ಕರಾವಳಿ

ಧರ್ಮ ಸಂಸದ್ ಚಾಲನೆ: 2019ರ ಒಳಗೆ ರಾಮಮಂದಿರ ಸ್ಥಾಪನೆ ಶತ ಸಿದ್ದ

Pinterest LinkedIn Tumblr

ಉಡುಪಿ: ಎಲ್ಲೆಡೆ ರಾಮ ನಾಮ ಜಪಮಂತ್ರ. ರಾಮಮಂದಿರ ಸ್ಥಾಪನೆಯ ಕುರಿತಾದ ಘೋಷ… ದೇಶದ ಮೂಲೆ ಮೂಲೆಗಳಿಂದ ಹರಿದುಬಂದ ಸಂತರ ದಂಡು. ಮೊದಲನೇ ದಿನವೇ ರಾಮಮಂದಿರ ನಿರ್ಮಾಣಕ್ಕೆ ಗಡು… ಇದೆಲ್ಲಾ ಉಡುಪಿಯಲ್ಲಿ ವಿಹಿಂಪದ 12ನೇ ಧರ್ಮ ಸಂಸದ್ ನ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಕಂಡುಬಂದಿದ್ದು.

ಉಡುಪಿ ಇಂದು ಅಕ್ಷರಶ: ಸಂತರ ಸಂಗಮಕ್ಕೆ ಕಾರಣವಾಯಿತು. ಉಡುಪಿಯ ರಾಯಲ್ ಗಾರ್ಡನ್ ನಲ್ಲಿ ಎಲ್ಲೇ ನೋಡಿದರೂ ವಿವಿಧ ಸಂತರು, ಸಾಧುಗಳು, ಶ್ರೀಗಳು ಕಂಡು ಬಂದರು…ದೇಶದ ಮೂಲೆ ಮೂಲೆಗಳಿಂದ ಬಂದ ಸಂತರು ವಿಹಂಪದ 12ನೇ ಧರಮ ಸಂಸದ್ ಗೆ ಸಾಕ್ಷಿಯಾದರು. ಉಡುಪಿಯಲ್ಲಿ ಆರಂಭವಾಗಿರುವ ಮೂರು ದಿನಗಳ ಧರ್ಮ ಸಂಸದ್ ದೇಶದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಕಾರಣ ಮೊದಲ ದಿನ ಮೊಳಗಿದ ರಾಮಮಂದಿರ ಸ್ಥಾಪನೆಯ ಜಪ…ಯಸ್ ಇಂದು ಮೂರು ದಿನಗಳ ಕಾಲ ನಡೆಯುವ ಧರ್ಮ ಸಂಸದ್ ಗೆ ಚಾಲನೆ ಸಿಕ್ಕಿದೆ. ಶ್ರೀ ಕೃಷ್ಣ ಮಠದಲ್ಲಿ ಸಾಧು ಸಂತರ ಪಾದ ಪೂಜೆ ಬಳಿಕ ಮಠದಿಂದ ರಾಯಲ್ ಗಾರ್ಡನ್ ತನಕ ಪಾದ ಯಾತ್ರೆ ನಡೆಯಿತು. ಪೇಜಾವರ ಶ್ರೀ , ಸುತ್ತೂರು, ವಜ್ರದೇಹಿ, ಸೇರಿದಂತೆ ವಿಹಂಪದ ಪ್ರವೀಣ್ ತೊಗಾಡಿಯಾ, ಮೋಹನ್ ಭಾಗವತ್ ಮುಂತಾದವರು ಭಾಗವಹಿಸಿದ್ದರು. ಉಡುಪಿಯ ರಾಯಲ್ ಗಾರ್ಡನ್ ನ ನಾರಾಯಣಗುರು ಸಭಾಂಗಣದಲ್ಲಿ ಧರ್ಮ ಸಂಸದ್ ನ್ನು ಸುತ್ತೂರು ಶ್ರೀ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಉದ್ಘಾಟನಾ ಸಮಾರಂಭದಲ್ಲಿಯೇ ಭಾಗವಹಿಸಿದ ವಿಶ್ವಹಿಂದೂ ಪರಿಷತ್ ನ ಅಂತರಾಷ್ಟ್ರೀಯ ಕಾರ್ಯಾದ್ಯಕ್ಷ ಪ್ರವೀಣ್ ಭಾಯ್ ತೊಗಾಡಿಯಾ ಅಯೋದ್ಯೆಯಲ್ಲಿ ನಮ್ಮ ಜಾಗ ಬಿಟ್ಟುಕೊಡಿ ನಮಗೆ ಮಂದಿರ ಮಾತ್ರ ಬೇಕು ಎನ್ನುವ ಮೂಲಕ ರಾಮಮಂದಿರ ಸ್ಥಾಪನೆಯ ಕುರಿತು ತಮ್ಮ ನಿಲುವನ್ನು ವ್ಯಪ್ತಪಡಿಸಿದರು. ಆರ್.ಎಸ್.ಎಸ್ ನ ಸರ ಸಂಘ ಚಾಲಕ ಮೋಹನ್ ಭಾಗವತ್ ಮಾತನಾಡಿ ರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಮಾತ್ರ ನಿರ್ಮಾಣವಾಗಬೇಕು. ಬೇರೆ ಯಾವುದೇ ಕಟ್ಟದ ಆಗಬಾರದು. ಮಂದಿರ ಆಗೋದು ನೂರಕ್ಕೆ ನೂರು ಸತ್ಯ ಎನ್ನುವ ಮೂಲಕ ರಾಮಮಂದಿರ ಕಟ್ಟಿಯೇ ಸಿದ್ದ ಎಂಬ ಸೂಚನೆ ನೀಡಿದರು. ಇನ್ನೊಂದು ಹೆಜ್ಜೆ ಮುಂದಕ್ಕೆ ಇಟ್ಟು ಮಾತನಾಡಿರುವ ಪೇಜಾವರ ಶ್ರೀ 2019ರ ಒಳಗೆ ರಾಮಮಂದಿರ ಸ್ಥಾಪನೆ ಆಗಲಿದೆ ಎನ್ನುವ ಮೂಲಕ ದೇಶದಾದ್ಯಂತ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿಯೇ ರಾಮಜನ್ಮ ಭೂಮಿಯ ಬಗ್ಗೆ ಸ್ಪಷ್ಟ ಸಂದೇಶವನ್ನು ನೆರೆದ ಶ್ರೀಗಳು ನೀಡಿದರು.ವೇದಿಕೆಯಲ್ಲಿ ೯೦ಕ್ಕೂ ಅಧಿಕ ಶ್ರೀಗಳು ಭಾಗವಹಿಸಿದ್ದರು. 1985ರಲ್ಲಿ ಉಡುಪಿಯಲ್ಲಿ ನಡೆದ ವಿಹಂಪದ 2ನೇ ಧರ್ಮ ಸಂಸದ್ ನಲ್ಲಿ ರಾಮಜನ್ಮ ಭೂಮಿಯಲ್ಲಿ ಬೀಗ ಜಡಿಯಲಾಗಿದ್ದ ರಾಮಮಂದಿರದ ಬೀಗ ತೆಗೆಯುವ ನಿರ್ಣಯವನ್ನು ಉಡುಪಿಯಲ್ಲೇ ಕೈಗೊಂಡಿರುವ ಬಗ್ಗೆ ಉಲ್ಲೇಖ ಮಾಡುತ್ತಾ…ಈ ಬಾರಿಯ ಧರ್ಮ ಸಂಸದ್ ನ ಮೂಲಕ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ಸ್ಥಾಪನೆ ನಡೆಯಲೇ ಬೇಕು ಎಂಬ ಹಠ ಹಿಡಿದಿರುವುದು ಮೊದಲ ದಿನವೇ ಕಂಡು ಬಂತು.ಯಾವುದೇ ಮೂಲಕನಾದರೂ ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ಸ್ಥಾಪನೆ ನಡೆಸಿಯೇ ಸಿದ್ದ ಎಂಬ ಸಂದೆಶ ಸಾಧು ಸಂತರಿಂದ ವ್ಯಕ್ತವಾಯಿತು.

ಒಟ್ಟಿನಲ್ಲಿ ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಹಲವಾರು ಕಾರಣಗಳಿಂದ ಗಮನ ಸೆಳೆಯುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಧರ್ಮ ಸಂಸದ್ ಅನೇಕ ನಿರ್ಣಯಕ್ಕೂ ಸಾಕ್ಷಿಯಾಗಲಿದೆ. ಮಾತ್ರ ಅಲ್ಲದೇ ಕೇಂದ್ರ, ರಾಜ್ಯ ಸರ್ಕಾರದ ಮೇಲೆಒತ್ತಡ ಹೇರುವ ಕಾರ್ಯತಂತ್ರವನ್ನೂ ರೂಪಿಸಲಾಗಿದೆ.

 

 

Comments are closed.