ರಾಷ್ಟ್ರೀಯ

ಸಿಗಡಿ ತಿನ್ನುವುದು ಇಸ್ಲಾಂಗೆ ವಿರೋಧ: ಫತ್ವಾಗೆ ಆಕ್ಷೇಪ

Pinterest LinkedIn Tumblr

ಹೈದರಾಬಾದ್‌: ಮುಸ್ಲಿಮರು ಸಿಗಡಿ ತಿನ್ನಬಾರದು ಎಂದು ಇಲ್ಲಿನ ಜಾಮಿಯಾ ನಿಜಾಮಿಯಾ ಫತ್ವಾ ಹೊರಡಿಸಿದ್ದು, ಹಲವು ಮುಸ್ಲಿಂ ಧಾರ್ಮಿಕ ವಿದ್ವಾಂಸರಿಂದಲೇ ವಿರೋಧ ವ್ಯಕ್ತವಾಗಿದೆ.

ಸೀಗಡಿ ಮೀನುಗಳ ಗುಂಪಿಗೆ ಸೇರುವುದಿಲ್ಲ. ಅದು ಸಂಧಿಪದಿ (ಆರ್ಥೋಪಾಡ್) ಜಾತಿಯದಾಗಿದ್ದು ಈ ವಿಭಾಗದಲ್ಲಿ ಕೀಟಗಳು ಸಹ ಸೇರಿಕೊಳ್ಳುತ್ತವೆ. ಹುಳವನ್ನು ತಿನ್ನುವುದು ಬಹಳ ಅಸಹ್ಯಕರ ಆಗಿದ್ದು ಮುಸ್ಲಿಮರು ಅದನ್ನು ತಿನ್ನಬಾರದೆಂದು ಜಾಮಿಯಾ ಫತ್ವಾದಲ್ಲಿ ಹೇಳಲಾಗಿದೆ.

ಮುಸ್ಲಿಮರ ಆಹಾರಗಳಲ್ಲಿ ಹಲಾಲ್‌, ಹರಾಂ ಮತ್ತು ಮಖ್ರು ಎನ್ನುವ ಮೂರು ವಿಭಾಗಗಳಿವೆ. ಅದರಲ್ಲಿ ಮಖ್ರು ಎನ್ನುವ ವಿಭಾಗದಲ್ಲಿ ತಿನ್ನಲೇಬಾರದ ವಸ್ತುಗಳೆಂಬ ವಿಭಾಗವಿದ್ದು ಸೀಗಡಿ ಆ ವಿಭಾಗದಲ್ಲಿ ಬರುವುದರಿಂದ ಅದನ್ನು ಆಹಾರವನ್ನಾಗಿ ಬಳಸುವಂತಿಲ್ಲ ಎಂದು ಫತ್ವಾ ಹೇಳಿದೆ.

ಜಾಮಿಯಾ ನಿಜಾಮಿಯಾ ಹೊರಡಿಸಿದ ಈ ಫತ್ವಾಗೆ ಮುಸ್ಲಿಂ ಧಾರ್ಮಿಕ ಮುಖಂಡರಿಂದಲೇ ವಿರೋಧಗಳು ಕೇಳಿಬಂದಿದೆ.

ಮುಸ್ಲಿಂ ಧರ್ಮದ ಉನ್ನತ ಅಧ್ಯಯನ ಒದಗಿಸುವ 142 ವರ್ಷ ಹಳೆಯ ಸಂಸ್ಥೆಯಾದ ಜಾಮಿಯಾ ನಿಜಾಮಿಯಾ ಕಳೆದ ವರ್ಷ ಮುಸ್ಲಿಮರು ‘ಭಾರತ್‌ ಮಾತಾ ಕೀ ಜೈ’ ಘೊಷಣೆ ಕೂಗುವಂತಿಲ್ಲ ಎಂದು ಫತ್ವಾ ಹೊರಡಿಸಿ ವಿವಾದಕ್ಕೀಡಾಗಿತ್ತು.

Comments are closed.