ಕರಾವಳಿ

‘ಧರ್ಮ ಸಂಸದ್’ ಸಿಂಗಾರಗೊಂಡಿದೆ ಕೃಷ್ಣನ ನಗರಿ ಉಡುಪಿ

Pinterest LinkedIn Tumblr

ಉಡುಪಿ: ಕೃಷ್ಣನ ನಗರಿ ಉಡುಪಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.ಮೂರು ದಿನಗಳ ಧರ್ಮ ಸಂಸದ್ ಕಾರ್ಯಕ್ರಮ ಉಡುಪಿಯಲ್ಲಿ ನಡೆಯಲಿರುವ ಕಾರಣ ನಗರವೆಲ್ಲಾ ಕೇಸರಿಮಯವಾಗಿದೆ.

ಎಲ್ಲಿ ನೋಡಿದರಲ್ಲಿ ಕೇಸರಿ ಬಾವುಟಗಳ ಶೃಂಗಾರ. ಉದ್ದಗಲಕ್ಕೂ…. ದೊಡ್ಡ ದೊಡ್ಡ ಕೇಸರಿ ಬಣ್ಣದ ಕಟೌಟುಗಳು. ಕೃಷ್ಣ ನಗರಿ ಉಡುಪಿಯಲ್ಲಿ ಕಾಣ ಸಿಗುವ ದೃಶ್ಯ. ನವಂಬರ್ 24, 25, 26 ನೇ ತಾರೀಖಿನಂದು ನಡೆಯಲಿರುವ ಧರ್ಮ ಸಂಸದ್ ಕಾರ್ಯಕ್ರಮಕ್ಕೆ ಇಡೀ ಉಡುಪಿಗೆ ಉಡುಪಿಯೇ ಕೇಸರಿ ಬಣ್ಣದಲ್ಲಿ ಶೃಂಗಾರಗೊಂಡಿದೆ. ನಗರದೂದ್ದಕ್ಕೂ ಕೇಸರಿ ಬಂಟಿಗ್ಸ್ ಗಳು ,ಕಾರ್ಯಕ್ರಮಕ್ಕೆ ಶುಭಕೋರುವ ಸ್ವಾಗತ ಮಂಟಪಗಳು, ಆಳೆತ್ತರದ ಬೃಹತ್ ಕಟೌಟುಗಳು ಎಲ್ಲೆಡೆ ರಾರಾಜಿಸುತ್ತಿವೆ.

ಮೂರು ದಿನಗಳ ಅಪೂರ್ವ ಧರ್ಮ ಸಂಸದ್ ಕಾರ್ಯಕ್ರಮವನ್ನು ನವಂಬರ್ 24 ರಂದು ಪರಮ ಪೂಜ್ಯ ಪೇಜಾವರ ಶ್ರೀಗಳ ಅಧ್ಯಕ್ಷತೆಯಲ್ಲಿ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಡಾ.ಶಿವಕುಮಾರ್ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ನವಂಬರ್ 25 ಬೃಹತ್ ಸಂತ ಸಮ್ಮೇಳನ ನಡೆಯಲಿದ್ದು ದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಂತರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ನವಂಬರ್ 26 ರಂದು ಧರ್ಮ ಸಂಸತ್ತ್ ನ ಪ್ರಧಾನ ಕಾರ್ಯಕ್ರಮವಾದ ಬೃಹತ್ ಹಿಂದೂ ಸಮಾವೇಶವೂ ಉಡುಪಿ ಎಂ.ಜಿ.ಎಂ ಮೈದಾನದಲ್ಲಿ ನಡೆಯಲಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯಾನಥ ಹಾಗೂ ಮೋಹನ್ ಭಾಗವತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮೂರು ದಿನಗಳ ಧರ್ಮ ಸಂಸತ್ ಈ ಕಾರ್ಯಕ್ರಮದಲ್ಲಿ ರಾಮ ಜನ್ಮ ಭೂಮಿ ಮಂದಿರದ ನಿರ್ಮಾಣ, ಗೋ ರಕ್ಷಣೆ ಯ ಬಗ್ಗೆ ಚರ್ಚೆ ,ಭಾರತೀಯ ಸಂಸ್ಕೃತಿ ರಕ್ಷಣೆ ಹಾಗೂ ಸಂವರ್ಧನೆಯ ಬಗ್ಗೆ ಪ್ರಮುಖ ಚರ್ಚೆಗಳು ನಡೆಯಲಿವೆ.ಈಗಾಗಲೇ ಕಾರ್ಯಕ್ರಮದ ಪೂರ್ವ ಭಾವಿ ಸಿದ್ದತೆಗಳು ಅಂತಮ ಹಂತದದಲ್ಲಿದ್ದು ಸಾವಿರಾರು ಕಾರ್ಯಕರ್ತರು ರಾತ್ರೆ ಹಗಲೆನ್ನದೇ ಶ್ರಮಿಸುತ್ತಿದ್ದಾರೆ.

Comments are closed.