ಕರಾವಳಿ

ಮಗುವಿಗೆ ಜನ್ಮ ನೀಡುವ ತಾಯಿಯಂದಿರು ತಿಳಿದುಕೊಳ್ಳಬೇಕಾದ ಕೆಲವು ಸಂಗತಿಗಳು

Pinterest LinkedIn Tumblr

ಮಾತೃತ್ವ ಎಂಬುದು ಮಹಿಳೆಯರಿಗೆಲ್ಲಾ ವರ ಇದ್ದಂತೆ. ಸರಿಸುಮಾರು ಪ್ರತಿಯೊಬ್ಬ ಮಹಿಳೆ ವಿವಾಹದ ಬಳಿಕ ತಾಯಿ ಆಗಬೇಕೆಂದು, ಮಾತೃತ್ವದ ಆನಂದ ಅನುಭವಿಸಬೇಕೆಂದು ಕನಸು ಕಾಣುತ್ತಾಳೆ. ಅದಕ್ಕೆ ಅನುಗುಣವಾಗಿ ತನ್ನ ಕನಸನ್ನು ನಿಜ ಮಾಡಿಕೊಳ್ಳುತ್ತಾಳೆ ಕೂಡ. ಆದರೆ ಕೆಲವರಿಗೆ ಮಾತ್ರ ಮಾತೃತ್ವ ಎಂಬುದು ಚದುರಿದ ಕನಸಿನಂತಾಗುತ್ತದೆ. ಅದು ಬೇರೆ ಸಂಗತಿ. ಆದರೆ ಬಹಳಷ್ಟು ಮಂದಿ ತಾಯಂದಿರು ಮೊದಲ ಸಲ ಮಾತೃತ್ವ ಪಡೆದ ಕೂಡಲೆ ಆಗ ಅನುಭವಿಸುವ ಆ ಆನಂದ ಬೇರೆ. ಈ ಹಿನ್ನೆಲೆಯಲ್ಲಿ ಮಗು ಜನಿಸುವ ಮೊದಲು, ಜನಿಸಿದ ಬಳಿಕ ಡಾಕ್ಟರ್ ಜತೆಗೆ ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು, ತಿಳಿದವರು, ನೆರೆಹೊರೆಯವರು ತಾಯಂದಿರಿಗೆ ಅದೆಷ್ಟೋ ಸಂಗತಿಗಳನ್ನು, ಎಚ್ಚರಿಕೆಗಳನ್ನು ಹೇಳುತ್ತಿರುತ್ತಾರೆ. ಆ ರೀತಿ ಮಾಡಬಾರದೆಂದು, ಇದನ್ನು ತಿನ್ನಬಾರದು, ಅದು ತಿನ್ನಬೇಕು…ಎಂದು ಹೇಳುತ್ತಿರುತ್ತಾರೆ. ಆದರೆ ಅವಷ್ಟೇ ಅಲ್ಲ, ಮಗುವಿಗೆ ಜನ್ಮ ನೀಡುತ್ತಿರುವ, ಜನ್ಮ ನೀಡಿದ ಯಾವ ತಾಯಿಯೂ ಕೆಲವು ಸಂಗತಿಗಳ ಬಗ್ಗೆ ಕಡ್ಡಾಯವಾಗಿ ತಿಳಿದುಕೊಂಡಿರಬೇಕು. ಅವು ಏನೆಂದರೆ…

1. ಮಗುವಿನ ಜನ್ಮ ನೀಡಿದರಷ್ಟೇ ಹೆರಿಗೆ ಪೂರ್ಣವಾಗಲ್ಲ. ಮಗುವಿಗೆ ಸುತ್ತಿಕೊಂಡಿರುವ ಮಾಯೆ, ಇತರೆ ದ್ರವಗಳು ಹೊರಗೆ ಬಂದರಷ್ಟೇ ಹೆರಿಗೆ ಪೂರ್ಣವಾಗುತ್ತದೆ. ಮೊದಲು ಮಗು ವೇಗವಾಗಿ ಹೊರಬರುತ್ತದೆ. ಇತರೆ ಹೊರಗೆ ಬರಲು ಸ್ವಲ್ಪ ಸಮಯ ಹಿಡಿಸುತ್ತದೆ. ಆದರೆ ಅವುಗಳ ಬಗ್ಗೆ ನೋವನುಭವಿಸಬೇಕಾದ ಅಗತ್ಯವಿಲ್ಲ. ಮಗು ಜನಿಸುವ ಸಮಯದಲ್ಲಿ ನೋವು ಅನುಭವಿಸಬೇಕಾಗುತ್ತದೆ.

2. ಬಹಳಷ್ಟು ಮಂದಿ ಗರ್ಭಿಣಿಯರಿಗೆ ವೈದ್ಯರು ಹೆರಿಗೆ ದಿನಾಂಕ ನೀಡುತ್ತಾರೆ. ಆದರೆ ಆ ರೀತಿ ಕೊಟ್ಟ ಕೇವಲ ಶೇ.5ರಷ್ಟು ಮಂದಿಗೆ ಮಾತ್ರ ಸರಿಯಾದ ಟೈಮಿಗೆ ಡೆಲಿವರಿ ಆಗುತ್ತದೆ. ಆದಕಾರಣ ಸೂಕ್ತಸಮಯಕ್ಕೆ ಡೆಲಿವರಿ ಆಗದಿದ್ದರೆ ಆತಂಕಪಡಬೇಕಾದ ಅಗತ್ಯವಿಲ್ಲ. ಅದು ಸಹಜ.

3. ಡೆಲಿವರಿ ಸಮಯದಲ್ಲಿ ಮಹಿಳೆಯರ ಬೆನ್ನುಮೂಳೆ ಭಾಗದಲ್ಲಿ ಎಪಿಡ್ಯೂರಲ್ ಎಂಬ ಸೂಜಿಯನ್ನು ನೋವು ಕಡಿಮೆಯಾಗಲು ನೀಡುತ್ತಾರೆ. ಆದರೆ ಇದನ್ನು ನೋವಿನ ಉಪಶಮನಕ್ಕಾಗಿಯೇ ಹೊರತು, ಇದರಿಂದ ಸೊಂಟದ ಕೆಳಗಿನ ಭಾಗ ಯಾವುದೇ ಅನಾರೋಗ್ಯಕ್ಕೆ ಒಳಗಾಗಲ್ಲ. ಕಾಲು, ಪಾದಗಳಲ್ಲಿ ಸ್ವರ್ಶ ಇಲ್ಲದಂತೆ ಸ್ವಲ್ಪ ಸಮಯದ ಕಾಲ ಅನ್ನಿಸುತ್ತದೆ. ಅದು ಸ್ವಲ್ಪ ಸಮಯವಷ್ಟೇ. ಆ ಬಳಿಕ ಎಲ್ಲಾ ಸಾಮಾನ್ಯ ಸ್ಥಿತಿಗೆ ಬರುತ್ತದೆ.

4. ಹೊಟ್ಟೆಯಲ್ಲಿ ಸರಿಯಾದ ಆಹಾರ ಇಲ್ಲದಿದ್ದರೆ ಡೆಲಿವರಿ ಕಷ್ಟವಾಗುತ್ತದೆ. ಆದಕಾರಣ ಡೆಲಿವರಿಗೆ ಹೋಗುವ ಮುನ್ನ ಗರ್ಭಿಣಿಯರು ಒಳ್ಳೆಯ ಭೋಜನ ಮಾಡಿದರೆ ಡೆಲಿವರಿ ಸುಲಭವಾಗುತ್ತದೆ.

5. ಡೆಲಿವರಿ ಬಳಿಕ ವೈದ್ಯರು ತಾಯಂದಿರಿಗೆ ಬೆನ್ನುಮೂಳೆ, ಹೊಟ್ಟೆ ಭಾಗದಲ್ಲಿ ಮಸಾಜ್ ಮಾಡುತ್ತಾರೆ. ಇದರಿಂದ ಗರ್ಭಕೋಶ ಮತ್ತೆ ಸಾಮಾನ್ಯ ಸ್ಥಿತಿ ತಲುಪುತ್ತದೆ. ಅಷ್ಟೇ ಅಲ್ಲ, ರಕ್ತಸ್ರಾವ ಸಹ ಕಡಿಮೆಯಾಗುತ್ತದೆ.

6. ಹೆರಿಗೆ ಬಳಿಕ 6 ತಿಂಗಳವರೆಗೂ ಕೆಲವು ಮಹಿಳೆಯರಲ್ಲಿ ರಕ್ತಸ್ರಾವ ನಡೆಯುತ್ತಿರುತ್ತದೆ. ಇದನ್ನು ನೋಡಿ ಕಂಗಾಲಾಗುವ ಅಗತ್ಯವಿಲ್ಲ. ನ್ಯಾಪ್‍ಕಿನ್ಸ್, ಅಡಲ್ಟ್ ಡೈಪರ್ಸ್ ಬಳಸಿದರೆ ಸರಿಹೋಗುತ್ತದೆ.

7. ತಾಯಿಯಿಂದ ಮಗು ಬೇರ್ಪಟ್ಟಾಗ ಕೆಲವು ದಿನ, ವಾರ, ತಿಂಗಳವರೆಗೂ ಮಗುವಿನ ಹೊಕ್ಕುಳ ಬಳ್ಳಿ ಹಾಗೆಯೇ ಇರುತ್ತದೆ. ಅದು ತನ್ನಷ್ಟಕ್ಕೇ ಉದುರುವವರೆಗೂ ಇರಬೇಕು. ಅದನ್ನು ಕೀಳಲು ಪ್ರಯತ್ನಿಸಬಾರದು.

8. ಗರ್ಭಿಣಿಯರು ಹೊಟ್ಟೆಯಲ್ಲಿನ ಮಗು ಒತ್ತಡ ಉಂಟು ಮಾಡುತ್ತಿರುವ ಕಾರಣ ಮಾತು ಮಾತಿಗೂ ಟಾಯ್ಲೆಟ್‌ಗೆ ಹೋಗಬೇಕಾಗುತ್ತದೆ. ಇದೂ ಸಹ ಸಹಜ. ಆತಂಕ ಪಡಬೇಕಾದ ಅಗತ್ಯವಿಲ್ಲ.

9. ತಿಂಗಳುಗಳು ತುಂಬದೆ ಜನಿಸಿದ ಮಗು ಒಂದು ರೀತಿಯ ಪೊರೆಯೊಂದಿಗೆ ಜನಿಸುತ್ತದೆ. ಇದನ್ನು ವೆರ್ನಿಕ್ಸ್ ಕೆಸೋಸಾ ಎನ್ನುತ್ತಾರೆ. ಇದು ಕೆಲವು ಸಂದರ್ಭಗಳಲ್ಲಿ ಮಗುವಿನ ಸುತ್ತಲೂ ಇರುತ್ತದೆ. ಇದರ ಬಗ್ಗೆ ಆತಂಕ ಪಡಬೇಕಾದ ಅಗತ್ಯವಿಲ್ಲ. ಮಗುವನ್ನು ಸಂರಕ್ಷಿಸಲು ಈ ಪೊರೆ ಇರುತ್ತದೆ.

10. ಕೆಲವು ಶಿಶುಗಳ ಕೈಗಳು, ಭುಜಗಳು, ಬೆನ್ನುಮೋಳೆಯಂತಹ ಭಾಗಗಳಲ್ಲಿ ಕೂದಲಿಂದ ಜನಿಸುತ್ತಾರೆ. ಇದೂ ಕೂಡ ಸಹಜ. ಆತಂಕಪಡಬೇಕಾದ್ದ ಅಗತ್ಯವಿಲ್ಲ.

11. ಮಗು ಜನಿಸುವ ಸಂದರ್ಭದಲ್ಲಿ ಯೋನಿಯಿಂದ ಹೊರಗೆ ಬರಬೇಕಾಗಿರುತ್ತದ್ದಾರಿಂದ, ಆ ಸಮಯದಲ್ಲಿ ಯೋನಿ ಆಕಾರಕ್ಕೆ ಅನುಗುಣವಾಗಿ ಮಗುವಿನ ಆಕೃತಿ ಬದಲಾಗುತ್ತದೆ. ಆದರೆ ಕೆಲವು ದಿನಗಳ ಬಳಿಕ ಮಾಮೂಲಿ ಸ್ಥಿತಿಗೆ ಬರುತ್ತದೆ.

Comments are closed.