ಕರಾವಳಿ

ಮೊಟ್ಟೆಯಲ್ಲಿರುವ ಬಿಳಿ ಲೊಳೆಯಿಂದಾಗುವ ಹಲವು ಉಪಯೋಗಗಳು

Pinterest LinkedIn Tumblr

ನಾವೆಲ್ಲಾ ಮೊಟ್ಟೆಗಳನ್ನ ತಿನ್ನುತ್ತೇವೆ. ಆದರೆ ಮೊಟ್ಟೆಯನ್ನ ಸೌಂದರ್ಯವರ್ಧಕವಾಗಿ ಬಳಸುವುದು ಕಡಿಮೆ. ಹೆಚ್ಚಿನ ಪೋಷಕಾಂಶಗಳನ್ನ ಹೊಂದಿರುವ ಮೊಟ್ಟೆ ಸದ್ಯ ಕಡಿಮೆ ಬೆಲೆಗೆ ಸಹ ಸಿಗುತ್ತದೆ.

ಪೋಷಕಾಂಶಗಳ ಜೊತೆಗೆ ಪ್ರೊಟೀನ್ ಗಳು, ವಿಟಮಿನ್ ಸಹ ಇವೆ. ಹೀಗಾಗಿ ವೈದ್ಯರು ಕೂಡಾ ಅಶಕ್ತರಿಗೆ ಮೊಟ್ಟೆಯನ್ನ ತಿನ್ನಲು ಸೂಚಿಸುತ್ತಾರೆ. ಅದೇನೇ ಇರಲಿ, ಅದು ಆರೋಗ್ಯದ ವಿಷಯವಾದರೇ, ಇತ್ತ ಮೊಟ್ಟೆ ಸೌಂದರ್ಯಕ್ಕೂ ಯೂಸ್ ಫುಲ್ ಅನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ.

ಹೌದು. ನೀವು ಮೊಟ್ಟೆಯಲ್ಲಿ ಬಿಳಿ ಲೊಳೆ ಇರುವುದನ್ನ ನೋಡಿರಬಹುದು. ಇದು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದರಿಂದ ತಯಾರಿಸಿದ ಫೇಸ್ ಫ್ಯಾಕ್ ನಿಮ್ಮ ಮುಖದಲ್ಲಿರುವ ಜಿಡ್ಡನ್ನು ತೆಗೆಯುತ್ತದೆ. ಇದಕ್ಕಾಗಿ ನೀವು ಮೊಟ್ಟೆಯ ಬಿಳಿ ಭಾಗವನ್ನ ಮುಖಕ್ಕೆ ಹಚ್ಚಿಕೊಳ್ಳಿ.

ನಂತರ ಒಣಗಲು ಬಿಡಿ. ಈ ವೇಳೆ ನೀವು ನಿಮ್ಮ ಮುಖವನ್ನು ಕದಲಿಸಬಾರದು, ಮಾತನಾಡಬಾರದು. ಈ ಬಿಳಿ ಪ್ಯಾಕ್ ನಿಮ್ಮ ಮುಖದ ಚರ್ಮವನ್ನು ಬಿಗಿಗೊಳಿಸುತ್ತದೆ. ಇನ್ನು ನೀವು ಈ ಬಿಳಿ ದ್ರವಕ್ಕೆ ಹಾಲು, ಜೇನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಹೀಗೆ ಮಾಡಿದರೆ ನಿಮ್ಮ ಮುಖದ ಚರ್ಮ ಕಾಂತಿಯುತವಾಗುತ್ತದೆ.

Comments are closed.