ಕರಾವಳಿ

ಕಂಡ್ಲೂರು: ಅಕ್ರಮ ಜಾನುವಾರು ಸಾಗಾಟ ಪತ್ತೆ: 7 ಜಾನುವಾರು ರಕ್ಷಣೆ, ಆರೋಪಿ ಎಸ್ಕೇಪ್

Pinterest LinkedIn Tumblr

ಕುಂದಾಪುರ: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವೇಳೆ ಕಂಡ್ಲೂರಿನಲ್ಲಿ ಕಾರ್ಯಾಚರಿಸುತ್ತಿರುವ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಸಾಗಾಟಕ್ಕೆ ಬಳಸಿದ ವಾಹನ ಸಮೇತ 7 ಜಾನುವಾರುಗಳನ್ನು ರಕ್ಷಿಸಿ ವಶಕ್ಕೆ ಪಡೆದ ಘಟನೆ ಬುಧವಾರ ಬೆಳಿಗ್ಗೆನ ಜಾವ ನಡೆದಿದೆ.

 ಜಾನುವಾರುಗಳನ್ನು ಪಿಕ್ಅಪ್ ವಾಹನದಲ್ಲಿ ತುಂಬಿಸಿಕೊಂಡು ತೆರಳುತ್ತಿದ್ದಾಗ ಪೊಲೀಸರಿಗೆ ಸಿಕ್ಕ ಖಚಿತ ವರ್ತಮಾನದಂತೆ ಕಾರ್ಯಾಚರಣೆ ನಡೆಸಿದ್ದು ಈ ಕಾರ್ಯಾಚರಣೆಗೆ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯವರು ಸಾಥ್ ನೀಡಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಆರೋಪಿ ವಹನ ಬಿಟ್ಟು ಪರಾರಿಯಾಗಿದ್ದು 7 ಜಾನುವಾರುಗಳನ್ನು ರಕ್ಷಿಸಲಾಗಿದೆ. ಪರಾರಿಯಾದ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.

 

ಗ್ರಾಮಾಂತರ ಠಾಣೆ ಪಿಎಸ್ಐ ಶ್ರೀಧರ್ ನಾಯ್ಕ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಘೊಂಡಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಕಳೆದ ತಿಂಗಳು (ಅ.17) ಕೂಡ ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಜನುವಾರು ಸಾಗಾಟದ ವೇಳೆ ಪೊಲೀಸರು ವಾಹನ ಬೆನ್ನತ್ತಿದಾಗ ಬ್ಯಾರಿಕೇಡ್ ಸಮೀಪ ಅಡ್ದಗಟ್ಟಲು ಬಂದ ಸಿಬ್ಬಂದಿ ಮೇಲೆ ಆರೋಪಿಗಳು ವಾಹನ ಹತ್ತಿಸಲು ಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವೂ ನಡೆದಿತ್ತು.

ಇದನ್ನೂ ಓದಿರಿ: ಅಕ್ರಮ ಗೋ ಸಾಗಾಟ: ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿಗೆ ಗಾಯ; ಎಸ್ಪಿ ಭೇಟಿ (Video)

ಅಕ್ರಮ ಜಾನುವಾರು ಸಾಗಾಟ: ಮೂವರು ಆರೋಪಿಗಳಿಗೆ ಶೋಧ: ಎಸ್ಪಿ ಸಂಜೀವ ಪಾಟೀಲ್

ಗಾಯಾಳು ಪೊಲೀಸ್ ಸಿಬ್ಬಂದಿಯನ್ನು ಭೇಟಿ ಮಾಡಿದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Video)

ಅಕ್ರಮ ಜಾನುವಾರು ಸಾಗಾಟ, ಪೊಲೀಸ್ ಮೇಲೆ ಹಲ್ಲೆ ಪ್ರಕರಣ: ಆರೋಪಿ ಅರೆಸ್ಟ್

Comments are closed.