ಕರಾವಳಿ

‘ಧರ್ಮ ಸಂಸದ್’ನಲ್ಲಿ ಅಸ್ಪಶ್ಯತೆ, ಗೋ ರಕ್ಷಣೆ, ಕುರಿತ ಕಾನೂನು ಬಗ್ಗೆ ಚರ್ಚೆ : ಮಂಗಳೂರಿನಲ್ಲಿ ಪ್ರವೀಣ್ ತೊಗಾಡಿಯಾ

Pinterest LinkedIn Tumblr

ಮಂಗಳೂರು, ನವೆಂಬರ್.23: ವಿಶ್ವ ಹಿಂದೂ ಪರಿಷತ್ ವತಿಯಿಂದ ಉಡುಪಿಯಲ್ಲಿ ನ.24ರಿಂದ 3 ದಿನಗಳ ಕಾಲ ನಡೆಯಲಿರುವ ‘ಧರ್ಮ ಸಂಸದ್’ನಲ್ಲಿ ಭಾಗವಹಿಸಲು ವಿಶ್ವ ಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಇಂದು ಮಂಗಳೂರಿಗೆ ಆಗಮಿಸಿದರು.

ಗುರುವಾರ ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ವತಿಯಿಂದ ಉಡುಪಿಯಲ್ಲಿ ನ.24ರಿಂದ 3 ದಿನಗಳ ಕಾಲ ನಡೆಯಲಿರುವ ‘ಧರ್ಮ ಸಂಸದ್’ನಲ್ಲಿ ಅಸ್ಪಶ್ಯತೆ, ಗೋ ರಕ್ಷಣೆ ಕುರಿತ ಕಾನೂನು ಬಗ್ಗೆ ಚರ್ಚೆಯಾಗಲಿದೆ. ಈ ಬಗ್ಗೆ ಧರ್ಮಸಂಸತ್ತಿನಲ್ಲೇ ವಿಚಾರ ಮಂಡನೆಯಾಗಲಿದೆ. ರೈತರಿಗೆ ಪೂರಕ ಯೋಜನೆ ಕುರಿತ ವಿಷಯವೂ ಚರ್ಚೆ ನಡೆಯಲಿದೆ. ಧರ್ಮ ಸಂಸತ್ತಿನಲ್ಲೇ ಈ ಬಗ್ಗೆ ತಿಳಿಸಲಾಗುವುದು. ಮಾತ್ರವಲ್ಲದೇ ಮುಖ್ಯವಾಗಿ ‘ಧರ್ಮ ಸಂಸದ್’ನಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಚರ್ಚೆಯಾಗಲಿದೆ ಎಂದು ತೊಗಾಡಿಯಾ ಹೇಳಿದರು.

ಇದೇ ವೇಳೆ ‘ಪದ್ಮಾವತಿ’ ಸಿನಿಮಾ ವಿವಾದದ ಕುರಿತಂತೆ ಮಾಧ್ಯಮದವರು ಪ್ರಶ್ನಿಸಿದಾಗ ಅದಕ್ಕೆ ಪ್ರತಿಕ್ರಿಯಿಸಿದ ಪ್ರವೀಣ್ ತೊಗಾಡಿಯಾ ಅವರು ‘ಪದ್ಮಾವತಿ’ ಚಿತ್ರ ಬ್ಯಾನ್ ಆಗಬೇಕು ಎಂದಷ್ಟೇ ಹೇಳೆ ತೆರಳಿದರು.

Comments are closed.