ಕರಾವಳಿ

ಚಳಿಗಾಲದಲ್ಲಿ ತ್ವಚೆಯ ಹಲವು ಸಮಸ್ಯೆ ನಿವಾರಣೆಗೆ ಸುಲಭ ಪರಿಹಾರ

Pinterest LinkedIn Tumblr

ಬದಲಾಗುವ ಹವಾಮಾನ ನಮ್ಮ ತ್ವಚೆಯ ಮೇಲೆ ಪರಿಣಾಮ ಬಿರುವುದು ಸಹಜ, ಅದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು, ಇಂತಹ ಸಮಸ್ಯೆಗಳನ್ನು ನಮ್ಮ ಬಳಿ ಬರದಂತೆ ತಡೆಯುತ್ತದೆ. ಚಳಿಗಾಲ ಬಂತು ಎಂದರೆ ತ್ವಚೆಯು ಹಲವು ಸಮಸ್ಯೆಗಳನ್ನು ಎದುರಿಸಲು ತಯಾರಾಗಬೇಕು. ಈ ಸಮಯದಲ್ಲಿ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ ಅದಕ್ಕಾಗಿ ಕೆಲವು ಸುಲಭ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ.

ಚಳಿಗಾಲದಲ್ಲಿ ನಿಮ್ಮ ತ್ವಚೆ ಈ ಕೆಳಗಿನ ಸಮಸ್ಯೆಗಳನ್ನು ಎದುರಿಸಬಹುದು!

ಚರ್ಮ ಬಿರುಕು ಬಿಟ್ಟುಕೊಳ್ಳುವುದು
ತುರಿಕೆ
ಚರ್ಮ ಕೆಂಪಾಗುವುದು
ಬೊಬ್ಬೆಗಳು
ದದ್ದುಗಳು

ಚಳಿಗಾಲದ ದದ್ದುಗಳು ನಿಮ್ಮ ಕೈ, ಕಾಲು ಮತ್ತು ಭುಜಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು. ಇದು ನಿಮ್ಮ ಸೌಂದರ್ಯವನ್ನು ಹಾಳುಮಾಡುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಮ್ಮನ್ನು ಕಿರಿಕಿರಿ ಮತ್ತು ಮುಜುಗರ ಪಡುವಂತೆ ಮಾಡುವುದು ಸಹಜ. ಇದನ್ನು ಹೋಗಲಾಡಿಸಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

೧.ಪರಂಗಿ ಮತ್ತು ಬಾಳೆಹಣ್ಣು ಪೇಸ್ಟ್
ಪರಂಗಿ ಹಣ್ಣಿನಲ್ಲಿರುವ ಹೆಚ್ಚಿನ ನೀರಿನಾಂಶವು ಚರ್ಮವನ್ನು ತುಂಬಾ ನಯ, ಮೃಧು ಹಾಗೂ ತೇವಾಂಶದಿಂದ ಇಡಲು ಸಹಾಯ ಮಾಡುವುದು. ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಮತ್ತು ವಿಟಮಿನ್ C ಹೇರಳವಾಗಿದೆ. ಇದರಿಂದ ತ್ವಚೆಯ ಹೊಳಪನ್ನು ಚಳಿಗಾಲದಲ್ಲಿಯೂ ಉಳಿಸಿಕೊಳ್ಳಲು ಸಹಾಯವಾಗುತ್ತದೆ.

ಉಪಯೋಗಿಸುವುದು
೧.ಬಾಳೆಹಣ್ಣು ಮತ್ತು ಪರಂಗಿ ಹಣ್ಣಿನ ಸಿಪ್ಪೆಯನ್ನು ತೆಗೆದು ಎರಡು ಹಣ್ಣನ್ನು ಮಿಶ್ರಣ ಮಾಡಿ, ಪೇಸ್ಟ್ ತರಹ ತಯಾರಿಸಿಕೊಳ್ಳಿ.
೨.ಈ ಪೇಸ್ಟ್ ಅನ್ನು ತ್ವಚೆಗೆ ಹಚ್ಚಿಕೊಂಡು ಸುಮಾರು ೧೫ ನಿಮಿಷಗಳ ಕಾಲ ತ್ವಚೆಯ ಮೇಲೆ ಬಿಡಿ.
೩.ನಂತರ ಉಗುರು ಬೆಚ್ಚನೆಯ ನೀರಿನಿಂದ ಇದನ್ನು ಚೆನ್ನಾಗಿ ತೊಳೆದುಕೊಳ್ಳಿ. ಉತ್ತಮ ಫಲಿತಾಂಶ ಕಾಣಲು ಇದನ್ನು ವಾರದಲ್ಲಿ ಎರಡು ಬಾರಿ ಮಾಡುವುದು ಒಳ್ಳೆಯದು.

೨.ಸೌತೆಕಾಯಿ
ಸೌತೆಕಾಯಿಯಲ್ಲಿ ಹೆಚ್ಚಿನ ಮಟ್ಟದ ನೀರಿನಾಂಶ ಇರುವುದು ಮಾತ್ರವಲ್ಲದೆ ಇದರಲ್ಲಿ ಹಲವಾರು ರೀತಿಯ ಪೋಷಕಾಂಶ ಗುಣಗಳಿವೆ. ಇದು ಚರ್ಮ ಕೆಂಪಾಗುವುದು, ತುರಿಕೆ, ಉರಿಯೂತ ಮುಂತಾದ ತೊಂದರೆಗಳನ್ನು ನಿವಾರಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಉಪಯೋಗಿಸುವುದು
೧.ಸೌತೆಕಾಯಿಯ ಸಿಪ್ಪೆ ತೆಗೆದು ಅದರಿಂದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ.
೨.ಅದನ್ನು ನಿಮ್ಮ ತ್ವಚೆಗೆ ಹಚ್ಚಿ, 20 ರಿಂದ 30ನಿಮಿಷಗಳ ಕಾಲ ತ್ವಚೆಯ ಮೇಲೆ ಬಿಟ್ಟು, ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆಯಿರಿ.
೩.ಕಿರಿಕಿರಿ, ಊತ ಅಥವಾ ಕೆಂಪಾಗಿರುವ ಜಾಗಕ್ಕೆ ಸೌತೆಕಾಯಿಯ ಸಣ್ಣ ತುಂಡನ್ನು ಉಜ್ಜುವುದು ನೋವು ಕಡಿಮೆ ಆಗುವುದರ ಜೊತೆಗೆ ಬೇಗನೆ ಇದರ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು.

೩.ಜೇನುತುಪ್ಪ
ಚರ್ಮದ ಉರಿಯೂತ, ಕೆಂಪಾಗಿರುವುದು ಮುಂತಾದ ಸಮಸ್ಯೆ ಇರುವ ಜಾಗಕ್ಕೆ ಇದನ್ನು ಹಚ್ಚಿ ಸ್ವಲ್ಪ ಸಮಯದ ನಂತರ ಉಗುರು ಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳುವುದರಿಂದ ಚರ್ಮದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Comments are closed.