ರಾಷ್ಟ್ರೀಯ

ಕಾಂಗ್ರೆಸ್-ಹಾರ್ದಿಕ್ ನಡುವೆ ಒಳ ಒಪ್ಪಂದ: ಪಾಟಿದಾರ್ ಮುಖಂಡನ ಆರೋಪ

Pinterest LinkedIn Tumblr

ಅಹ್ಮದಾಬಾದ್: ಪ್ರಸ್ತುತ ನಡೆಯುತ್ತಿರುವ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಹಾರ್ದಿಕ್ ಪಟೇಲ್ ನಡುವೆ ಒಳ ಒಪ್ಪಂದ ಏರ್ಪಟ್ಟಿದೆ ಎಂದು ಪಾಟಿದಾರ್ ಸಮುದಾಯದ ಮುಖಂಡರೊಬ್ಬರು ಆರೋಪಿಸಿದ್ದಾರೆ.

ಪಾಟಿದಾರ್ ಅನಾಮತ್ ಅಂದೋಲನದ ಮುಖಂಡ ದಿನೇಶ್ ಬಂಬಾನಿಯಾ ಇಂತಹ ಗಂಭೀರ ಆರೋಪ ಮಾಡಿದ್ದು, ಹಾರ್ದಿಕ್ ಪಟೇಲ್ ಸಮುದಾಯದ ಹೋರಾಟವನ್ನು ತಮ್ಮ ವೈಯುಕ್ತಿಕ ಹಿತಾಸಕ್ತಿ ಸಾಧನೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಪಟೇಲ್ ಸಮುದಾಯದ ಬೇಡಿಕೆ ಈಡೇರಿಕೆ ಕುರಿತು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲವಾದರೂ, ಪಟೇಲ್ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದೇಕೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಪಟೇಲ್ ಸಮುದಾಯದ ಬೇಡಿಕೆಗಳ ಈಡೇರಿಕೆ ಕುರಿತು ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವುದು ಬೇಡವಾಗಿದೆ. ಹೀಗಾಗಿ ಹಾರ್ದಿಕ್ ಪಟೇಲ್ ರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅವರ ಮೂಲಕ ಪಟೇಲ್ ಸಮುದಾಯದ ಬೆಂಬಲ ಗಿಟ್ಟಿಸಿಕೊಳ್ಳಲು ಒಳ ಸಂಚು ರೂಪಿಸಿದೆ. ಹಾರ್ದಿಕ್ ಪಟೇಲ್ ಯಾವುದೇ ಕಾರಣಕ್ಕೂ ಪಟೇಲ್ ಸಮುದಾಯದ ಹೋರಾಟವನ್ನು ರಾಜಕೀಯಗೊಳಿಸಬಾರದು ಎಂದು ಬಂಬಾನಿಯಾ ಆರೋಪಿಸಿದ್ದಾರೆ.

Comments are closed.