ಕರಾವಳಿ

ಅಡ್ಡದಾರಿ ಹಿಡಿಯದೆ ಜೀವನದಲ್ಲಿ ಯಶಸ್ಸು ಕಾಣಲು ಯತ್ನಿಸಿ :ನ್ಯಾ. ಕೆ.ಎಸ್. ಬೀಳಗಿ ಅವರಿಂದ ವಿದ್ಯಾರ್ಥಿಗಳಿಗೆ ಕಿವಿಮಾತು

Pinterest LinkedIn Tumblr

ಮಂಗಳೂರು, ನವೆಂಬರ್. 30: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ವತಿಯಿಂದ ಕಾನೂನು, ನ್ಯಾಯ, ಲೇಖನಿ ಮತ್ತು ಮನಃಶಾಸದ ಜೊತೆ ವಿದ್ಯಾರ್ಥಿಗಳ ಮುಖಾಮುಖಿ ‘ಚತುರ್ಮುಖ’ ಯುವ ಮನಸುಗಳ ಸಂವಾದ ಕಾರ್ಯಕ್ರಮ ಬುಧವಾರ ನಗರದ ಪುರಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಕೆ. ಎಸ್. ಬೀಳಗಿ ಅವರು,ಬದುಕು ರೂಪಿಸುವಾಗ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ವಹಿಸಿಸಿದರೆ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಅಡ್ಡದಾರಿ ಹಿಡಿಯದೆ ಜೀವನದಲ್ಲಿ ಯಶಸ್ಸು ಕಾಣಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿ ಜೀವನವನ್ನು ಸಮರ್ಥವಾಗಿ ನಿರ್ವಹಿಸಿಕೊಳ್ಳುವ ಮೂಲಕ ಬದುಕನ್ನು ರೂಪಿಸುವ ಜವಾಬ್ಧಾರಿ ಪ್ರತಿಯೊಬ್ಬರದ್ದಾಗಿದೆ. ಸುಳ್ಳಿನ ಸಂದರ್ಭಗಳಿಂದ ಕ್ಷಿಣ ಲಾಭ ದೊರಕಿದರೂ ಜೀವನ ಪರ್ಯಂತ ತೊಂದರೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಬದುಕಿನ ಬಗ್ಗೆ ಎಚ್ಚರಿಕೆ ಅಗ್ಯ ಎಂದು ಅವರು ಸಲಹೆ ನೀಡಿದರು.

ನ್ಯಾಯ ವಿಷಯದ ಕುರಿತು ಹಿರಿಯ ನ್ಯಾಯವಾದಿ ಟಿ. ನಾರಾಯಣ ಪೂಜಾರಿ ಮತ್ತು ಲೋಕಾಯುಕ್ತ ಪ್ರಾಸಿಕ್ಯೂಟರ್ ರಾಜೇಶ್ ಕೆ. ಎಸ್. ಎನ್., ಮನ:ಶಾಸ ವಿಷಯದ ಕುರಿತು ಮನಸ್ವಿನಿ ಸಂಸ್ಥೆಯ ಮನೋವೈದ್ಯ ಡಾ. ರವೀಶ್ ತುಂಗಾ, ಫಾದರ್ ಮುಲ್ಲರ್ ಆಸ್ಪತ್ರೆಯ ಮನೋವೈದ್ಯ ಡಾ. ಅರುಣಾ ಯಡಿಯಾಳ್, ಕಾನೂನು ವಿಷಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ರವೀಶ್ ಹಾಗೂ ಲೇಖನಿ ವಿಷಯದಲ್ಲಿ ಪತ್ರಕರ್ತರಾದ ಬಾಲಕೃಷ್ಣ ಪುತ್ತಿಗೆ ಮತ್ತು ಪಿ. ಬಿ. ಹರೀಶ್ ರೈ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.

ಯುವವಾಹಿನಿ ಪ್ರ.ಕಾರ್ಯದರ್ಶಿ ರಾಜೇಶ್ ಸುವರ್ಣ, ಉಪಾಧ್ಯಕ್ಷ ನರೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಯುವವಾಹಿನಿ ಅಧ್ಯಕ್ಷ ಯಶವಂತ ಪೂಜಾರಿ ಸ್ವಾಗತಿಸಿದರು. ಉಪಾಧ್ಯಕ್ಷ ಜಯಂತ್ ನಡುಬೈಲ್ ವಂದಿಸಿದರು.

Comments are closed.