ಕರಾವಳಿ

ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುವ ಹಿಂದಿರುವ ಸತ್ಯಾಂಶ.

Pinterest LinkedIn Tumblr

ಹಿಂದೂ ಸಂಪ್ರದಾಯದ ಪ್ರಕಾರ ವಧುವಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಹಾಕುತ್ತಾರೆ. ಎಲ್ಲರೂ ಮದುವೆಗೆ ಹೋಗಿ ವಧು-ವರರನ್ನು ಆಶೀರ್ವದಿಸಿ ಬರುತ್ತಾರೆಯೇ ಹೊರತು ಅಸಲಿಗೆ ತಾಳಿ ಕಟ್ಟುವಾಗ ಮೂರು ಗಂಟುಗಳನ್ನು ಯಾಕೆ ಹಾಕುತ್ತಾರೆಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಮೂರು ಗಂಟುಗಳ ಬಂಧನದಿಂದ ಒಂದಾದ ಯುವಜೋಡಿ ಒಟ್ಟಾಗಿ ನೂರು ವರ್ಷಗಳ ಕಾಲ ಬಾಳ ಬೇಕೆಂದು ಪಂಡಿತರು, ಹಿರಿಯರು ಆಶೀರ್ವದಿಸುತ್ತಾರೆ. ಬನ್ನಿ ಮೂರು ಗಂಟುಗಳನ್ನು ಹಾಕುವ ಹಿಂದಿರುವ ಆಂತರ್ಯವನ್ನು ತಿಳಿದುಕೊಳ್ಳೋಣ…

ಧರ್ಮೇಚ… ಧರ್ಮವನ್ನು ನನ್ನ ಮಡದಿಯೊಂದಿಗೆ ಆಚರಿಸುತ್ತೇನೆ .
ಅರ್ಥೇಚ… ಧನವನ್ನು ನನ್ನ ಮಡದಿಯೊಂದಿಗೆ ಅನುಭವಿಸುತ್ತೇನೆ.
ಕಾಮೇಚ… ಕೋರಿಕೆಗಳನ್ನು ನನ್ನ ಮಡದಿಯೊಂದಿಗೆ ತೀರಿಸಿಕೊಳ್ಳುತ್ತೇನೆ.

ಹೀಗೆ ವಾಗ್ಧಾನ ಮಾಡಿದ ನಂತರ ಮೂರು ಗಂಟುಗಳನ್ನು ವರ ಹಾಕುತ್ತಾನೆ ನಂತರ ಹಿರಿಯರು ಅಕ್ಷತೆ ಹಾಕಿ ನೂತನ ದಂಪತಿಗಳನ್ನು ಆಶೀರ್ವದಿಸುತ್ತಾರೆ.

Comments are closed.