಮಂಗಳೂರು, ಜನವರಿ. 28: ದ.ಕ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯುತ್ತಿದ್ದ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಅವರು ಹಟತ್ ಕುಸಿದು ಬೀಳುವ ಮೂಲಕ ಸುದ್ಧಿಯಾಗಿದ್ದಾರೆ.

ದ.ಕ. ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ರವಿವಾರ ಮಧ್ಯಾಹ್ನ ನಡೆಯುತ್ತಿದ್ದ ಉಪ ಲೋಕಾಯುಕ್ತರ ವಿಚಾರಣೆ ಸಂದರ್ಭ ಸುಂದರ ಪೂಜಾರಿ ಅವರು ಹಠಾತ್ ಕುಸಿದು ಬೀಳುವ ಮೂಲಕ ಮತ್ತೆ ಸುದ್ಧಿಯಾಗಿದ್ದಾರೆ. ಈ ಹಿಂದೆಯೂ ಎರಡು ಬಾರಿ ಇದೇ ರೀತಿ ಅವರು ಕುಸಿದು ಬಿದ್ದು ಸುದ್ದಿಯಾಗಿದ್ದರು.

ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿಯವರು ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಸಾರ್ವಜನಿಕರ ಅಹವಾಲಿಗೆ ಸಂಬಂಧಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿಯವರಿಂದ ಉಪ ಲೋಕಾಯುಕ್ತರು ವಿವರಣೆ ಬಯಸಿದರು. ಅದರಂತೆ ಎದ್ದು ನಿಂತು ಮಾಹಿತಿ ನೀಡುತ್ತಿದ್ದ ಸುಂದರ ಪೂಜಾರಿ ಅವರು ಹಠಾತ್ ಕುಸಿದರು. ಕೂಡಲೇ ಪಕ್ಕದಲ್ಲಿದ್ದ ಅಧಿಕಾರಿಗಳು ಅವರಿಗೆ ಆಸರೆಯಾದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಹಿಂದೆಯೂ ಎರಡು ಬಾರಿ ಮಹಿಳಾ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಹಾಗೂ ಅತ್ಯಾಚಾರ ನಿಯಂತ್ರಣ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಅವರು ಮಂಗಳೂರಿನಲ್ಲಿ ಸಭೆ ನಡೆಸಿದ ವೇಳೆ ಈ ಘಟನೆ ನಡೆದಿದ್ದವು. ಎರಡೂ ಬಾರಿಯೂ ಉಗ್ರಪ್ಪ ಅವರ ಪ್ರಶ್ನಿಸಿದ ವೇಳೆ ಸುಂದರ ಪೂಜಾರಿ ಇದೇ ರೀತಿ ಕುಸಿದು ಆಸ್ಪತ್ರೆ ಸೇರಿದ್ದರು. ಇದೀಗ ಉಪ ಲೋಕಾಯುಕ್ತರ ವಿಚಾರಣೆ ಸಂದರ್ಭ ಸುಂದರ ಪೂಜಾರಿ ಅವರು ಹಠಾತ್ ಕುಸಿದು ಬೀಳುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.

Comments are closed.