ಕರಾವಳಿ

ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಹುರುಳಿ ಬೀಜ ಸಹಕಾರಿ

Pinterest LinkedIn Tumblr

ಹುರುಳಿ ಬೀಜವನ್ನ ನೀವು ನೋಡಿರಬಹುದು, ತಿಂದಿರಲೂಬಹುದು. ಆದರೆ ಇದರಿಂದ ಎಷ್ಟು ಲಾಭ ಇದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಾ..? ಈ ಬೀಜವನ್ನ ತಿಂದರೆ ಅನೇಕ ಲಾಭ ನಿಮ್ಮದಾಗುತ್ತದೆ.

* ಹುರುಳಿ ಬೀಜಗಳು ಇನ್ಸುಲಿನ್ ಉತ್ಪಾದನೆಯ ಮೇಲೆ ಹಿಡಿತವನ್ನು ಸಾಧಿಸುತ್ತದೆ. ಜೊತೆಗೆ ಸಕ್ಕರೆ ಕಾಯಿಲೆ ಬಾರದಂತೆ ತಡೆಯುತ್ತದೆ.
* ಟೈಪ್ ೨ ಮಧುಮೇಹ ಬಾರದಂತೆ ಇದು ತಡೆಗಟ್ಟುತ್ತದೆ. ಜೊತೆಗೆ ಹುರುಳಿ ಬೀಜಗಳಲ್ಲಿ ಫೈಬರ್ ಅಂಶ ಇರುತ್ತದೆ. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸುತ್ತದೆ.
* ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ಸಮಸ್ಯೆಯಿಂದ ಪಾರಾಗಬೇಕೆಂದರೆ ಹುರುಳಿ ಬೀಜಗಳನ್ನು ನಿಮ್ಮ ಆಹಾರದಲ್ಲಿ ಬಳಸಬೇಕು. ಹುರುಳಿ ಬೀಜಗಳಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶಗಳು ಕ್ಯಾನ್ಸರ್ ಕಾರುವ ಅಣುಗಳ ವಿರುದ್ಧ ಹೋರಾಡುತ್ತದೆ .
* ಹುರುಳಿ ಬೀಜಗಳಲ್ಲಿ ಆಲ್ಫಾ ಅಮೈನೊ ಅಂಶವಿದೆ. ಇದು ದೇಹದ ತೂಕ ನಿಯಂತ್ರಿಸುತ್ತದೆ.
* ಹುರುಳಿ ಬೀಜಗಳಲ್ಲಿ ಫೈಬರ್ ಅಂಶ ಬಹಳ ಹೆಚ್ಚಾಗಿದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ನಾರಿನಾಂಶವು ಸಹ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ.
* ಸುಧಾ ನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆಯಾಗುತ್ತದೆ. ಇದನ್ನ ಇದು ಕಡಿಮೆಗೊಳಿಸುತ್ತದೆ. ಹೀಗಾಗಿ ಹಾರ್ಟ್ ಅಟ್ಯಾಕ್ ಹಾಗೂ ಹೃದಯ ನಾಳಗಳಲ್ಲಿ ಕೊಬ್ಬಿನ ಶೇಖರಣೆ ಸಮಸ್ಯೆಗಳು ಮಾಯವಾಗುತ್ತದೆ.

Comments are closed.