ಕರಾವಳಿ

ದೊಡ್ಡ ಪತ್ರೆಯಲ್ಲಿರುವ ಆರೋಗ್ಯಕರ ಗುಣಗಳು

Pinterest LinkedIn Tumblr

ಸಾಂಬಾರಾ ಬಳ್ಳಿ ಎಂದು ಕರೆಯಲ್ಪಡುವ ದೊಡ್ಡ ಪತ್ರೆಯನ್ನ ಕರಾವಳಿಯಲ್ಲಿ ಮನೆಮದ್ದಾಗಿ ಮತ್ತು ಅಡುಗೆಯಲ್ಲಿ ಬಳಸುತ್ತಾರೆ. ಇಷ್ಟೇ ಅಲ್ಲದೇ ಇನ್ನು ಹಲವು ಆರೋಗ್ಯಕರ ಪ್ರಯೋಜನಗಳು ಇದರಿಂದ ಸಿಗುತ್ತದೆ. ಏನೇನ್ ಲಾಭ..? ಇಲ್ಲಿದೆ ನೋಡಿ ಅದರ ಬಗ್ಗೆ ಮಾಹಿತಿ.

1.ದೊಡ್ಡಪತ್ರೆಯ ಎಲೆಯ ರಸಕ್ಕೆ ಜೇನುತುಪ್ಪ ಬೆರಸಿ ಸೇವಿಸುವುದರಿಂದ ಕೆಮ್ಮು ಮತ್ತು ಗಂಟಲು ನೋವಿಗೆ ಒಳ್ಳೆಯದು. ದೊಡ್ಡಪತ್ರೆಯ ಎಲೆಯ ಚಟ್ನಿ ಮಾಡಿ ಪ್ರತಿ ದಿನ ತಿನ್ನುವುದರಿಂದ ಮೂತ್ರಕೋಶದ ಕಲ್ಲುಗಳು ಕರಗುತ್ತದೆ. ಮಕ್ಕಳ ಅಜೀರ್ಣಕ್ಕೆ ದೊಡ್ಡಪತ್ರೆಯ ಎಲೆಯ ರಸಕ್ಕೆ ಜೇನುತುಪ್ಪ ಬೆರಸಿ ಕುಡಿಸುವುದರಿಂದ ಹೊಟ್ಟೆಯುಬ್ಬರ , ಹೊಟ್ಟೆನೋವು ಕಡಿಮೆಯಾಗುತ್ತದೆ. ಸಂಧಿವಾತದಿಂದ ಬಳಲುವವರು ದೊಡ್ಡಪತ್ರೆಯ ಎಲೆಯನ್ನು ಅರೆದು ಲೇಪಿಸಿಕೊಳ್ಳಬೇಕು.

2.ದೊಡ್ಡಪತ್ರೆಯ ಎಲೆಗಳನ್ನು ಅರೆದು ಅದನ್ನು ಹೆಣೆಗೆ ಲೇಪಿಸಿಕೊಳ್ಳುವುದರಿಂದ ತಲೆಭಾರ, ತಲೆನೋವು 10- 15 ನಿಮಿಷದಲ್ಲಿ ಶಮನವಾಗುತ್ತದೆ. ದೊಡ್ಡಪತ್ರೆಯ ಎಲೆಗಳಿಗೆ ಉಪ್ಪು ಸವರಿ ತಿನ್ನುವುದರಿಂದ ಮತ್ತು ದೊಡ್ಡಪತ್ರೆಯ ಎಲೆಯನ್ನು ಅರೆದು ರಸವನ್ನು ಮೈಗೆ ಹಚ್ಚಿಕೊಳ್ಳುವುದರಿಂದ ಮೈಮೆಲೆ ಪಿತ್ತದ ಗಂಧೆಗಳು ಕಡಿಮೆಯಾಗುತ್ತದೆ.

3.ತಾಜ ದೊಡ್ಡಪತ್ರೆಯ ಎಲೆಗಳ ರಸವನ್ನು 1 ಚಮಚೆ ಕುಡಿದರೆ ಭೇದಿಯಾಗುವುದು ಕಡಿಮೆಯಾಗುತ್ತದೆ. ಪ್ರತಿ ಒಂದು ಘಂಟೆಗೆ ಅರ್ಧ ಚಮಚೆ ದೊಡ್ಡಪತ್ರೆಯ ಎಲೆಯ ರಸ ಕುಡಿದಲ್ಲಿ ಭೇದಿ ನಿಯಂತ್ರಣಕ್ಕೆ ಬರುತ್ತದೆ. ಈ ಎಲೆಯಿಂದ ರಸ ತೆಗೆಯುವ ಮುನ್ನ ಅಡುಗೆ ಮಾಡಲು ಕಟ್ಟಿಗೆ ಒಲೆ ಉರಿಸಿದ ನೆಲದ ಮೇಲೆ ಎಲೆಗಳನ್ನು ಇಟ್ಟು ಬಾಡಿಸಿಕೊಳ್ಳುತ್ತಾರೆ.

4.ಕಟ್ಟಿಗೆ ಒಲೆ ಬಳಕೆಯಿಲ್ಲದ ಕಡೆ, ಎಲೆಗಳನ್ನು ಬಿಸಿಲಿನಲ್ಲಿ ಬಾಡಿಸಿ ಅಥವಾ ಸಣ್ಣ ಉರಿಯ ಮೇಲಿಟ್ಟು ಕಾಸಿದ ಪಾತ್ರೆಯ ಮೇಲೆ ಎಲೆಗಳನ್ನಿಟ್ಟು ಬಾಡಿಸಿಕೊಳ್ಳಬಹುದು. ಎಲೆಗಳನ್ನು ಬಾಡಿಸಿದರೆ ರಸವನ್ನು ಹಿಂಡಿಕೊಳ್ಳುವುದು ಸುಲಭವಾಗುತ್ತದೆ. ದೊಡ್ಡಪತ್ರೆ ಎಲೆಗಳನ್ನು ಕೆಮ್ಮು, ಗಂಟಲು ನೋವು, ಕಟ್ಟಿಕೊಂಡ ಮೂಗು, ಸೋಂಕುಗಳು, ಸಂಧಿವಾತ, ಜ್ವರ, ತೀವ್ರ ಉಬ್ಬಸ, ಬಿಕ್ಕಳಿಕೆ, ಕಫ, ಸೆಳವು, ಅಪಸ್ಮಾರ , ಚರ್ಮದ ಹುಣ್ಣುಗಳು, ಕೀಟದ ಕಡಿತ, ಚರ್ಮದ ಅಲರ್ಜಿ, ಗಾಯಗಳು, ಭೇದಿ ಹೀಗೆ ಅನೇಕ ರೋಗಗಳ ಚಿಕಿತ್ಸೆಗೆ ಸಾಂಪ್ರದಾಯಿಕ ಔಷಧಿಯಾಗಿ ಉಪಯೋಗಿಸುತ್ತಾರೆ.

5.ಜೊತೆಗೆ ಕ್ಯಾನ್ಸರ್ ನಿರ್ಮೂಲನೆಗೆ, ಕಿಡ್ನಿ ಆರೋಗ್ಯಕ್ಕಾಗಿ, ಜೀರ್ಣಶಕ್ತಿ ವೃದ್ಧಿಸಲು ಮತ್ತು ಯಕೃತ್ತಿನ ಆರೋಗ್ಯ ಸುಧಾರಿಸಲು ಸಹ ಈ ಎಲೆಗಳನ್ನು ಉಪಯೋಗಿಸುತ್ತಾರೆ. ತೊಳೆದು ಸ್ವಚ್ಛ ಮಾಡಿದ ದೊಡ್ಡಪತ್ರೆ ಎಲೆಗಳನ್ನು ನಿಧಾನವಾಗಿ ಜಗಿದು ತಿನ್ನಿ. ದೊಡ್ಡಪತ್ರೆ ಎಲೆ, ಒಣ ಶುಂಠಿ, ಕಾಳು ಮೆಣಸು, ಬೆಲ್ಲ ಮತ್ತು ತುಳಸಿ ಎಲೆಗಳನ್ನು ಉಪಯೋಗಿಸಿ ಕಷಾಯ ತಯಾರಿಸಿ ಕುಡಿಯಿರಿ. ಇದರಿಂದ ಕೆಮ್ಮು ಇಲ್ಲವಾಗುತ್ತದೆ. 5-6 ದೊಡ್ಡಪತ್ರೆ ಎಲೆಗಳನ್ನು ಸ್ಟೋವ್ ಅಥವಾ ಬಾಣಲೆಯಲ್ಲಿ ಬಾಡಿಸಿಕೊಂಡು ರಸವನ್ನು ಹಿಂಡಿ ತೆಗೆಯಿರಿ. ರಸದ ಅರ್ಧ ಭಾಗದಷ್ಟು ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿ ಸೇವಿಸಿ. ಚಿಕ್ಕ ಮಕ್ಕಳಿಗೆ ಇದು ಬಹಳ ಪರಿಣಾಮಕಾರಿ.

6.ಚರ್ಮದ ಸೋಂಕು ಮತ್ತು ಕೀಟದ ಕಡಿತ: ದೊಡ್ಡಪತ್ರೆ ಎಲೆಯನ್ನು ಕಿವುಚಿ ರಸ ತೆಗೆದು, ಚರ್ಮದ ಸೋಂಕು ಅಥವಾ ಕೀಟ ಕಡಿತದ ಜಾಗಕ್ಕೆ ಲೇಪಿಸಿ. ಇದರಿಂದ ಉರಿ, ಬಾವು ಮತ್ತು ತುರಿಕೆ ಕೂಡಲೇ ಕಡಿಮೆಯಾಗುತ್ತದೆ

Comments are closed.