ಕರಾವಳಿ

ಚಿನ್ನಾಭರಣ ಸಹಿತಾ ನವವಧು ನಾಪತ್ತೆ -ಹೈದರ್‌ನೊಂದಿಗೆ ಪರಾರಿ ಶಂಕೆ..? ‘ಲವ್ ಜಿಹಾದ್’ ಆರೋಪ

Pinterest LinkedIn Tumblr

ಮಂಗಳೂರು / ಮೂಡಬಿದಿರೆ. ಡಿಸೆಂಬರ್ 10: ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ನಾಳೆ ಹಸೆಮಣೆ ಏರಬೇಕಾಗಿದ್ದ ವಧು ಮದುವೆಗೂ ಮುಂಚೆ ನಾಪತ್ತೆಯಾದ ಪ್ರಕರಣ ಮುಡುಬಿದಿರೆಯ ದರೆಗುಡ್ಡೆ ಎಂಬಲ್ಲಿ ನಡೆದಿದೆ.

ಮುಡುಬಿದಿರೆಯ ದರೆಗುಡ್ಡೆ ನಿವಾಸಿ ಪ್ರಿಯಾಂಕ ಅವರಿಗೆ ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ಮದುವೆ ನಿಶ್ಚಯವಾಗಿದ್ದು, ರವಿವಾರ ಮೆಹಂದಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಸೋಮವಾರ (ಡಿ. 11) ಹಸೆಮಣೆಗೆ ಏರಬೇಕಾಗಿದ್ದ ಪ್ರಿಯಾಂಕ ಶನಿವಾರ (ಡಿ. 9) ರಾತ್ರಿ ಮನೆಯಿಂದಲೇ ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

ಮಾತ್ರವಲ್ಲದೇ ದರೆಗುಡ್ಡೆಯಲ್ಲಿರುವ ತನ್ನ ಮನೆಯಿಂದ 10 ಪವನ್ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್, ವಸ್ತ್ರದೊಂದಿಗೆ ಪ್ರಿಯಾಂಕ ಪರಾರಿಯಾಗಿದ್ದು ಮನೆ ಮಂದಿ ಕಂಗಾಲಾಗಿದ್ದಾರೆ. ಪ್ರಿಯಾಂಕ ಅವರ ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದರು. ಈಗ ಮಗಳು ಏಕಾ ಏಕಿ ಮನೆಯಿಂದ ನಾಪತ್ತೆಯಾಗಿರುವುದರಿಂದ ತಾಯಿ ಕಂಗಾಲಾಗಿದ್ದಾರೆ.

ಇದೆಲ್ಲದರ ನಡುವೆ ಈ ಪರಾರಿ ಪ್ರಕರಣ ಲವ್ ಜಿಹಾದ್ ಎನ್ನಲಾಗಿದೆ. 25 ವರ್ಷದ ಪ್ರಿಯಾಂಕ ಕೆಲ ತಿಂಗಳ ಹಿಂದೆಯಿಂದ ಮಂಗಳೂರು ಹೊರವಲಯದ ಫರಂಗಿಪೇಟೆಯ ಹೈದರ್ ಎಂಬವರೊಂದಿಗೆ ಸಂಪರ್ಕದಲ್ಲಿದ್ದಳು. ಹೀಗಾಗಿ ಆತನೊಂದಿಗೆ ಪರಾರಿಯಾಗಿದ್ದಾಳೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಂಕ ನಾಪತ್ತೆ ಪ್ರಕರಣವನ್ನು ‘ಲವ್ ಜಿಹಾದ್’ ಎಂದು ಆರೋಪಿಸಲಾಗಿದೆ. ಹಿಂದು ಸಂಘಟನೆಗಳ ಮುಖಂಡರು ಪ್ರಿಯಾಂಕ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದು, ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆ ತಿಳಿದು ಬಂದಿದೆ.

ಪ್ರಿಯಂಕ ಅವರ ಸಹೋದರ ಈ ಕುರಿತು ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ. ಮೂಡುಬಿದ್ರೆ ಠಾಣಾ ಪೊಲೀಸರು ಪರಾರಿ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.