ಕರಾವಳಿ

 ಶುಚಿತ್ವಕ್ಕಾಗಿ ಅಗ್ಗದ ಮತ್ತು ಪರಿಣಾಮಕಾರಿಯಾದ ಉಪಾಯಗಳು.

Pinterest LinkedIn Tumblr

ಮನೆಯನ್ನು ಶುಚಿಯಾಗಿಡುವುದೇ ಒಂದು ಜವಾಬ್ದಾರಿ, ಒಂದು ಅಭ್ಯಾಸ ಆಗಿ ಹೋಗಿರುತ್ತದೆ ಅಮ್ಮಂದಿರಿಗೆ. ಮಹಾತ್ಮಾ ಗಾಂಧೀಜಿಯೇ ಹೇಳಿದಂತೆ ದೈವತ್ವದ ನಂತರ ಬರುವುದೇ ಶುಚಿತ್ವ. ನೀವು ಪ್ರತಿದಿನ ನಿರಂತರವಾಗಿ ಮನೆಯನ್ನು ಸ್ವಚ್ಛ ಮಾಡುತ್ತಿರೋ ಅಥವಾ ನಿಮ್ಮ ಮನೆಗೆ ಯಾರಾದರೂ ಅತಿಥಿಗಳು ಬರುವ ಮುನ್ನ ತರಾತುರಿಯಲ್ಲಿ ಸ್ವಚ್ಛಗೊಳಿಸುತ್ತಿರೋ, ನಿಮ್ಮ ಕೆಲಸವನ್ನು ಥಟ್ಟನೆ ಮಾಡುವಂತೆ ಮತ್ತು ಸುಲಭವಾಗಿಸುವಂತೆ ಮಾಡುವ ಕೆಲವು ಉಪಾಯಗಳನ್ನ ಅರಿತರೆ ಬಹಳಷ್ಟು ಸಹಾಯವಾಗುತ್ತದೆ.

ನಿಮ್ಮ ಶ್ರಮ ಮತ್ತು ಸಮಯ ಉಳಿಸಲು ಮತ್ತು ಶುಚಿಗೊಳಿಸುವ ಉತ್ಪನ್ನಗಳ ಮೇಲೆ ನೀವು ದುಡ್ಡು ಸುರಿಯುವುದನ್ನ ತಪ್ಪಿಸಲು, ಇಲ್ಲಿವೆ ನೋಡಿ ಕೆಲವು ಅಗ್ಗದ ಮತ್ತು ಪರಿಣಾಮಕಾರಿಯಾದ ಉಪಾಯಗಳು.

೧. ಗಡಸು ನೀರಿನ ಕಲೆಯನ್ನು ತೆಗೆಯಲು ವಿನೇಗರ್
ನಿಮ್ಮ ಮನೆಯಲ್ಲಿ ಗಡಸು ನೀರನ್ನು ಬಳಸುತ್ತಿದ್ದರೆ, ನಲ್ಲಿಗಳ ಸುತ್ತ ಮತ್ತು ಪಾತ್ರೆಗಳ ಮೇಲೆ ನೀವು ಬಿಳಿ ಕಲೆಗಳನ್ನು ಕಾಣಬಹುದು. ಇವುಗಳನ್ನು ವಿನೇಗರ್ ಬಳಸಿ ಹೋಗಲಾಡಿಸಬಹುದು. ಒಂದು ಒರೆಸುವ ಬಟ್ಟೆಯನ್ನು ವಿನೆಗರ್ ಇಂದ ವದ್ದೆ ಮಾಡಿ, ಆ ಬಟ್ಟೆಯನ್ನು ಕಲೆ ಆದ ಜಾಗದ ಮೇಲೆ ಸುತ್ತಿ. ಕೆಲವು ನಿಮಿಷಗಳ ನಂತರ ಆ ಬಟ್ಟೆಯನ್ನು ತೆಗೆದು, ಟೂತ್ ಬ್ರಷ್ ಇಂದ ಆ ಜಾಗವನ್ನು ಉಜ್ಜಿ. ಆಗ ಆ ಬಿಳಿ ಕಲೆಗಳು ಮಾಯವಾಗುವುದು.

೨. ಸೋಫಾವನ್ನು ಅಡುಗೆ ಸೋಡಾದಿಂದ ಶುಚಿಗೊಳಿಸಿ
ಸೋಫಾದಿಂದ ಯಾವುದಾದರು ಅಹಿತಕರ ವಾಸನೆ ಹೊರಬರುತ್ತಿದ್ದರೆ, ಅಥವಾ ಅದರ ಮೇಲೆ ಕಲೆಗಳು ಉಂಟಾಗಿದ್ದರೆ, ಅಡುಗೆ ಸೋಡಾ ಅವುಗಳನ್ನು ತೆಗೆಯಲು ಸಹಾಯ ಮಾಡುತ್ತವೆ. ಮೊದಲು ಒಂದು ಬಟ್ಟೆಯಿಂದ ಸೋಫಾವನ್ನು ಚೆನ್ನಾಗಿ ಕೊಡವಿ. ನಂತರ ಅದರ ಮೇಲೆ ಅಡುಗೆ ಸೋಡಾವನ್ನು ಸಿಂಪಡಿಸಿ. ಅಡುಗೆ ಸೋಡಾವನ್ನು ಸೋಫಾ ಮೇಲೆ 20 ನಿಮಿಷಗಳವರೆಗೆ ಹಾಗೆಯೇ ಬಿಟ್ಟು, ನಂತರ ಅದನ್ನ ವಾಕ್ಯೂಮ್ ಕ್ಲೀನರ್ ಅಥವಾ ಬ್ರಷ್ ಇಂದ ಒರೆಸಿ.

೩. ಗಾಜಿನ ಪುಡಿ ಶುಚಿಗೊಳಿಸುವುದು
ಒಂದು ವೇಳೆ ನಿಮ್ಮ ಮನೆಯಲ್ಲಿ ಯಾವುದಾದರು ಗಾಜು ಹೊಡಿದು ಪುಡಿಯಾಗಿದ್ದರೆ, ಅದನ್ನು ಕೈಯಿಂದ ತೆಗೆದುಹಾಕುವುದು ಬಹಳ ಅಪಾಯಕಾರಿ. ಹೀಗಾಗಿ ನೀವು ಒಂದು ತುಂಡು ಬ್ರೆಡ್ ಅನ್ನು ತೆಗೆದುಕೊಂಡು, ಚೆಲ್ಲಿರುವ ಜಾಗದ ಮೇಲೆ ಒತ್ತಿರಿ. ಅದು ನಿಮ್ಮ ಕೈಗೆ ಅಥವಾ ಕಾಲಿನಲ್ಲಿ ಸಿಕ್ಕಿ ಹಾಕಿಕೊಳ್ಳುವಂತಹ, ಚುಚ್ಚುವಂತಹ ಚಿಕ್ಕ ಚಿಕ್ಕ ಗಾಜಿನ ತುಂಡುಗಳನ್ನು ತೆಗೆದುಹಾಕುತ್ತದೆ.

೪. ಇತ್ತಾಳೆ ಪಾತ್ರೆಗಳ ಹೊಳಪು ಹೊರತರಲು
ಒಂದು ವೇಳೆ ನಿಮ್ಮ ಮನೆಯಲ್ಲಿನ ಇತ್ತಾಳೆ ಸಾಮಾಗ್ರಿಗಳು ಕಲೆಗಳನ್ನ ಹೊಂದಿ, ಹೊಳಪನ್ನು ಕಳೆದುಕೊಂಡಿದ್ದರೆ, ಅವುಗಳು ಮತ್ತೆ ಹೊಳೆಯುವಂತೆ ಮಾಡಲು ಬೇಕಿರುವುದು ಟೊಮೇಟೊ ಕೆಚಪ್ (ಸಾಸ್) ಮತ್ತು ಉಪ್ಪು. ಒಂದು ಬಟ್ಟೆಯ ಮೇಲೆ ಮೊದಲು ಟೊಮೇಟೊ ಕೆಚಪ್ ಅನ್ನು ಹಾಕಿಕೊಳ್ಳಿ, ಅದರ ಮೇಲೆ ಸ್ವಲ್ಪ ಉಪ್ಪನ್ನು ಉದುರಿಸಿ. ಈ ಮಿಶ್ರಣದಿಂದ ಇತ್ತಾಳೆ ಸಾಮಾನನ್ನು ಚೆನ್ನಾಗಿ ಉಜ್ಜಿ ತೊಳೆಯಿರಿ. ಅದು ಪುನಃ ಹೊಳೆಯಲು ಶುರು ಮಾಡುತ್ತದೆ.

೫. ಮಿಕ್ಸರ್ ಕ್ಲೀನ್ ಮಾಡುವುದು
ನಿಮ್ಮ ಮಿಕ್ಸರ್ ಅನ್ನು ಬೇಗನೆ ತೊಳೆಯಬೇಕು ಮತ್ತು ಅದರ ಬಟ್ಟಲು ಮತ್ತು ಬ್ಲೇಡ್ ಹೊಳೆಯುವಂತೆ ಮಾಡಬೇಕು ಎಂದರೆ, ಮಿಕ್ಸರ್ ಒಳಗೆ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಮತ್ತು ಸ್ವಿಚ್ ಆನ್ ಮಾಡಿ. ಅರ್ಧ ನಿಮಿಷದ ನಂತರ ನಿಮ್ಮ ಮಿಕ್ಸರ್ ಬ್ಲೇಡ್ ಹೊಳೆಯುತ್ತಿರುತ್ತದೆ.

೬. ಎಣ್ಣೆಯನ್ನು ಎಣ್ಣೆಯಿಂದ ಹೋಗಲಾಡಿಸಿ
ಎಣ್ಣೆ ಚೆಲ್ಲಿ ಜಿಡ್ಡಾದ ಅಡುಗೆ ಮನೆಯ ಕಟ್ಟೆಗಳನ್ನು ಶುಚಿಗೊಳಿಸುವುದು ಸುಲಭವಲ್ಲ. ನೀವು ಎಷ್ಟು ಸೋಪ್ ಬಳಸಿ ತೊಳೆದರೂ ಎಣ್ಣೆ ಗುರುತುಗಳು ಹೋಗುವುದೇ ಇಲ್ಲ. ಆದರೆ, ನೀವು ಎಣ್ಣೆಯನ್ನೇ ಬಳಸಿ ಎಣ್ಣೆಯನ್ನು ತೆಗೆಯಬಹುದು! ಹೌದು, ಪೇಪರ್ ಟವೆಲ್ ಅಥವಾ ದಪ್ಪನಾದ ಪೇಪರ್ ತುಂಡನ್ನು ವೆಜಿಟಬಲ್ ಆಯಿಲ್ ಇಂದ ವದ್ದೆ ಮಾಡಿ, ಅದರಿಂದ ಕಟ್ಟೆಗಳನ್ನು ಒರೆಸಿ. ಆಗ ಎಣ್ಣೆ ಜಿಡ್ಡು ಹೋಗುತ್ತದೆ.

Comments are closed.