ಕರಾವಳಿ

ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಿತ್ತಳೆ ಸೇವಿಸುವಾಗ ನೆನೆಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯ.

Pinterest LinkedIn Tumblr

ನೀವು ನಿಮ್ಮ ದೇಹದೊಳಗಡೆ ಇನ್ನೊಂದು ಜೀವದ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದರೆ, ಆರೋಗ್ಯಕರ ಆಹಾರ ಸೇವನೆ ಹವ್ಯಾಸದ ಮೇಲೆ ನೀವು ಅವಲಂಬಿತವಾಗಬೇಕು. ನಿಮಗೆ ಈ ಸಮಯದಲ್ಲಿ ಏನು ಬೇಡ ಅನಿಸಬಹುದು ಅಥವಾ ನಿಮಗೆ ಬೇಡವಾಗಿರಬಹುದು ಆದರೆ ನಿಮ್ಮ ಉದರದೊಳಗಿನ ಪುಟ್ಟ ಕಂದಮ್ಮನಿಗಾಗಿ ನೀವು ಈ ಅಭ್ಯಾಸವನ್ನು ಮಾಡಿಕೊಳ್ಳಲೇ ಬೇಕು. ನೀವು ಏನನ್ನು ಆಹಾರವಾಗಿ ಸೇವಿಸುವಿರಿ ಅದು ನಿಮ್ಮ ಮಗುವಿನ ಆರೋಗ್ಯ, ಬೆಳವಣಿಗೆ ಮತ್ತು ಖುಷಿ ಎಲ್ಲವನ್ನು ನಿರ್ಧರಿಸುತ್ತದೆ ಮತ್ತು ತಿಳಿಸುತ್ತದೆ.

ಹಣ್ಣು, ತರಕಾರಿಗಳು, ಹಾಲಿನ ಉತ್ಪನ್ನಗಳು, ಮಾಂಸ ಮತ್ತು ಮೀನುಗಳನ್ನು ಒಳಗೊಂಡ ಆರೋಗ್ಯಕರ ಆಹಾರವನ್ನು ಸೇವಿಸುವುದು ಗರ್ಭಿಣಿ ಮಹಿಳೆಯರಿಗೆ ಅತ್ಯವಶ್ಯಕವಾಗಿದೆ. ಗರ್ಭಾವಸ್ಥೆಯಲ್ಲಿ ಕಿತ್ತಳೆ ಸೇವನೆ ಒಳ್ಳೆಯದೇ? ಹಲವು ಬಗೆಯ ಹಣ್ಣುಗಳಲ್ಲಿ, ಕಿತ್ತಳೆ ವಿಟಮಿನ್ C ಅನ್ನು ತನ್ನಲ್ಲಿ ಹೇರಳವಾಗಿ ಇರಿಸಿಕೊಂಡಿದೆ. ನೀವು ಹಣ್ಣನ್ನು ನೇರವಾಗಿ ಅಥವಾ ಹಣ್ಣಿನ ರಸವನ್ನು ಮಾಡಿ ಕುಡಿಯಿರಿ ಅದು ನಿಮಗೆ ಒಳ್ಳೆಯ ರುಚಿಯ ಜೊತೆಗೆ ವಿಟಮಿನ್ C ಅನ್ನು ನಿಮಗೆ ಒದಗಿಸುತ್ತದೆ.

ಗರ್ಭಾವಸ್ಥೆಯಲ್ಲಿ ಕಿತ್ತಳೆ ಸೇವನೆ ಅಸುರಕ್ಷಿತ ಎಂದು ಭಾವಿಸಿರುವರು ಏಕೆ?
ಕಿತ್ತಳೆಯಲ್ಲಿ ಪೌಷ್ಟಿಕಾಂಶಗಳು ಇದ್ದರು, ಅದನ್ನು ಗರ್ಭಾವಸ್ಥೆಯಲ್ಲಿ ಸೇವಿಸುವಾಗ ಈ ಕೆಳಗಿನ ವಿಷಯಗಳನ್ನು ನೆನೆಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ.

೧.ಕಿತ್ತಳೆಯಲ್ಲಿ ಸಿಟ್ರಸ್ ಆಮ್ಲ ಇರುವುದರಿಂದ ಗರ್ಭಾವಸ್ಥೆಯಲ್ಲಿ ಶೀತ ಅಥವಾ ಗಂಟಲು ನೋವು ಕಾಣಿಸಿಕೊಳ್ಳಬಹುದು.
೨.ನಿಮಗೆ ಮತ್ತು ನಿಮ್ಮ ಮಗುವಿಗೆ ಸೋಂಕು ಹರಡುವ ಅಥವಾ ದೇಹದಲ್ಲಿ ಸೋಂಕಿನ ಬೆಳವಣಿಗೆ ಹೆಚ್ಚಾಗುವ ಅವಕಾಶಗಳು ಹೆಚ್ಚಿರುತ್ತವೆ.
೩.ಗರ್ಭಾವಸ್ಥೆಯಲ್ಲಿ ದೇಹದ ಪ್ರತಿರಕ್ಷಣ ವ್ಯವಸ್ಥೆ ದುರ್ಬಲವಾಗಿರುತ್ತದೆ. ಆದ್ದರಿಂದ ಆಹಾರದ ಸೋಂಕಿನ ಅಪಾಯಗಳಿಗೆ ನೀವು ಬೇಗನೆ ಗುರಿಯಾಗಬಹುದು. ನೀವು ಲಿಸ್ಟೀರಿಯ ಎಂಬ ಬ್ಯಾಕ್ಟೀರಿಯಾ ಸೋಂಕಿಗೆ ಒಳಗಾಗಬಹುದು. ಇದು ನಿಮ್ಮ ಪ್ಲಾಸೆಂಟಾವನ್ನು ದಾಟಿ ಮಗುವಿಗೆ ಅಲರ್ಜಿಯನ್ನು ಉಂಟು ಮಾಡಬಹುದು.
೪.ಕಿತ್ತಳೆಯ ಸಂಸ್ಕರಿಸಿದ ಅಥವಾ ಬಾಟಲಿ ಕಿತ್ತಳೆಯ ಜ್ಯೂಸುಗಳನ್ನು ಕುಡಿಯುವುದರಿಂದ, ಅದಕ್ಕೆ ಸೇರಿಸಿರುವ ಬ್ಯಾಕ್ಟೀರಿಯಾ ನಿಮಗೆ ಹಾನಿಯನ್ನು ಮಾಡಬಹುದು.

ನೀವು ಆಹಾರದ ಸೋಂಕಿನಿಂದ ಬಳಲುತ್ತಿದ್ದರೆ, ಕಿತ್ತಳೆಯ ಸೇವನೆಯನ್ನು ನಿಲ್ಲಿಸುವುದು ಒಳ್ಳೆಯದು. ಇದರಿಂದ ನೀವು ಅಕಾಲಿಕ ಮಗುವಿನ ಜನನವನ್ನು ಎದುರಿಸಬೇಕಾಗಬಹುದು. ಅತಿರ್ವ ಮತ್ತು ಅಪರೂಪದ ಸಂಗತಿಗಳಲ್ಲಿ, ಇದರಿಂದ ಗರ್ಭಪಾತ ಕೂಡ ಸಂಭವಿಸಬಹುದು. ಆದ್ದರಿಂದ ನೀವು ಗರ್ಭಾವಸ್ಥೆಯಲ್ಲಿ ಕಿತ್ತಳೆಯನ್ನು ಮಿತಿಯಾಗಿ ಸೇವಿಸುವುದು ಒಳ್ಳೆಯದು.

ಗರ್ಭಾವಸ್ಥೆಯಲ್ಲಿ ಕಿತ್ತಳೆ ಸೇವನೆಯ ಲಾಭಗಳು
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ ಗರ್ಭಿಣಿ ಮಹಿಳೆಯರು ದಿನಕ್ಕೆ ೮೫mgನಷ್ಟು ವಿಟಮಿನ್ C ಅನ್ನು ಸೇವಿಸಬೇಕು.

ಕಿತ್ತಳೆ ಸೇವನೆಯಿಂದ ಗರ್ಭಾವಸ್ಥೆಯಲ್ಲಿ ಆಗುವ ಲಾಭಗಳು
೧.ಕಿತ್ತಳೆ ವಿಟಮಿನ್ C ನ ಮೂಲಗಳಾಗಿವೆ ಮತ್ತು ಇದರಲ್ಲಿ ಇವು ಹೇರಳವಾಗಿದೆ. ಮತ್ತು ಇವುಗಳು ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುತ್ತವೆ.
೨.ಬೇರೆ ಆಹಾರಗಳಿಂದ ಸತು ಮತ್ತು ಕಬ್ಬಿಣಾಂಶವನ್ನು ಇದು ಬಿಡುಗಡೆ ಮಾಡುತ್ತದೆ, ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಶಕ್ತಿ ನೀಡುತ್ತದೆ.
೩.ವೈದ್ಯಕೀಯ ಪರೀಕ್ಷೆಯ ಪ್ರಕಾರ ಮಗುವು ಆರೋಗ್ಯವಾಗಿರಲು ಸಹ ಇದು ಸಹಾಯ ಮಾಡುತ್ತದೆ.
೪.ಫೋಲೇಟ್, ಇದು ಗರ್ಭಾವಸ್ಥೆಯಲ್ಲಿ ಅತ್ಯವಶ್ಯಕವಾದ ವಿಟಮಿನ್, ಮತ್ತು ರಕ್ತದ ಕೋಶಗಳು ಬೆಳವಣಿಗೆಯಾಗಲು ಸಹಾಯ ಮಾಡುತ್ತವೆ. ಇದು ನರ ಕೊಳವೆಯ ದೋಷಗಳನ್ನು ತಡೆಯುತ್ತದೆ.
೫.ಮೂತ್ರದ PH ಮೌಲ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ದೇಹದಿಂದ ಸಿಟ್ರಿಕ್ ಆಮ್ಲ ಹೊರಹೋಗಲು ಸಹಾಯ ಮಾಡುತ್ತದೆ. ಜೊತೆಗೆ ಇದು ಕಿಡ್ನಿಯಲ್ಲಿ ಕಲ್ಲುಗಳನ್ನು ತೆಡೆಯಲು ನೆರವಾಗುತ್ತದೆ.

ಕಿತ್ತಳೆಯು ಅತ್ಯಂತ ಆರೋಗ್ಯಕರವಾದರು, ಅದು ನಿಮ್ಮ ಗರ್ಭಾವಸ್ಥೆಯಲ್ಲಿ ನಿಮಗೆ ಮತ್ತು ನಿಮ್ಮ ಮಗುವಿಗೆ ಒಳ್ಳೆಯದು ಎಂಬುದನ್ನು ನಿಮ್ಮ ವೈದ್ಯರ ಬಳಿ ತಿಳಿದುಕೊಳ್ಳಿ.

Comments are closed.