ಕರಾವಳಿ

ಉಡುಪಿಯಲ್ಲಿ ಪರ್ಯಾಯ ಸಂಭ್ರಮ ಕಣ್ತುಂಬಿಕೊಂಡ ಸಹಸ್ರಾರು ಜನರು!

Pinterest LinkedIn Tumblr

ಉಡುಪಿ: ಉಡುಪಿಯ ಶ್ರೀ‌ ಪಲಿಮಾರು ಶ್ರೀಗಳ ಪರ್ಯಾಯ ಮಹೋತ್ಸವ ಅದ್ದೂರಿಯಾಗಿ ನೇರವೇರಿತು.ಸರ್ವಜ್ನ ಪೀಠವನ್ನೇರುವ ಮೂಲಕ ಎರಡು ವರುಷಗಳ ಪೂಜಾ ಕೈಂಕರ್ಯವನ್ನು ಅಧಿಕಾರವನ್ನು ಪಲಿಮಾರು ಶ್ರೀಗಳು  ಪೇಜಾವರ ಶ್ರೀಗಳಿಂದ ಪಡೆದುಕೊಂಡರೆ. ಪೇಜಾವರ ಶ್ರೀಗಳು ತಮ್ಮ ಪಂಚಮ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದರು.

ಪೊಡವಿಗೊಡೆಯ ಶ್ರೀ‌ಕೃಷ್ಣ ನ ತವರೂರಿನಲ್ಲಿ  ಪಲಿಮಾರು ಶ್ರೀಗಳ ಪರ್ಯಾಯ ಮಹೋತ್ಸದ‌‌ ಸಂಭ್ರಮ‌ ಮನೆ ಮಾಡಿತ್ತು.ಉಡುಪಿ ಶ್ರೀ ಕೃಷ್ಣ ಎರಡು ವರುಷಗಳ ಪೂಜಾ ಕೈಕಂರ್ಯದ ಹಸ್ತಾಂತರ ಕಾರ್ಯಕ್ರಮದ ಪರ್ಯಾಯ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತರು ಸಾಕ್ಷಿಯಾದರು. ಇಂದು‌ ಬೆಳ್ಳಗ್ಗೆ ಕಾಪುವಿನಲ್ಲಿರುವ  ದಂಡತೀರ್ಥ ಕ್ಷೇತ್ರದಲ್ಲಿ ತೀರ್ಥಸ್ನಾವನ್ನು‌ ಮಾಡಿ  ಜೋಡುಕಟ್ಟೆಗೆ ಅಗಮಿಸಿದ ಪಲಿಮಾರು ಶ್ರೀಗಳು ಪಟ್ಟದ ದೇವರಿಗೆ ಮೊದಲು ಪೂಜೆಯನ್ನ ಸಲ್ಲಿಸಿದರು.ನಂತರ ಜೋಡುಕಟ್ಟೆಯಿಂದ  ವೈಭವದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ದೇಶದ ವಿವಿಧ ಭಾಗಗಳಿಂದ ನೂರಾರು ಕಲಾತಂಡಗಳು‌  ಮೆರವಣಿಗೆಯಲ್ಲಿ ಭಾಗವಹಿಸಿದ್ದವು,ಕೊಂಬು‌ಕಹಳೆ,ಕಂಸಲೆ,ಯಕ್ಷಗಾನ,ವೀರಗಾಸೆ, ಗೊಂಬೆ ಕುಣಿತ,ವೀರಗಾಸೆ ತಂಡಗಳು ಮೆರವಣಿಗೆಯ  ವೈಭವನ್ನು ಹೆಚ್ಚಿಸಿತು. ಇನ್ನೂ ಮಧ್ವಚಾರ್ಯ ,ಶ್ರೀ‌ಕೃಷ್ಣ ವಾದಿರಾಜರ ಅಕರ್ಶಕ  ಟ್ಯಾಬ್ಲೊಗಳು ಭಕ್ತರ ಮೆಚ್ಚುಗೆಗೆ ಪಾತ್ರರಾದವು.

ಮೆರವಣಿಗೆಯಲ್ಲಿ‌ ಅಷ್ಟ ಮಠಾಧೀಶರಾದ ಸೋದೆ ಹಾಗೂ ಅದಮಾರು ಶ್ರೀಗಳು ಮಾನವ  ಹೋರುವ ಸಂಪ್ರದಾಯಿಕ  ಪಲ್ಲಕ್ಕಿಯಲ್ಲಿ ಬಂದರೆ ,ಪಲಿಮಾರು ,ಕಾಣಿಯೂರು,ಕೃಷ್ಣಪುರ ಹಾಗೂ ಶಿರೂರು ಶ್ರೀಗಳು ಪೇಜಾವರ ಶ್ರೀಗಳ ಅಶಯದಂತೆ ಮಾನವ ಹೊರೆಯಲ್ಲದ  ಟ್ಯಾಬ್ಲೊ ಪಲ್ಲಕ್ಕಿಯಲ್ಲಿ ಬರುವ  ಮೂಲಕ ಗಮನ ಸೆಳೆದರು.

ರಸ್ತೆಯೂದ್ದಕ್ಕೂ ಎರಡು ಬದಿಗಳಲ್ಲಿ ಲಕ್ಷಾಂತರ ಮಂದಿ  ವಿಕ್ಷಣೆಗೆ ನಿಂತು ಪರ್ಯಾಯ ಮಹೋತ್ಸವದ ವೈಭವದ ಮೆರವಣಿಗೆ ಹಾಗೂ ಅಷ್ಟಮಠಾಧೀಶರ ಸಮಾಗಮವನ್ನು‌ ಕಣ್ಣಾರೆ ಕಂಡು ಭಕ್ತಿ ಪರವಶರಾದರು.

ಮುಂಜಾನೆ ೫ ಗಂಟೆ ಹೊತ್ತಲ್ಲಿ ರಥ ಬೀದಿ ಪ್ರವೇಶಿಸಿದ ಪಲಿಮಾರು ಶ್ರೀಗಳು  ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನ ದರುಶನ‌ ಮಾಡಿದರು.ತದ ನಂತರ ಚಂದ್ರಮೌಲೀಶ್ವರ ಹಾಗೂ ಅನಂತೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದರು.

ಶ್ರೀ ಕೃಷ್ಣ ಮಠ ಪ್ರವೇಶಿಸಿದ ಪಲಿಮಾರು ಶ್ರೀಗಳಿಗೆ ಪಂಚಮ ಪರ್ಯಾಯ ಪೂರೈಸಿದ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ,ಅಕ್ಷಯ ಪಾತ್ರೆ ಹಾಗೂ ಸಟ್ಟುಗವನ್ನು ಹಸ್ತಾಂತರಿಸುವ ಮೂಲಕ ಕೃಷ್ಣ ಮಠದ ಅಧಿಕಾರ  ಹಸ್ತಂತರವನ್ನು ಮಾಡಿದರು.ನಂತರ ಸರ್ವಜ್ನ ಪಿಠಾರೋಹಣ ಮಾಡುವ ಮೂಲಕ ಪಲಿಮಾರು ಶ್ರೀಗಳು ಎರಡು ವರುಷಗಳು ಶ್ರೀ‌ಕೃಷ್ಣನ  ಪೂಜಾ ಕೈಂಕರ್ಯವನ್ನು ವಹಿಸಿಕೊಂಡರು.

ಪರ್ಯಾಯ ಪೀಠಾರೋಹಣ ಮಾಡಿದ ಬಳಿಕ ಪಲಿಮಾರು ಶ್ರೀಗಳು ಕೃಷ್ಣ ಮಠದ ಬಡಗುಮಳಿಗೆಯಲ್ಲಿ ಅಷ್ಟ ಮಠಾಧೀಶರಿಗೆ ಅಭಿನಂದಿಸಿ ಸಂಪ್ರಾದಾಯಿಕವಾಗಿ ಪರ್ಯಾಯ ದರ್ಬಾರ್ ನಡೆಸಿಕೊಟ್ಟ ಐತಿಹಾಸಿಕ ಕ್ಷಣಕ್ಕೆ ಲಕ್ಷಾಂತರ ಮಂದಿ‌ ಭಕ್ತರು ಸಾಕ್ಷಿಯಾದರು. ಒಟ್ಟಿನಲ್ಲಿ ಪಂಚಮ‌ ಪರ್ಯಾಯ ಪೂರೈಸಿ  ಮಧ್ವ ಸಂಪ್ರದಾಯದಲ್ಲಿ ಇತಿಹಾಸ ನಿರ್ಮಿಸಿದ್ರೆ.  ತನ್ನ ಎರಡನೇ ಪರ್ಯಾಯದ ಅಧಿಕಾರವನ್ನು ಪೇಜಾವರ ಶ್ರೀಗಳ ಕೈಯಿಂದ  ಸ್ವೀಕರಿಸಿದ  ಖುಷಿ ಪಲಿಮಾರು ಶ್ರೀಗಳದ್ದು. ಒಟ್ಟಿನಲ್ಲಿ ಓಂದು ಅದ್ಬುತ  ಐತಿಹಾಸಿಕ  ಕ್ಷಣಗಳನ್ನು ನಾಡಿನ‌  ಭಕ್ತರು ಕಣ್ತುಂಬಿಕೊಂಡು ಪುನೀತರಾದರು.

Comments are closed.